ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ತನ್ನ ಲಕ್ಷಾಂತರ ಖಾತೆದಾರರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತದೆ. ಈ ಕಾರಣದಿಂದಾಗಿ, ಖಾತೆದಾರರುನೌಕರಿಯ ವೇಳೆ ಹಾಗೂ ನೌಕರಿ ಇಲ್ಲದ ವೇಳೆಯೂ ಕೂಡ ಆರ್ಥಿಕ ಸಹಾಯ ಪಡೆಯಬಹುದಾಗಿದೆ. ಹಲವು ಬಾರಿಗೆ ಖಾತೆದಾರರು EPFO ಮೂಲಕ ಅವಶ್ಯಕತೆ ಇರುವ ಸಂದರ್ಭದಲ್ಲಿ ಸಾಲವನ್ನೂ ಸಹ ಪಡೆಯಬಹುದು.


COMMERCIAL BREAK
SCROLL TO CONTINUE READING

ನಿವೃತ್ತಿಯ ನಂತರವೂ ಜನರು ಆದಾಯದ ಮೂಲಗಳಿಲ್ಲದಿದ್ದಾಗ ಇಪಿಎಫ್‌ಒ ನಿರ್ವಹಿಸುವ ಮೂರು ಯೋಜನೆಗಳ ಸಹಾಯದಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಈ ಯೋಜನೆಗಳು ವಿಮಾ ಯೋಜನೆ 1976, ಇಪಿಎಫ್ ಯೋಜನೆ 1952 ಮತ್ತು ಪಿಂಚಣಿ ಯೋಜನೆ 1995. ಈ ಯೋಜನೆಗಳ ಬಗ್ಗೆ ನಾವು ಇಂದು ವಿವರವಾಗಿ ಹೇಳಲಿದ್ದೇವೆ.


ನೌಕರರ ಮರಣದ ಬಳಿಕವೂ ಕೂಡ ಸಂತ್ರಸ್ತರಿಗೆ ಸುಗುತ್ತದೆ ಲಾಭ
ಒಬ್ಬ ಉದ್ಯೋಗಿ ಇಪಿಎಫ್‌ಒ ಸದಸ್ಯನಾಗಿದ್ದರೆ ಮತ್ತು ನಿಯಮಿತವಾಗಿ ಕೊಡುಗೆ ನೀಡಿದ್ದರೆ , ಅವನು ಯಾವುದೇ ಕಾರಣಗಳಿಂದ ಮೃತಪಟ್ಟರೆ ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಲು ಇಪಿಎಫ್‌ಒನ ವಿಮಾ ಯೋಜನೆ 1976 (ಇಡಿಎಲ್ಐ)  ಇದೆ. ಇದರ ಅಡಿಯಲ್ಲಿ ನೌಕರನು ಮೃತಪಟ್ಟ ಸಂದರ್ಭದಲ್ಲಿ ಆತನ ತಿಂಗಳ ಸಂಬಳದ 20 ಪಟ್ಟು ಹೆಚ್ಚು ಹಣವನ್ನು ಆತನ ಕುಟುಂಬ ಸದಸ್ಯರಿಗೆ ನೀಡುತ್ತದೆ. ಇದು ಗರಿಷ್ಠ 6 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.


ನಿವೃತ್ತಿಯ ಬಳಿಕ ಪೆನ್ಷನ್ ಲಾಭ
ನಿವೃತ್ತಿಯ ನಂತರ, ಇಪಿಎಫ್‌ಒ ತನ್ನ ಖಾತೆದಾರರಿಗೆ ಪಿಂಚಣಿ ಯೋಜನೆ 1995 (ಇಪಿಎಸ್) ಯೋಜನೆಯ ಲಾಭವನ್ನು ಸಹ ನೀಡುತ್ತದೆ. ಇದರ ಅಡಿಯಲ್ಲಿ, ಅಂತಹ ವ್ಯಕ್ತಿಯು ಪ್ರತಿ ತಿಂಗಳು ಪಿಂಚಣಿಯ ಮೊತ್ತವನ್ನು ಪಡೆಯುತ್ತಾನೆ. ಈ ಸೌಲಭ್ಯವು ನಿವೃತ್ತಿಯ ಹೊರತಾಗಿ, ಅಂಗವೈಕಲ್ಯ, ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಲಭಿಸುತ್ತದೆ. ಕುಟುಂಬ ಪಿಂಚಣಿ ಯೋಜನೆ, 1971 ರ ಅಡಿಯಲ್ಲಿ, ನೌಕರನು ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾನೆ.


ಈ ಕಾರ್ಯಗಳಿಗೆ EPFO ಧನಸಹಾಯ ನೀಡುತ್ತದೆ
ಉದ್ಯೋಗಿಯ ನಿವೃತ್ತಿ ಅಥವಾ ಮರಣದ ನಂತರ, ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಒಟ್ಟು ಮೊತ್ತವನ್ನು ಇಪಿಎಫ್ ಯೋಜನೆ 1952 ರ ಅಡಿಯಲ್ಲಿ ಅವನಿಗೆ ಅಥವಾ ಅವನ ಕುಟುಂಬಕ್ಕೆ ನೀಡಲಾಗುತ್ತದೆ. ಇಪಿಎಫ್‌ಒ ಸದಸ್ಯರು ಮಕ್ಕಳ ಅಧ್ಯಯನ, ಮದುವೆ, ಅನಾರೋಗ್ಯ ಅಥವಾ ಮನೆ ನಿರ್ಮಿಸಲು ಪಿಎಫ್ ನಿಧಿಯಿಂದ ಸ್ವಲ್ಪ ಭಾಗವನ್ನು ಹಿಂಪಡೆಯುವ ಸೌಲಭ್ಯ ಕೂಡ ಕಲ್ಪಿಸುತ್ತದೆ.