`ಪತಿ ಭೀಕ್ಷೆ ಬೇಡುವವನಾಗಿದ್ದರೂ ಪತ್ನಿಗೆ ಜೀವನಾಂಶ ಕಡ್ಡಾಯವಾಗಿ ನೀಡಬೇಕು`
ತೀರಾ ಕಡಿಮೆ ಹಣ ಸಂಪಾದಿಸುತ್ತಿದ್ದು,ಇಂತಹ ಪರಿಸ್ಥಿತಿಯಲ್ಲಿ ಪತ್ನಿಗೆ ಜೀವನಾಂಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.ಹೆಂಡತಿಗೆ ಸಂಪಾದನೆ ಇದೆ, ಆದರೂ ಆಕೆ ತನ್ನಿಂದ ಜೀವನಾಂಶ ಕೇಳುತ್ತಿದ್ದಾಳೆ.
ನವದೆಹಲಿ: ವಿಚ್ಛೇದನ ಅಥವಾ ಇನ್ನಾವುದೇ ಕಾರಣದಿಂದ ಪತಿ-ಪತ್ನಿಯರ ಪ್ರತ್ಯೇಕತೆಯ ನಂತರ, ಮಹಿಳೆಯರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಹೆಚ್ಚಿನ ಮಹಿಳೆಯರು ತಮ್ಮ ಮನೆಯ ಹೊರಗೆ ಕೆಲಸ ಮಾಡದಿರುವುದಕ್ಕೆ ಇದೆ ಕಾರಣ.ಏಕೆಂದರೆ ಆಕೆ ಮನೆಯನ್ನು ನೋಡಿಕೊಳ್ಳುತ್ತಾಳೆ.
ಅಂತಹ ಪರಿಸ್ಥಿತಿಯಲ್ಲಿ, ಪ್ರತ್ಯೇಕತೆಯ ನಂತರ,ಜೀವನ ನಡೆಸುವುದೇ ಕಷ್ಟಕರವಾಗುತ್ತದೆ.ಏಕೆಂದರೆ ಅವರಿಗೆ ಇದ್ದಕ್ಕಿದ್ದಂತೆ ಕೆಲಸ ಸಿಗುವುದಿಲ್ಲ ಅಥವಾ ಅವರು ಮನೆಗೆಲಸವನ್ನು ತೊರೆದ ತಕ್ಷಣ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.ಆದಾಯದ ಮೂಲವಿಲ್ಲದೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಚಂಡೀಗಢದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ
ಇಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಪತಿ ಭಿಕ್ಷೆ ಬೇಡಿದರೂ ಪತ್ನಿಗೆ ಜೀವನಾಂಶ ನೀಡುವುದು ನೈತಿಕ ಹಾಗೂ ಕಾನೂನು ಬಾಧ್ಯತೆ ಎಂದು ಹೈಕೋರ್ಟ್ ಹೇಳಿದೆ.ಇಲ್ಲಿ ಹೈಕೋರ್ಟ್ ನಲ್ಲಿ ಚಾರ್ಖಿ ದಾದ್ರಿ ಕೌಟುಂಬಿಕ ನ್ಯಾಯಾಲಯದ ತೀರ್ಪಿನ ಕುರಿತು ವಿಚಾರಣೆ ನಡೆಯುತ್ತಿದ್ದು, ಪತಿ ತನ್ನ ಪತ್ನಿಗೆ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೇಳಲಾಗಿದೆ.ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.ಪತಿಯ ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.ಪತಿ ವೃತ್ತಿಪರ ಭಿಕ್ಷುಕನಾಗಿದ್ದರೂ ಪತ್ನಿಗೆ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ- Health Tips: ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ ಆರೋಗ್ಯವಂತರಾಗಿರಿ
ಅರ್ಜಿಯಲ್ಲಿ ಪತಿ ಹೇಳಿದ್ದೇನು?
ತೀರಾ ಕಡಿಮೆ ಹಣ ಸಂಪಾದಿಸುತ್ತಿದ್ದು,ಇಂತಹ ಪರಿಸ್ಥಿತಿಯಲ್ಲಿ ಪತ್ನಿಗೆ ಜೀವನಾಂಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.ಹೆಂಡತಿಗೆ ಸಂಪಾದನೆ ಇದೆ, ಆದರೂ ಆಕೆ ತನ್ನಿಂದ ಜೀವನಾಂಶ ಕೇಳುತ್ತಿದ್ದಾಳೆ ಎಂದು ಹೇಳಿದ್ದ ಆದರೆ ನ್ಯಾಯಾಲಯವು ಈ ವಿಷಯಗಳಿಗೆ ಗಮನ ಕೊಡಲಿಲ್ಲ ಮತ್ತು ಹೆಂಡತಿಯ ಪರವಾಗಿ ತೀರ್ಪು ನೀಡಿತು.ಇಂದಿನ ದಿನಗಳಲ್ಲಿ ದಿನಗೂಲಿ ಕೂಡ ಪ್ರತಿದಿನ 500 ರೂಪಾಯಿ ಗಳಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ತಿಂಗಳಿಗೆ 5 ಸಾವಿರ ಸಂಬಳ ಹೆಚ್ಚೇನೂ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.