ಪ್ರಧಾನಿ ಮೋದಿಯದ್ದು ಚರಂಡಿ ಮಟ್ಟದ ರಾಜಕೀಯ ಎಂದು ಎಲ್ಲರಿಗೂ ಗೊತ್ತಿದೆ - ಅಹ್ಮದ್ ಪಟೇಲ್
ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿರುವ ವಿಚಾರವಾಗಿ ನರೇಂದ್ರ ಮೋದಿ ಹಿರಿಯ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಅವರ ಮೇಲೆ ಆರೋಪ ಮಾಡಿದ್ದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಪ್ರಧಾನಿ ಚರಂಡಿ ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿ: ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿರುವ ವಿಚಾರವಾಗಿ ನರೇಂದ್ರ ಮೋದಿ ಹಿರಿಯ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಅವರ ಮೇಲೆ ಆರೋಪ ಮಾಡಿದ್ದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಪ್ರಧಾನಿ ಚರಂಡಿ ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಡೆಹ್