ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ ಒ ಗುರುವಾರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಶೇ.8.5ರ ಬಡ್ಡಿ ದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಐದು ಕೋಟಿಗೂ ಹೆಚ್ಚು ಸಕ್ರಿಯ ಇಫಿಎಫ್‌ಒ ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.


COMMERCIAL BREAK
SCROLL TO CONTINUE READING

ನೌಕರರ ಭವಿಷ್ಯ ನಿಧಿ ಸಂಘಟನೆಯ (EPFO) ಅಪೆಕ್ಸ್ ನಿರ್ಧಾರ ಕೈಗೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಗುರುವಾರ ಶ್ರೀನಗರದಲ್ಲಿ ನಡೆದ ಸಭೆಯಲ್ಲಿ 2020-21ರ ಸಾಲಿನ ಬಡ್ಡಿ ದರವನ್ನು ಶೇ.8.5ಕ್ಕೆ ನಿಗದಿ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!


ಕೊರೊನಾ ವೈರಸ್(Coronavirus) ಸಾಂಕ್ರಾಮಿಕ ರೋಗದ ನಡುವೆ ಸದಸ್ಯರು ಹೆಚ್ಚು ಹಣ ಹಿಂತೆಗೆದುಕೊಳ್ಳುವಿಕೆ ಮತ್ತು ಕಡಿಮೆ ಕೊಡುಗೆಯ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಇಪಿಎಫ್ ಒ ಈ ಹಣಕಾಸು ವರ್ಷದ (2020-21) ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.8.5ರಿಂದ ಕಡಿಮೆ ಮಾಡಲಿದೆ ಎಂಬ ಊಹಾಪೋಹಗಳು ಹರಿದಾಡಿದ್ದವು.


Jharkhand: IED ಸ್ಫೋಟದಲ್ಲಿ 2 ಯೋಧರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ


ಕಳೆದ ವರ್ಷ ಮಾರ್ಚ್ ನಲ್ಲಿ ಇಪಿಎಫ್ ಒ ಭವಿಷ್ಯ ನಿಧಿ ಠೇವಣಿ(Provident Fund Deposits)ಗಳ ಮೇಲಿನ ಬಡ್ಡಿದರವನ್ನು 2019-20ರಲ್ಲಿ ಶೇ.8.5ಕ್ಕೆ ಇಳಿಸಿ, 2018-19ರಲ್ಲಿ ಶೇ.8.65ಕ್ಕೆ ಇಳಿಸಿತ್ತು.


2019-20ನೇ ಸಾಲಿಗೆ ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ) ಬಡ್ಡಿದರ ವು 2012-13ರ ನಂತರ ಅತ್ಯಂತ ಕನಿಷ್ಠ ಮಟ್ಟದ್ದು, ಇದು ಶೇ.8.5ರಷ್ಟಿತ್ತು.


ಆಗ್ರಾದ ತಾಜ್‌ಮಹಲ್‌ ಗೆ ಬಾಂಬ್ ದಾಳಿ ಭೀತಿ, ಪ್ರವಾಸಿಗರ ಸ್ಥಳಾಂತರ


ಇಪಿಎಫ್ ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ.8.65 ಮತ್ತು 2017-18ರಲ್ಲಿ ಶೇ.8.55ರಷ್ಟು ಬಡ್ಡಿ ದರ(Interest Rate)ವನ್ನು ನೀಡಿತ್ತು. 2015-16ರಲ್ಲಿ ಬಡ್ಡಿ ದರ ಶೇ.8.8ಕ್ಕೆ ಏರಿಕೆ ಯಾಗಿತ್ತು.


2013-14 ಮತ್ತು 2014-15ರಲ್ಲಿ ಶೇ.8.75ಬಡ್ಡಿ ದರ ನೀಡಿದ್ದು, 2012-13ರಲ್ಲಿ ಶೇ.8.5ರಷ್ಟು ಹೆಚ್ಚಾಗಿದೆ. 2011-12ರಲ್ಲಿ ಭವಿಷ್ಯ ನಿಧಿ ಮೇಲೆ ಇಪಿಎಫ್ ಒ ಶೇ.8.25ರಷ್ಟು ಬಡ್ಡಿ ದರವನ್ನು ನೀಡಿತ್ತು.


ಮಗಳ ಶಿರಚ್ಚೇದ ಮಾಡಿ ಪೋಲಿಸ್ ಠಾಣೆಗೆ ತಂದ ತಂದೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.