ಆಗ್ರಾದ ತಾಜ್‌ಮಹಲ್‌ ಗೆ ಬಾಂಬ್ ದಾಳಿ ಭೀತಿ, ಪ್ರವಾಸಿಗರ ಸ್ಥಳಾಂತರ

ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ತಾಜ್‌ಮಹಲ್‌ನಲ್ಲಿ ಬಾಂಬ್ ದಾಳಿ ಭೀತಿಯಿಂದಾಗಿಹಲವಾರು ಪ್ರವಾಸಿಗರನ್ನು ವಿಶ್ವಪ್ರಸಿದ್ಧ ಪ್ರೇಮದ  ಸ್ಮಾರಕದಿಂದ ತಕ್ಷಣ ಸ್ಥಳಾಂತರಿಸಲಾಯಿತು.ವರದಿಗಳ ಪ್ರಕಾರ, ಐತಿಹಾಸಿಕ ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತರಿಂದ ಕರೆಬಂದಿತ್ತು.

Last Updated : Mar 4, 2021, 11:39 AM IST
ಆಗ್ರಾದ ತಾಜ್‌ಮಹಲ್‌ ಗೆ ಬಾಂಬ್ ದಾಳಿ ಭೀತಿ, ಪ್ರವಾಸಿಗರ ಸ್ಥಳಾಂತರ  title=
file photo

ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ತಾಜ್‌ಮಹಲ್‌ನಲ್ಲಿ ಬಾಂಬ್ ದಾಳಿ ಭೀತಿಯಿಂದಾಗಿಹಲವಾರು ಪ್ರವಾಸಿಗರನ್ನು ವಿಶ್ವಪ್ರಸಿದ್ಧ ಪ್ರೇಮದ  ಸ್ಮಾರಕದಿಂದ ತಕ್ಷಣ ಸ್ಥಳಾಂತರಿಸಲಾಯಿತು.ವರದಿಗಳ ಪ್ರಕಾರ, ಐತಿಹಾಸಿಕ ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತರಿಂದ ಕರೆಬಂದಿತ್ತು.

ಇದನ್ನೂ ಓದಿ: ಆರು ತಿಂಗಳ ಬಳಿಕ ಪ್ರವಾಸಿಗರಿಗಾಗಿ ತೆರೆದ ತಾಜ್ ಮಹಲ್, ತೆರಳುವ ಮುನ್ನ ಇದನ್ನೊಮ್ಮೆ ಓದಿ

ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸ್ಮಾರಕವನ್ನು ರಕ್ಷಿಸುವ ಆಗ್ರಾ ಪೊಲೀಸ್ ಮತ್ತು ಸಿಐಎಸ್ಎಫ್ ತಂಡವು ತಾಜ್ ಮಹಲ್ ಆವರಣದೊಳಗೆ ತೀವ್ರ ಶೋಧ ನಡೆಸಿತು.ಮುನ್ನೆಚ್ಚರಿಕೆ ಕ್ರಮವಾಗಿ, ಐತಿಹಾಸಿಕ ಸ್ಮಾರಕದೊಳಗಿದ್ದ ಪ್ರವಾಸಿಗರನ್ನು ತಕ್ಷಣ ಸ್ಥಳಾಂತರಿಸಲಾಯಿತು ಮತ್ತು ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಮುಚ್ಚಲಾಯಿತು.

ವರದಿಗಳ ಪ್ರಕಾರ, ಯುಪಿ ಯ ಫಿರೋಜಾಬಾದ್‌ನಿಂದ ಕರೆ ಮಾಡಲಾಗಿದೆ ಎಂದು ವರದಿಯಾಗಿದೆ ಮತ್ತು ಈ ಸಮಯದಲ್ಲಿ ಕರೆ ಮಾಡಿದವರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: ಗುಡುಗು ಸಹಿತ ಮಳೆಗೆ ಹಾನಿಗೊಳಗಾದ ತಾಜ್ ಮಹಲ್ ಸಂಕೀರ್ಣದ ಭಾಗಗಳು

ತಾಜ್‌ಮಹಲ್ (Taj Mahal) ಮತ್ತು ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ಸಿಐಎಸ್ಎಫ್, ಆಗ್ರಾ ಪೊಲೀಸರು ಪರಿಶೀಲಿಸುತ್ತಿದ್ದಾರೆ ಮತ್ತು ಬಾಂಬ್ ವಿಲೇವಾರಿ ದಳವನ್ನು ಸ್ಥಳದಲ್ಲಿಯೇ ಕರೆಯಲಾಗಿದೆ.ಇಲ್ಲಿಯವರೆಗೆ, ಅನುಮಾನಾಸ್ಪದ ಏನೂ ಕಂಡುಬಂದಿಲ್ಲ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಾಂಬ್ ಕರೆ ಹುಸಿಯಾಗಿದೆ ಎನ್ನಲಾಗಿದೆ.ಈ ಹಿಂದೆಯೂ ಕೂಡ ತಾಜ್ ಮಹಲ್ನಲ್ಲಿ ಬಾಂಬ್ ಇದೆ ಎಂದು ಅಪರಿಚಿತ ಕರೆ ಮಾಡಿದವರು ಹೇಳಿದ್ದರು, ಆದರೆ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಬಾಂಬ್‌ಗಾಗಿ ಕೂಲಂಕಷವಾಗಿ ಶೋಧಿಸಿದ ನಂತರ ಅದು ಹುಸಿ ಕರೆಯಂದು ತಿಳಿದುಬಂದಿತ್ತು.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‌ಗಿಂತ ಮೊದಲು ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷರಿವರು

ತಾಜ್ ಮಹಲ್ ಸುತ್ತಮುತ್ತಲಿನ ದೀಪಗಳನ್ನು ಆನ್ ಮಾಡಲಾಗಿದ್ದು ಮತ್ತು ಬಾಂಬ್ ಪತ್ತೆಗಾಗಿ ನಾಯಿಗಳನ್ನು ಸಹ ತರಲಾಯಿತು. ತಾಜ್ ಮಹಲ್ ಮತ್ತು ಸುತ್ತಮುತ್ತಲಿನ ಎಲ್ಲ ಸ್ಥಳಗಳನ್ನು ಪರಿಶೀಲಿಸಲಾಯಿತು ಆದರೆ ಏನೂ ಕಂಡುಬಂದಿಲ್ಲ ಮತ್ತು ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News