ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿ ಪವನ್ ಕುಮಾರ್ ಬನ್ಸಾಲ್ ರಂತಹ ಭ್ರಷ್ಟರು ಕೂಡ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಆದರೆ ಅದರ ಅರ್ಥ ಗೆಲ್ಲುವುದು ಎಂದರ್ಥವಲ್ಲ ಎಂದು ಭಾನುವಾರ ಅನುಪಮ್ ಖೇರ್ ಮತ ಚಲಾಯಿಸಿದ ಬಳಿಕ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ಭ್ರಷ್ಟ ಜನರು ಕೂಡ ವಿಶ್ವಾಸ ಹೊಂದಬಹುದು,ಅವರು (ಪವನ್ ಬನ್ಸಾಲ್ ಮತ್ತು ಪಕ್ಷದವರು) ಭ್ರಷ್ಟಾಚಾರವನ್ನು ಅವಲಂಬಿಸಿರುತ್ತಾರೆ, ಆದರೆ ಪ್ರಾಮಾಣಿಕರು ತಮ್ಮ ಪ್ರಾಮಾಣಿಕತೆಯನ್ನು ಅವಲಂಬಿಸಿರುತ್ತಾರೆ" ಎಂದು ಖೇರ್ ಹೇಳಿದರು.ಬಿಜೆಪಿಯ ಅಭಿವೃದ್ಧಿ ಕಾರ್ಯದಿಂದಾಗಿ ಜಾತಿ ಮತ್ತು ಧರ್ಮದ ಮಿತಿ ಮೀರಿ ಅಭ್ಯರ್ಥಿಗಳನ್ನು ಬೆಂಬಲಿಸುವ ಕಾರ್ಯವನ್ನು ಜನರು ಮಾಡುತ್ತಿದ್ದಾರೆ ಎಂದು ಹೇಳಿದರು.


ಇಡೀ ಭಾರತದಾದ್ಯಂತ ಜನರು ತಮ್ಮ ಕನಸುಗಳಿಗೆ ಜೀವ ತುಂಬುವ ನಾಯಕನನ್ನು ಹುಡುಕುತ್ತಿದ್ದಾರೆ. ಇದು ಪಂಜಾಬ್ ಮತ್ತು ಚಂಡಿಗಡ್ ದಲ್ಲಿ ನಿಜವಾಗಿದೆ.ಈ ಚುನಾವಣೆಯಲ್ಲಿ ಅಭಿವೃದ್ದಿ ಪ್ರಮುಖ ಅಜೆಂಡಾ ಆಗಿದೆ.ಆದರೆ ಜಾತಿ, ಮತ ಮತ್ತು ಧರ್ಮಕ್ಕೆ  ಕಡಿಮೆ ಪ್ರಾಮುಖ್ಯತೆ ಗಳಿಸಿದೆ, ನಿಜಕ್ಕೂ ದೊಡ್ಡ ಬೆಳವಣಿಗೆ ಎಂದು ಅನುಪಮ್ ಖೇರ್ ತಿಳಿಸಿದರು.ಖೇರ್ ಅವರ ಪತ್ನಿ ಮತ್ತು ಬಿಜೆಪಿ ಸಂಸದೆ ಕಿರಣ್ ಖೇರ್ ಚಂಡೀಗಢ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ  ಪವನ್ ಕುಮಾರ್ ಬನ್ಸಾಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳು ಲೋಕಸಭೆ ಚುನಾವಣೆಯ ಈ ಕೊನೆಯ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾನುವಾರ ಏಳು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 59 ಸೀಟುಗಳಲ್ಲಿ ಮತದಾನ ಪ್ರಾರಂಭವಾಯಿತು. ಮತಗಳ ಎಣಿಕೆ ಮೇ 23 ರಂದು ಪ್ರಾರಂಭವಾಗುತ್ತದೆ.