ಅಮೃತಸರ: ದೀಪಾವಳಿ ಹಬ್ಬಕ್ಕೆ ತಮ್ಮ ಕಂಪನಿ ಬೋನಸ್ ನೀಡಿದೆ ಎಂದು ದುಪ್ಪಟ್ಟು ಸಂಬಳ ಪಡೆದು ಖುಷಿಯಲ್ಲಿದ್ದ ಉದ್ಯೋಗಿಗಳಿಗೆ ಇದೀಗ ಭಾರೀ ನಿರಾಶೆಯಾಗಿದೆ. 


COMMERCIAL BREAK
SCROLL TO CONTINUE READING

ಪಂಜಾಬ್ ಸರ್ಕಾರಿ ಖಜಾನೆಯ ಸಾಫ್ಟ್ ವೇರ್'ನಲ್ಲಾದ ಕೆಲವು ಸಮಸ್ಯೆಗಳಿಂದಾಗಿ ರಾಜ್ಯದ ಹಲವು ನೌಕರರು ದುಪ್ಪಟ್ಟು ವೇತನ ಪಡೆದ ಘಟನೆ ನಡೆದಿದೆ. ಅಮೃತಸರ ಜಿಲ್ಲೆಯಲ್ಲಿ 40 ರಿಂದ 50 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ನೌಕರರ ಖಾತೆಗಳಿಗೆ ಜಮಾ ಆಗಿತ್ತು. ತಮ್ಮ ಖಾತೆಗೆ ನಿಗದಿತ ವೇತನಕ್ಕಿಂತ ಹೆಚ್ಚು ಹಣ ಜಮಾ ಆದದ್ದು ಕಂಡು ನೌಕರರು ದೀಪಾವಳಿ ಬೋನಸ್ ಎಂದು ತಿಳಿದು ಸಂಭ್ರಮಿಸಿದ್ದಾರೆ. ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. 


ಏಕೆಂದರೆ, ಪಂಜಾಬ್ ಸರ್ಕಾರದ ಸಾಫ್ಟ್ ವೇರ್ ನಲ್ಲಿ ಉಂಟಾದ ಕೆಲವು ತಾಂತ್ರಿಕ ದೋಷದಿಂದಾಗಿ ಈ ಯಡವಟ್ಟಾಗಿದ್ದು, ಕೂಡಲೇ ಸರಕಾರ ಎಚ್ಚೆತ್ತು, ಹೆಚ್ಚಿನ ಸಂಬಳವನ್ನು ಹಿಂಪಡೆದಿದೆ ಎಂದು ತಿಳಿದುಬಂದಿದೆ.