ನವದೆಹಲಿ:  Senior Citizen SCheme - ಹಿರಿಯ ನಾಗರಿಕರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇದರಿಂದ ಇನ್ಮುಂದೆ ಹಿರಿಯ ನಾಗರಿಕರಿಗೆ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರವು ಹಿರಿಯ ನಾಗರಿಕರಿಗಾಗಿ ಉದ್ಯೋಗ ವಿನಿಮಯ (Employment Exchange)ಕೇಂದ್ರವನ್ನು ತೆರೆಯಲು ಯೋಜನೆ ರೂಪಿಸಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಅವರ ಅನುಭವವನ್ನು ಆಧರಿಸಿ ನೌಕರಿ ನೀಡಲಾಗುವುದು. ಈ ವಿನಿಮಯವು ಅಕ್ಟೋಬರ್ 1 ರಿಂದ ಅಂದರೆ ಶುಕ್ರವಾರದಿಂದ ಆರಂಭವಾಗಲಿದೆ.


COMMERCIAL BREAK
SCROLL TO CONTINUE READING

ಹಿರಿಯ ನಾಗರಿಕರಿಗೆ ಸುವರ್ಣಾವಕಾಶ
ಈ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಿರಿಯ ನಾಗರಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಮತ್ತು ಉದ್ಯೋಗವನ್ನು ಹುಡುಕಬಹುದು. ಹಿರಿಯ ನಾಗರಿಕರಿಗಾಗಿ ದೇಶದಲ್ಲಿ ಮೊದಲ ಬಾರಿಗೆ ಇಂತಹ ಉದ್ಯೋಗ ವಿನಿಮಯವನ್ನು ತೆರೆಯಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ. ಇದಕ್ಕಾಗಿ ವಿಶೇಷ ಪೋರ್ಟಲ್ ಆರಂಭಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಸರ್ಕಾರ ಸಹಾಯವಾಣಿ ಕೂಡ ಆರಂಭಿಸಿದೆ.


ತಕ್ಷಣ ಹೆಸರನ್ನು ನೊಂದಾಯಿಸಿಕೊಳ್ಳಿ
ದೇಶಾದ್ಯಂತ 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಉದ್ಯೋಗ ಮಾಡಲು ಬಯಸುವ ಅನೇಕ ಜನರಿದ್ದಾರೆ. ನೀವು ಕೂಡ ಈ ವರ್ಗಕ್ಕೆ ಸೇರಿದ್ದರೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (MoSJ & E) ನೇತೃತ್ವದಲ್ಲಿ ತೆರೆಯಲಾಗುತ್ತಿರುವ 'ಸಿನಿಯರ್ ಏಬಲ್ ಸಿಟಿಜನ್ಸ್ ಫಾರ್ ರೀಎಂಪ್ಲಾಯ್ಮೆಂಟ್ ಇನ್ ಡಿಗ್ನಿಟಿ' (Sacred) ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ತಕ್ಷಣವೇ ನಿಮ್ಮನ್ನು ನೋಂದಾಯಿಸಿಕೊಳ್ಳಿ.  ಇಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಸುಲಭವಾಗಿ ಕೆಲಸ ಪಡೆಯಬಹುದು.


ಆಂಗ್ಲ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇದೊಂದು ಸಂವಾದಾತ್ಮಕ ವೇದಿಕೆಯಾಗಿದ್ದು, ಇದರಲ್ಲಿ ಸ್ಟೆಕ್ ಹೋಲ್ಡರ್ ಗಳು ಪರಸ್ಪರ ಭೇಟಿಯಾಗುತ್ತಾರೆ ಮತ್ತು ಉದ್ಯೋಗದ ಬಗ್ಗೆ ಪರಸ್ಪರ ಚರ್ಚಿಸಲಿದ್ದಾರೆ. ಹಿರಿಯ ನಾಗರಿಕರಿಗೆ ಉದ್ಯೋಗ ಪಡೆಯಲು ಸಹಾಯ ಮಾಡಲು CII, Ficci ಮತ್ತು Assocham ನಂತಹ ಉದ್ಯಮದ ಚೇಂಬರ್‌ಗಳಿಗೆ ಸಚಿವಾಲಯವು ಪತ್ರವೊಂದನ್ನು ಬರೆದಿದೆ.


