Indian Army: Uri ಮಾದರಿಯ ದೊಡ್ಡ ಕೃತ್ಯಕ್ಕೆ ಸಂಚು ರೂಪಿಸಿದ್ದರು ಉಗ್ರರು, ವಿಡಿಯೋ ಬಿಡುಗಡೆ ಮಾಡಿ ಬಣ್ಣ ಬಯಲು ಮಾಡಿದ ಸೇನೆ

Indian Army Released Video Of Terrorist Caught From Uri: ಸರ್ಜಿಕಲ್ ಸ್ಟ್ರೈಕ್ ನ 5ನೇ ವರ್ಚಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆ ಉರಿ ದಾಳಿಯಂತಹ ಮತ್ತೊಂದು ದಾಳಿಯ ಬಣ್ಣ ಬಯಲು ಮಾಡಿರುವುದಾಗಿ ಹೇಳಿಕೊಂಡಿದೆ.

Written by - Nitin Tabib | Last Updated : Sep 29, 2021, 02:00 PM IST
  • ಉಗ್ರನ ಲೈವ್ ಒಪ್ಪಿಗೆ
  • ವಿಚಾರಣೆಯ ವೇಳೆ ದೊಡ್ಡ ಮಾಹಿತಿ ಬಹಿರಂಗ.
  • ಉರಿಯಂತಹ ದಾಳಿ ನಡೆಸುವ ಸಂಚು ಬಹಿರಂಗ.
Indian Army: Uri ಮಾದರಿಯ ದೊಡ್ಡ ಕೃತ್ಯಕ್ಕೆ ಸಂಚು ರೂಪಿಸಿದ್ದರು ಉಗ್ರರು, ವಿಡಿಯೋ ಬಿಡುಗಡೆ ಮಾಡಿ ಬಣ್ಣ ಬಯಲು ಮಾಡಿದ ಸೇನೆ title=
Indian Army Released Video Of Terrorist Caught From Uri (Image Courtesy - Zee News))

Indian Army Released Video Of Terrorist Caught From Uri: ಉರಿಯಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕ ಅಲಿ ಬಾಬರ್, ಭಾರತೀಯ ಸೇನೆಯ  ವಿಚಾರಣೆಯ ವೇಳೆ  ಪಾಕಿಸ್ತಾನ ಸೇನೆಯಿಂದ ತರಬೇತಿ ಪಡೆದ ನಂತರ, ಕಾಶ್ಮೀರದಲ್ಲಿ ದೊಡ್ಡ ದಾಳಿ ನಡೆಸಲು ಬಂದಿರುವುದಾಗಿ ಹೇಳಿದ್ದಾರೆ. ಈ ಭಯೋತ್ಪಾದಕನನ್ನು ನಿನ್ನೆ ಭಾರತೀಯ ಸೇನೆಯು ತನ್ನ ವಶಕ್ಕೆ ಪಡೆದಿದೆ ಎಂಬುದು ಇಲ್ಲಿ ಗಮನಾರ್ಹ.

ವಿಡಿಯೋ ಜಾರಿಗೊಳಿಸಿದ ಭಾರತೀಯ ಸೇನೆ (Army News)
ಉರಿಯಲ್ಲಿ ಸಿಕ್ಕಿಬಿದ್ದ ಉಗ್ರ ಅಲಿ ಬಾಬರ್ ಗೆ ಸಂಬಂಧಿಸಿದ ವಿಡಿಯೋವೊಂದನ್ನು ಭಾರತೀಯ ಸೇನೆ (Indian Army) ಬಿಡುಗಡೆಗೊಳಿಸಿದೆ. ಈ ವಿಡಿಯೋದಲ್ಲಿ ಉಗ್ರ ಅಲಿ ಬಾಬರ್ (Terrorist Ali Babar), ಪಾಕಿಸ್ತಾನ ತನ್ನನ್ನು ಕಾಶ್ಮೀರಕ್ಕೆ (Jammu-Kashmir)ಉರಿಯಂತಹ ದಾಳಿ (Uri Attack) ನಡೆಸುವ ಸಲುವಾಗಿ ಕಳುಹಿಸಿದೆ ಎಂದು ಹೇಳುತ್ತಿದ್ದಾನೆ. ಅಷ್ಟೇ ಅಲ್ಲ ಪಾಕ್ ಸೇನೆ ತನಗೆ ತರಬೇದಿಯನ್ನೂ ಕೂಡ ನೀಡಿದೆ ಎದು ಉಗ್ರ ಹೇಳುತ್ತಿದ್ದಾನೆ.

