Earthquake In Delhi : ದೆಹಲಿಯಲ್ಲಿ ಭಾರೀ ಭೂಕಂಪ..! ಜೀವ ಭಯಕ್ಕೆ ಮನೆಯಿಂದ ಹೊರ ಬಂದ ಜನ
Earthquake in India : ದೇಶದಲ್ಲಿ ಜರುಗುತ್ತಿರುವ ಸರಣಿ ಭೂಕಂಪಗಳು ಜನರನ್ನು ಭಯಭೀತರನ್ನಾಗಿಸುತ್ತಿವೆ. ಇಂದು (13- 6-2023) ಮಧ್ಯಾಹ್ನ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಈ ಕುರಿತ ಸಂಪೂರ್ಣ ವಿವರ ಹೀಗಿದೆ ನೋಡಿ..
Earthquake Today : ರಾಷ್ಟ್ರ ರಾಜಧಾನಿ ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಕಾರಣ ಜನರು ಭಯಭೀತರಾಗಿ ಮನೆ, ಕಚೇರಿಗಳಿಂದ ಹೊರಗೆ ಓಡಿ ಬಂದಿದಾರೆ.
ದೆಹಲಿಯಲ್ಲಿ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.0 ರಷ್ಟಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 5.7 ರಷ್ಟಿತ್ತು. ಚೀನಾ ಮತ್ತು ಪಾಕಿಸ್ತಾನದವರೆಗೂ ಭೂಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರವು ಪಾಕಿಸ್ತಾನದಲ್ಲಿದೆ ಎಂದು ತೋರುತ್ತದೆ. ಭೂಕಂಪದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಇದನ್ನೂ ಓದಿ: ಕುಪವಾಡಾದ ಗಡಿ ನಿಯಂತ್ರಣ ರೇಖೆ ಬಳಿ 2 ಉಗ್ರರನ್ನು ಮಟ್ಟಹಾಕಿದ ಭದ್ರತಾ ಪಡೆ, ಮುಂದುವರೆದ ಕಾರ್ಯಾಚರಣೆ
ಮಂಗಳವಾರ ಮಧ್ಯಾಹ್ನ 1:30 ರ ನಂತರ ಸಂಭವಿಸಿದ ಭೂಕಂಪವು ಕೆಲವು ಸೆಕೆಂಡುಗಳ ಕಾಲ ನಡೆಯಿತು. ಆದರೆ ಯಾವುದೇ ಪ್ರಾಣ ಹಾನಿ ಅಥವಾ ಹಾನಿಯಾಗಿಲ್ಲ. ಚಂಡೀಗಢ, ಜೈಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಇಸ್ಲಾಮಾಬಾದ್, ಲಾಹೋರ್ ಮತ್ತು ಪಾಕಿಸ್ತಾನದ ನೆರೆಯ ಪ್ರದೇಶಗಳಲ್ಲಿ ಭೂಕಂಪನವು ತುಂಬಾ ಪ್ರಬಲವಾಗಿದೆ ಎಂದು ವರದಿಯಾಗಿದೆ. ಜನರು ಭೂಕಂಪದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಭೂಕಂಪದ ಕುರಿತು ಮಾತನಾಡಿದ ಶ್ರೀನಗರದ ವ್ಯಕ್ತಿಯೊಬ್ಬರು, ಮಂಗಳವಾರ ಸಂಭವಿಸಿದ ಭೂಕಂಪವು ತುಂಬಾ ದೊಡ್ಡದಾಗಿದೆ ಎಂದು ಹೇಳಿದರು. ಇದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು ಭಯಭೀತರಾಗಿದ್ದಾರು ಎಂದು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಭೂಕಂಪಗಳು ಸಂಭವಿಸುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.