ಪ್ರಧಾನಿ ಮೋದಿ ಮಿಷನ್ ಶಕ್ತಿ ಘೋಷಣೆ ನಂತರ ವಿವರಣೆ ಕೇಳಿದ ಚುನಾವಣಾ ಆಯೋಗ
ಪ್ರಧಾನಿ ಮೋದಿ ಮಿಷನ್ ಶಕ್ತಿ ಘೋಷಣೆ ನಂತರ ಅಚ್ಚರಿ ಎನ್ನುವಂತೆ ಈಗ ಚುನಾವಣಾ ಆಯೋಗ ಈ ಘೋಷಣೆ ಹಿಂದಿನ ತುರ್ತಿನ ವಿಚಾರವಾಗಿ ಸರ್ಕಾರದಿಂದ ವಿವರಣೆ ಕೋರಿದೆ ಎಂದು ಮೂಲಗಳು ತಿಳಿಸಿವೆ
ನವದೆಹಲಿ: ಪ್ರಧಾನಿ ಮೋದಿ ಮಿಷನ್ ಶಕ್ತಿ ಘೋಷಣೆ ನಂತರ ಅಚ್ಚರಿ ಎನ್ನುವಂತೆ ಈಗ ಚುನಾವಣಾ ಆಯೋಗ ಈ ಘೋಷಣೆ ಹಿಂದಿನ ತುರ್ತಿನ ವಿಚಾರವಾಗಿ ಸರ್ಕಾರದಿಂದ ವಿವರಣೆ ಕೋರಿದೆ ಎಂದು ಮೂಲಗಳು ತಿಳಿಸಿವೆ
ಪ್ರಧಾನಿ ಮೋದಿ ಇಂದು ಭಾರತ ಅಂತರಿಕ್ಷದಲ್ಲಿನ ಲೈವ್ ಉಪಗ್ರಹವನ್ನು ಹೊಡೆದುರುಳಿಸಿರುವ ಕುರಿತಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ತಿಳಿಸಿದ್ದರು. ಇದಾದ ಬೆನ್ನಲ್ಲೇ ಕಾಂಗ್ರೆಸ್, ಸಮಾಜವಾದಿ, ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಇದನ್ನು ರಾಜಕೀಯ ಪ್ರೇರಿತ ನಡೆ ಎಂದು ಹೇಳಿಕೆ ನೀಡಿದ್ದವು.
ಇದಾದ ಬೆನ್ನಲ್ಲೇ ಈಗ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ಘೋಷಣೆಯ ವಿಚಾರವಾಗಿ ಈಗ ವಿಚಾರಣೆಗೆ ಚುನಾವಣಾ ಆಯೋಗ ಮುಂದಾಗಿದೆ.ರಾಷ್ಟ್ರದ ಭದ್ರತೆ ತುರ್ತಿನ ವಿಚಾರವಾಗಿ ಈಗ ಸಂಬಂಧ ಪಟ್ಟ ಈ ಬೆಳವಣಿಗೆ ವಿಚಾರವಾಗಿ ಸಮಗ್ರ ತನಿಖೆ ಮುಂದಾಗಲಿದೆ ಎನ್ನಲಾಗಿದೆ.
ಚುನಾವಣಾ ಆಯೋಗದ ಮೂಲಗಳು ಹೇಳುವಂತೆ ಪ್ರಧಾನಿ ಭಾಷಣದ ಹುಟ್ಟು ಹಾಗೂ ಅದಕ್ಕಾಗಿ ಪ್ರಧಾನಿ ಕಚೇರಿ ಮತ್ತು ರಕ್ಷಣಾ ಸಚಿವಾಲಯದ ನಡುವೆ ನಡೆದ ಬೆಳವಣಿಗೆಗಳನ್ನು ಆಯೋಗ ಪರಿಶೀಲಿಸಲಿದೆ ಎನ್ನಲಾಗಿದೆ.ಇದೇ ವೇಳೆ ಪ್ರಧಾನಿ ಭಾಷಣವನ್ನು ಈಗ ಚುನಾವಣಾ ಆಯೋಗ ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಲಿದೆ ಎನ್ನಲಾಗಿದೆ.