ಇದನ್ನೂ ಓದಿ-Benglauru: ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್

ಭಾರತೀಯ ಯೋಧರ ಕರಾಮತ್ತು
ಸೆಪ್ಟೆಂಬರ್ 18 ರಂದು, ನಿಯಂತ್ರಣ ರೇಖೆಯ  (LOC) ಉರಿ ಸೆಕ್ಟರ್‌ನಲ್ಲಿ ಸೇನೆಯು ಭಯೋತ್ಪಾದಕರ ಒಳನುಸುಳುವಿಕೆಯನ್ನು ವಿಫಲಗೊಳಿಸಿತ್ತು. ಪಾಕಿಸ್ತಾನದಿಂದ ಈ ಒಳನುಸುಳುವಿಕೆಯಲ್ಲಿ 6 ಭಯೋತ್ಪಾದಕರು ಭಾಗಿಯಾಗಿದ್ದರು. ಭಾರತೀಯ ಸೇನೆಯ ಸೈನಿಕರು ಅವರಿಗೆ ಸವಾಲೋಡ್ಡಿದಾಗ, 4 ಭಯೋತ್ಪಾದಕರು ಮತ್ತೆ ಪಾಕಿಸ್ತಾನದ ಗಡಿಯಲ್ಲಿ ಓಡಿಹೋಗಿದ್ದಾರೆ. ಈ ಸಮಯದಲ್ಲಿ, ಇಬ್ಬರು ಭಯೋತ್ಪಾದಕರು ಭಾರತದ ಗಡಿಯನ್ನು ಪ್ರವೇಶಿಸಿದ್ದರು. ಈ ಇಬ್ಬರನ್ನು ಹುಡುಕಲು, ಸೇನೆಯು LOC ನಲ್ಲಿ ಕೊಂಬಿಂಗ್ ಕಾರ್ಯಾಚರಣೆಯನ್ನು ನಡೆಸಿತ್ತು. 

ಇದನ್ನೂ ಓದಿ-ಪಂಜಾಬ್ ಕಾಂಗ್ರೆಸ್ ಗೆ ಬಿಗ್ ಶಾಕ್!, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

ಸೆಪ್ಟೆಂಬರ್ 25 ರಂದು ಭಾರತೀಯ ಸೇನೆಯು ಈ ಇಬ್ಬರು ಭಯೋತ್ಪಾದಕರನ್ನು ಉರಿಯ ಸಲಾಮಾಬಾದ್ ನಲ್ಲಿರುವ ಚರಂಡಿಯೊಂದರ ಬಳಿ ಸುತ್ತುವರೆದಿದ್ದರು. ತಮ್ಮನ್ನು ಸುತ್ತುವರಿದಿದ್ದನ್ನು ನೋಡಿ, ಇಬ್ಬರು ಭಯೋತ್ಪಾದಕರು ಭಾರತೀಯ ಸೈನಿಕರ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದರು. ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಜವಾನ ಗಾಯಗೊಂಡಿದ್ದಾನೆ. ಆದರೆ 26 ಸೆಪ್ಟೆಂಬರ್ ಬೆಳಗ್ಗೆ, ಭಾರತೀಯ ಸೇನೆ ಓರ್ವ ಭಯೋತ್ಪಾದಕನನ್ನು ಮಟ್ಟಹಾಕಿದ್ದರು.  ತನ್ನ ಸಹಚರನ ಸಾವಿನಿಂದ ಭಯಭೀತನಾದ ಮತೊರ್ವ ಭಯೋತ್ಪಾದಕ ಭಾರತೀಯ ಸೇನೆಯ ಮುಂದೆ ಶರಣಾಗುವ ಪ್ರಸ್ತಾವನೆ ಇಟ್ಟಿದ್ದ. ಅದರ ನಂತರ ಭಾರತೀಯ ಸೇನೆಯ 'ಆಪರೇಷನ್ ಬಲವಾನ್' ಅನ್ನು ಮುನ್ನಡೆಸುತ್ತಿದ್ದ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಮುಷ್ತಾಕ್ ಭಯೋತ್ಪಾದಕನ ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದರು.

ಇದನ್ನೂ ಓದಿ-ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಉಡುಗೊರೆ ನೀಡಿದ PM Modi

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News