ನವದೆಹಲಿ:  ಖ್ಯಾತ ವಕೀಲ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ಜೆಠ್ಮಲಾನಿ ಅವರು ತಮ್ಮ 95 ನೇ ವಯಸ್ಸಿನಲ್ಲಿ ಭಾನುವಾರದಂದು ತಮ್ಮ ದೆಹಲಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರಿಗೆ ಮಗ ಮತ್ತು ಮಗಳು ಇದ್ದಾರೆ.


COMMERCIAL BREAK
SCROLL TO CONTINUE READING

ಜೆಠ್ಮಲಾನಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 'ಹಿರಿಯ ವಕೀಲ ರಾಮ್ ಜೆಠ್ಮಲಾನಿ ಜಿ ಅವರ ನಿಧನದಿಂದ ತೀವ್ರ ದುಃಖಿತವಾಗಿದೆ. ಸ್ವತಃ ಅವರು ಒಂದು ಸಂಸ್ಥೆಯಾಗಿದ್ದರು, ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕ್ರಿಮಿನಲ್ ಕಾನೂನನ್ನು ರೂಪಿಸಿದರು. ಅವರ ಅನುಪಸ್ಥಿತಿಯನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಮತ್ತು ಅವರ ಹೆಸರು ಕಾನೂನು ಇತಿಹಾಸದಲ್ಲಿ ಸುವರ್ಣ ಪದಗಳಲ್ಲಿ ಬರೆಯಲಾಗುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.



ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಂತಾಪ ಸೂಚಿಸಿ. "ನನ್ನ ಸ್ನೇಹಿತ ಮತ್ತು ವೈರಿಯಾಗಿದ್ದ ಜೆಥ್ಮಲಾನಿ ಇಂದು 95 ವರ್ಷ ವಯಸ್ಸಿನಲ್ಲಿ ನಿಧನರಾದರು. ವಿದಾಯ ಗೆಳೆಯ " ಎಂದು ಕಂಬನಿ ಮಿಡಿದಿದ್ದಾರೆ.  


ಸೆಪ್ಟೆಂಬರ್ 14, 1923 ರಂದು ಸಿಂಧ್ ಪ್ರಾಂತ್ಯದ ಶಿಖಾರ್‌ಪುರದಲ್ಲಿ ಜನಿಸಿದ ರಾಮ್ ಜೆಠ್ಮಲಾನಿ ಅವರು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಲ್ಲಿ ಒಬ್ಬರಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಕ್ಯಾಬಿನೆಟ್‌ನಲ್ಲಿ ಕಾನೂನು ಸಚಿವರು ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.



75 ವರ್ಷಗಳಿಗಿಂತ ಹೆಚ್ಚು ಕಾಲ ಕಾನೂನು ವೃತ್ತಿಯನ್ನು ಮಾಡಿದ ನಂತರ, ಜೆಥ್ಮಲಾನಿ ಎರಡು ವರ್ಷಗಳ ಹಿಂದೆಯೇ ನಿವೃತ್ತಿ ಘೋಷಿಸಿದ್ದರು. ಆದಾಗ್ಯೂ, ಅವರು ಕರ್ನಾಟಕ ವಿಧಾನಸಭಾ ಚುನಾವಣೆ 2018 ರ ನಂತರ ಭಾರತದ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ಖುದ್ದಾಗಿ ಹಾಜರಾಗಿ, ಅಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಲು ಬಯಸಿದ್ದರು.