Health Tips: ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ ಆರೋಗ್ಯವಂತರಾಗಿರಿ

ಮಾವಿನ ಹಣ್ಣಿನ ಆರೋಗ್ಯ ಪ್ರಯೋಜನಗಳು: ಮಾವಿನ ಸೀಸನ್ ಬರಲಿದೆ. ಮಾವು ಹೆಚ್ಚಾಗಿ ಎಲ್ಲರಿಗೂ ಪ್ರಿಯವಾದದ್ದು. ನೀವು ಬೇಸಿಗೆಯಲ್ಲಿ ಮಾವಿನ ಹಣ್ಣಿನ ರಸವನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಮಾವಿನ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿಯಿರಿ.  

Written by - Puttaraj K Alur | Last Updated : Mar 30, 2023, 10:03 PM IST
  • ವಿಟಮಿನ್ ‘ಸಿ’ ಮಾವಿನ ಹಣ್ಣಿನಲ್ಲಿ ಹೇರಳವಾಗಿದ್ದು, ವ್ಯಕ್ತಿಯ ರೋಗನಿರೋಧಕ ಶಕ್ತಿಗೆ ಸಹಕಾರಿ
  • ಮಾವಿನ ಹಣ್ಣಿನಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ
  • ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದ್ದು, ದೃಷ್ಟಿಗೆ ಪ್ರಯೋಜನಕಾರಿ
Health Tips: ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ ಆರೋಗ್ಯವಂತರಾಗಿರಿ title=
ಮಾವಿನ ಆರೋಗ್ಯ ಪ್ರಯೋಜನಗಳು

ನವದೆಹಲಿ: ಇನ್ನೇನು ಮಾವಿನ ಹಣ್ಣಿನ ಸೀಸನ್ ಬರಲಿದೆ. ಮಾವು ಹೆಚ್ಚಾಗಿ ಎಲ್ಲರಿಗೂ ಪ್ರಿಯವಾದದ್ದು. ಅಂದಹಾಗೆ ಈ ಮಾವಿನಹಣ್ಣುಗಳಲ್ಲಿ ಹಲವು ವಿಧಗಳಿವೆ. ಒಂದೊಂದು ಬಗೆಯ ಮಾವಿನಹಣ್ಣಿನ ರುಚಿಯೂ ವಿಭಿನ್ನವಾಗಿರುತ್ತದೆ. ಮಕ್ಕಳಿಂದ ಹಿರಿಯರವರೆಗೆ ಈ ಹಣ್ಣು ಎಲ್ಲರಿಗೂ ಇಷ್ಟವಾಗುತ್ತದೆ. ಮಾವಿನ ರುಚಿಯ ಬಗ್ಗೆ ಕೇಳಿದ್ದರೂ ನೀವು ಅವುಗಳ   ಪ್ರಯೋಜನಗಳ ಬಗ್ಗೆ ತಿಳಿದಿರುವುದಿಲ್ಲ.

ಹೌದು, ಮಾವು ರುಚಿಕರವಾಗಿರುವುದರ ಜೊತೆಗೆ ಹಲವು ಔಷಧಿಯ ಗುಣಗಳಿಂದ ಕೂಡಿದೆ. ಹೀಗಾಗಿ ನೀವು ಬೇಸಿಗೆಯಲ್ಲಿ ಮಾವಿನ ಹಣ್ಣು ಮತ್ತದರ ಜ್ಯೂಸ್ ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾವಿನ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ಎಂದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Rice Side effects : ಹುಷಾರ್‌...! ಅತೀ ಹೆಚ್ಚು ʼಅನ್ನ ಸೇವನೆʼಯೂ ಆರೋಗ್ಯಕ್ಕೆ ಹಾನಿಕರ

ಮಾವಿನ ಜ್ಯೂಸ್ ಕುಡಿಯುವುದರ ಪ್ರಯೋಜನಗಳು

ಕೊಲೆಸ್ಟ್ರಾಲ್: ವಿಟಮಿನ್ ‘ಸಿ’ ಮಾವಿನ ಹಣ್ಣಿನಲ್ಲಿ ಹೇರಳವಾಗಿದೆ. ಇದರಿಂದ ವ್ಯಕ್ತಿಯ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ಏಕೆಂದರೆ ಇದು ದೇಹದಲ್ಲಿನ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕಡಿಮೆ ಮಾಡಲು ಸಹಕಾರಿ. ಇನ್ನೊಂದೆಡೆ ನೀವು ದಿನನಿತ್ಯ ಮಾವಿನ ಜ್ಯೂಸ್ ಸೇವಿಸಿದರೆ ಅದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ನಿಮಗೆ ಹೃದಯ ಕಾಯಿಲೆ ಬರುವುದಿಲ್ಲ. ಹೀಗಾಗಿಯೇ ನೀವು ಬೇಸಿಗೆಯಲ್ಲಿ ಪ್ರತಿದಿನ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬಹುದು.

ಬಿಪಿ ನಿಯಂತ್ರಣದಲ್ಲಿರುತ್ತದೆ: ಮಾವಿನ ಹಣ್ಣಿನ ಜ್ಯೂಸ್‍ನಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ. ಇದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ರಸವನ್ನು ಪ್ರತಿದಿನ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುವುದರ ಜೊತೆಗೆ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಮಸ್ಯೆ ಬರುವುದಿಲ್ಲ.

ಇದನ್ನೂ ಓದಿ: Kidney Health : ನಿಮ್ಮ ಕಿಡ್ನಿ ಆರೋಗ್ಯವಾಗಿರಲು ತಪ್ಪದೆ ಅನುಸರಿಸಿ ಈ ಸಲಹೆಗಳನ್ನು!

ಕಣ್ಣುಗಳಿಗೆ ಪ್ರಯೋಜನಕಾರಿ: ಮಾವಿನ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ, ಇದು ನಿಮ್ಮ ದೃಷ್ಟಿಗೆ ನೇರವಾಗಿ ಪ್ರಯೋಜನಕಾರಿ. ದಿನವೂ ಮಾವಿನ ಹಣ್ಣಿನ ರಸವನ್ನು ಸೇವಿಸಿದರೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಮತ್ತು ಕಣ್ಣಿನ ದೃಷ್ಟಿ ಕೂಡ ಹೆಚ್ಚುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News