EPF ವರ್ಗಾವಣೆ ಗೆ ಇನ್ನು ಸುಲಭ ; ಆನ್ ಲೈನ್ ನಲ್ಲಿ ಖಾತೆದಾರನೇ ಅಪ್ ಡೇಟ್ ಮಾಡಬಹುದು ಡೇಟ್ ಆಫ್ ಎಕ್ಸಿಟ್
ಯಾವುದೇ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ, ನೌಕರರ ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ನೌಕರರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲಿಯವರೆಗೆ ಉದ್ಯೋಗಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾನೋ, ಅಲ್ಲಿವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ.
ದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆದಾರರ ಪ್ರಮುಖ ಸಮಸ್ಯೆಯನ್ನು ಕೊನೆಗೊಳಿಸಿದೆ. ಈಗ, ಪಿಎಫ್ ಖಾತೆ ಹೊಂದಿರುವವರು, ತಮ್ಮ ಕೆಲಸವನ್ನು ಬೇರೆ ಕಂಪನಿಗೆ ಬದಲಾಯಿಸುವಾಗ ಆನ್‌ಲೈನ್ ನಲ್ಲಿ (Online) ನಿರ್ಗಮನ ದಿನಾಂಕವನ್ನು ಅಪ್ ಡೇಟ್ ಮಾಡಲು ಸಾಧ್ಯವಾಗುತ್ತದೆ. ಈ ಮೊದಲು date of exit ಅಪ್ ಡೇಟ್ ಮಾಡುವ ಹಕ್ಕು ಕೇವಲ ಕಂಪನಿಯ ಬಳಿ ಮಾತ್ರ ಇತ್ತು. ಇದರಿಂದ ಖಾತೆದಾರರು ಕೆಲಸ ಬದಲಾಯಿಸುವ ಸಂದರ್ಭಗಳಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಉದ್ಯೋಗಿಗಳು ಎದುರಿಸುತ್ತಿದ್ದ ಸಮಸ್ಯೆಗೆ ಈಗ ಮುಕ್ತಿ :
ಯಾವುದೇ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ, ನೌಕರರ (Employees) ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ನೌಕರರ ಪಿಎಫ್ (EPF) ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲಿಯವರೆಗೆ ಉದ್ಯೋಗಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾನೋ, ಅಲ್ಲಿವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಉದ್ಯೋಗಿ ಕೆಲಸವನ್ನು ಬಿಟ್ಟು ಬೇರೆ ಕಂಪನಿಗೆ ಹೋದಾಗ, ಹೆಚ್ಚಿನ ಸಂದರ್ಭಗಳಲ್ಲಿ ಹಳೆಯ ಕಂಪನಿಯು (Company) ಮಾಹಿತಿಯನ್ನು ಅಪ್ ಡೇಟ್ ಮಾಡಲು ಉದ್ಯೋಗಿಯೊಂದಿಗೆ ಸಹಕರಿಸುವುದಿಲ್ಲ. ಇದರಿಂದ ಉದ್ಯೋಗಿಗಳು ಕೆಲ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಈಗ ಸಮಸ್ಯೆಗೆ ಕೇಂದ್ರ ಸರ್ಕಾರ (Central government) ಪರಿಹಾರ ಸೂಚಿಸಿದೆ. ಡೇಟ್ ಆಫ್ ಎಕ್ಸಿಟನ್ನು ಅಪ್ ಡೇಟ್ ಮಾಡುವ ಹಕ್ಕನ್ನು ಖಾತೆದಾರರಿಗೆ (Account holder) ನೀಡಿದೆ.
ಇದನ್ನೂ ಓದಿ : LPG Gas Cylinder - ದುಬಾರಿ LPG Cylinder ನಿಂದ ನೆಮ್ಮದಿ, ಈ ರೀತಿ ಸಿಲಿಂಡರ್ ಬುಕ್ ಮಾಡಿ ಹಣ ಉಳಿತಾಯ ಮಾಡಿ
ನಿರ್ಗಮನ ದಿನಾಂಕವನ್ನು ನವೀಕರಿಸುವುದು ಹೇಗೆ?:
ಪಿಎಫ್‌ನ ಖಾತೆದಾರರು ಯುಎಎನ್ ಮತ್ತು ಪಾಸ್‌ವರ್ಡ್ ನೀಡುವ ಮೂಲಕ https://unifiedportal-mem.epfindia.gov.in/memberinterface/ ಪೋರ್ಟಲ್‌ಗೆ (Portal) ಲಾಗಿನ್ ಆಗಬೇಕು
-ಲಾಗಿನ್ ಆದ ಮೇಲೆ ಮ್ಯಾನೇಜ್ ನಲ್ಲಿ ಮಾರ್ಕ್ ಎಕ್ಸಿಟ್ ಮೇಲೆ ಕ್ಲಿಕ್ ಮಾಡಿ
-select employmentನಲ್ಲಿ ಅಕೌಂಟ್ ನಂಬರ್ ಆಯ್ಕೆ ಮಾಡಿ
- ಈಗ date of exit ಮತ್ತು reason of exit ಕ್ಲಿಕ್ ಮಾಡಿ.
-ನಂತರ request OTP ಕ್ಲಿಕ್ ಮಾಡಿ
-ಆಧಾರ್‌ಗೆ ಲಿಂಕ್ ಮಾಡಲಾದ Mobile ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ.
-ಈಗ ಚೆಕ್ ಬಾಕ್ಸ್ ಆಯ್ಕೆಮಾಡಿ.
-ಇದರ ನಂತರ, ಅಪ್ ಡೇಟ್ ಮೇಲೆ ಕ್ಲಿಕ್ ಮಾಡಿ ಓಕೆ ಮಾಡಿ
ಇಷ್ಟು ಮಾಡಿದ ಕೂಡಲೇ ಡೇಟ್ ಆಫ್ ಎಕ್ಸಿಟ್ ಅಪ್ ಡೇಟ್ ಆಗುತ್ತದೆ.
ಇದನ್ನೂ ಓದಿ : SBI YONO ಅಪ್ಲಿಕೇಶನ್‌ನಲ್ಲಿ ಬಂಪರ್ ರಿಯಾಯಿತಿ, ಯಾವ ಬ್ರಾಂಡ್‌ನಲ್ಲಿ ಎಷ್ಟು ಆಫರ್ ಲಭ್ಯ
ನಿರ್ಗಮನ ದಿನಾಂಕವನ್ನು ಅಪ್ ಡೇಟ್ ಮಾಡುವುದರಿಂದ ಏನು ಪ್ರಯೋಜನ ?
ಇಪಿಎಫ್‌ಒ (EPFO) ಪ್ರಕಾರ, ಎಕ್ಸಿಟ್ ಡೇಟನ್ನು ಅಪ್ ಡೇಟ್ ಮಾಡದೇ ಹೋದಲ್ಲಿ, ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಅಥವಾ ಹಿಂದಿನ ಕಂಪನಿಯಿಂದ ಖಾತೆಯನ್ನು ಹೊಸದಕ್ಕೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಕಾರಣದಿಂದಾಗಿ, ಡೇಟ್ ಆಫ್ ಎಕ್ಸಿಟ್ ಅಪ್ ಡೇಟ್ (Update) ಮಾಡುವ ಹಕ್ಕನ್ನು ಖಾತೆದಾರರಿಗೆ ನೀಡಲಾಗಿದೆ. ಇದರಿಂದ ಪಿಎಫ್ ಖಾತೆದಾರರ ದೊಡ್ಡ ಸಮಸ್ಯೆ ಕೊನೆಯಾದಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.