ಪೋರ್ಟಲ್ ನಲ್ಲಿ ಸಿಗಲಿದೆ ಎಲ್ಲಾ ಮಾಹಿತಿ (Senior Citizen Scheme)
ಈ ಪೋರ್ಟಲ್‌ನಲ್ಲಿ, ಹಿರಿಯ ನಾಗರಿಕರು ಅರ್ಜಿಯೊಂದಿಗೆ ತಮ್ಮ ಶಿಕ್ಷಣ, ಅನುಭವ, ಕೌಶಲ್ಯ, ಆಸಕ್ತಿಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಆದರೆ, ಈ ವಿನಿಮಯವು ಉದ್ಯೋಗದ ಖಾತರಿಯಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಹಿರಿಯ ನಾಗರಿಕರ ಅರ್ಹತೆಗಳು ಮತ್ತು ಅಗತ್ಯತೆಗಳ ಆಧಾರದ ಮೇಲೆ ಹಿರಿಯರನ್ನು ನೇಮಿಸಿಕೊಳ್ಳುವುದು ಕಂಪನಿಗಳು ಮತ್ತು ಉದ್ಯೋಗದಾತರಿಗೆ ಬಿಟ್ಟದ್ದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


ಇದನ್ನೂ ಓದಿ-ಆಭರಣ ಪ್ರಿಯರಿಗೆ ಸಿಹಿ ಸುದ್ದಿ : 100 ರೂಪಾಯಿಯಲ್ಲಿ ಸಿಗಲಿದೆ ಚಿನ್ನ! 


ದೇಶದಲ್ಲಿ ನಿವೃತ್ತರಾಗಿರುವ ಹಿರಿಯ ನಾಗರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ ಈ ಕೆಲಸ ಮಾಡಲು ಬಯಸುವ ಅನೇಕ ಜನರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಇಂತಹ ವಿನಿಮಯ ಕೇಂದ್ರವು ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಒಂದು ಅಂದಾಜಿನ ಪ್ರಕಾರ, 2001 ರಲ್ಲಿ 76 ಮಿಲಿಯನ್‌ಗೆ ಹೋಲಿಸಿದರೆ 2011 ರಲ್ಲಿ ಹಿರಿಯ ನಾಗರಿಕರ ಸಂಖ್ಯೆ 10.4 ಕೋಟಿಗೆ ಏರಿಕೆಯಾಗಿದೆ. 2050 ರ ವೇಳೆಗೆ, ದೇಶದಲ್ಲಿ ಹಿರಿಯ ನಾಗರಿಕರ ಪ್ರಮಾಣವು ಶೇ.20ಕ್ಕಿಂತ ಹೆಚ್ಚಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ-Indian Army: Uri ಮಾದರಿಯ ದೊಡ್ಡ ಕೃತ್ಯಕ್ಕೆ ಸಂಚು ರೂಪಿಸಿದ್ದರು ಉಗ್ರರು, ವಿಡಿಯೋ ಬಿಡುಗಡೆ ಮಾಡಿ ಬಣ್ಣ ಬಯಲು ಮಾಡಿದ ಸೇನೆ


ಈ ಕೆಳಗೆ ನೀಡಲಾಗಿರುವ ಹೆಲ್ಪ್ ಲೈನ್ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ
ಹಿರಿಯ ನಾಗರಿಕರಿಗಾಗಿ 'ಎಲ್ಡರ್ ಲೈನ್' (Elder Line Number) ಎಂದು ಕರೆಯಲಾಗುವ 14567 ಟೋಲ್ ಫ್ರೀ ಸಹಾಯವಾಣಿಯನ್ನು ಸರ್ಕಾರವು ದೇಶಾದ್ಯಂತ ಆರಂಭಿಸಿದೆ. ಈ ದೂರವಾಣಿ ಸಂಪರ್ಕದಲ್ಲಿ, ಹಿರಿಯ ನಾಗರಿಕರು ಪಿಂಚಣಿ, ಭಾವನಾತ್ಮಕ ಬೆಂಬಲ, ಕಾನೂನು ಸಮಸ್ಯೆಗಳು, ಕಿರುಕುಳದ ವಿರುದ್ಧ ಸಹಾಯ, ಸೂರು ಕಳೆದುಕೊಂಡಾಗಲೂ ಕೂಡ ಸಹಾಯ ಪಡೆಯಬಹುದು.


ಇದನ್ನೂ ಓದಿ-Benglauru: ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.