UP Ladies Police Encounter : ನವರಾತ್ರಿಯ ಸಮಯದಲ್ಲಿ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ತಮ್ಮ ಉಗ್ರ ಸ್ವರೂಪವನ್ನು ತೋರಿಸಿದ್ದಾರೆ. ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ,  ದರೋಡೆಕೋರರು, ಗೂಂಡಾಗಳು,  ಮಾಫಿಯಾದಲ್ಲಿ ತೊಡಗಿದ್ದವರ ಹುಟ್ಟಡಗಿಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ನೂರಾರು ಎನ್‌ಕೌಂಟರ್‌ಗಳು ನಡೆದಿವೆ. ಆದರೆ, ಯುಪಿಯಲ್ಲಿ ಕ್ರಿಮಿನಲ್ ಒಬ್ಬನನ್ನು ಮಹಿಳಾ ಪೊಲೀಸರು ಎನ್‌ಕೌಂಟರ್ ಮಾಡಿರುವುದು ಇದೇ ಮೊದಲು. ಎಸ್ಪಿ ಧವಲ್ ಜೈಸ್ವಾಲ್ ಅವರ ಸೂಚನೆಯ ಮೇರೆಗೆ ಬರವಪಟ್ಟಿ ಪೊಲೀಸ್ ಠಾಣೆಯ ಮಹಿಳಾ ಎಸ್‌ಒ ಮತ್ತು ಅವರ 4 ಮಹಿಳಾ ಪೊಲೀಸರು ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದರು. ಇಮಾಮುಲ್ ಮೇಲೆ 25,000 ರೂಪಾಯಿ ಬಹುಮಾನವನ್ನು ಕೂಡಾ ಘೋಷಿಸಲಾಗಿತ್ತು. ಇದೀಗ, ಇಮಾಮುಲ್ ನನ್ನು ಲೇಡಿಸ್ ಪೋಲೀಸ್ ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದಾರೆ. ಎನ್ ಕೌಂಟರ್ ವೇಳೆ ಇಮಾಮುಲ್ ಕಾಲಿಗೆ ಗುಂಡು ತಗುಲಿದೆ.


COMMERCIAL BREAK
SCROLL TO CONTINUE READING

ಮಹಿಳಾ ಪೊಲೀಸರ ಮೊದಲ ಎನ್ಕೌಂಟರ್ : 
ಬಂಧಿತ ಕ್ರಿಮಿನಲ್ ಇಮಾಮುಲ್ ವಿರುದ್ಧ ಕುಶಿನಗರ ಮತ್ತು ಸಂತ ಕಬೀರನಗರದಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ರಾಮ್‌ಕೋಲಾ ಪೊಲೀಸ್ ಠಾಣೆಯ ಮೆಹದಿಗಂಜ್‌ನ ಅಮದರಿಯಾ ಕಾಲುವೆ ಬಳಿ ಕ್ರಿಮಿನಲ್ ಇಮಾಮುಲ್ ಅನ್ನು ಮಹಿಳಾ ಪೊಲೀಸರು ಸುತ್ತುವರೆದರು  ಎನ್‌ಕೌಂಟರ್ ನಡೆಸಿ ಬಂಧಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಕುಶಿನಗರದಲ್ಲಿ ಲೇಡಿಸ್ ಪೊಲೀಸರು ನಡೆಸಿದ ಈ ಎನ್‌ಕೌಂಟರ್ ಚರ್ಚೆಯ ವಿಷಯವಾಗಿದೆ. 


ಇದನ್ನೂ ಓದಿ : Daily GK Quiz: ಯಾವ ತರಕಾರಿಯನ್ನು ದೇಸಿ ಮಟನ್ ಎಂದು ಕರೆಯಲಾಗುತ್ತದೆ?


ಅಕ್ರಮ ಪಿಸ್ತೂಲ್‌ನೊಂದಿಗೆ ಸಿಕ್ಕಿಬಿದ್ದ ಕ್ರಿಮಿನಲ್: 
ಯುಪಿಯಲ್ಲಿ ಮೊದಲ ಬಾರಿಗೆ  ಮಹಿಳಾ  ಪೊಲೀಸರು ಎನ್‌ಕೌಂಟರ್ ನಡೆಸಿ, ಯಶಸ್ವಿಯಾಗಿದ್ದಾರೆ. ಕ್ರಿಮಿನಲ್ ಇಮಾಮುಲ್‌ನಿಂದ ಕಂಟ್ರಿ ಪಿಸ್ತೂಲ್ ಮತ್ತು ಜೀವಂತ ಕಾಟ್ರಿಡ್ಜ್‌ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಪಾತಕಿ ಇಮಾಮುಲ್‌ಗಾಗಿ ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 


ಮಹಿಳಾ ಪೋಲೀಸರು ಯಶಸ್ವಿಗೆ ಸನ್ಮಾನ : 
ಯುಪಿ ಮಹಿಳಾ ಪೊಲೀಸರ ಈ ಯಶಸ್ಸಿಗೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ. ಎಡಿಜಿ ಅಖಿಲ್ ಕುಮಾರ್ ಅವರು ಕುಶಿನಗರ ಎಸ್ಪಿ ತಂಡಕ್ಕೆ ಪ್ರಶಸ್ತಿ ಪತ್ರ ನೀಡಲಿದ್ದಾರೆ. ಬರ್ವಪಟ್ಟಿ ಎಸ್‌ಎಚ್‌ಒ ಸುಮನ್ ಸಿಂಗ್ ಮತ್ತು ತಂಡಕ್ಕೆ ಪ್ರಶಸ್ತಿ ಪತ್ರ ನೀಡಲಾಗುವುದು. ಇದಲ್ಲದೆ, SWAT ಪ್ರಭಾರಿ, ಎಸ್‌ಎಚ್‌ಒ ರಾಮಕೋಲಾ, ಪದ್ರೌನಾ ಮತ್ತು ಖಡ್ಡಾ ಅವರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. 


ಇದನ್ನೂ ಓದಿ : ಒಡಿಶಾದ ನೂತನ ರಾಜ್ಯಪಾಲರಾಗಿ ರಘುಬರ್ ದಾಸ್, ತ್ರಿಪುರಾದ ರಾಜ್ಯಪಾಲರಾಗಿ ಇಂದ್ರ ಸೇನಾ ರೆಡ್ಡಿ ನೇಮಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.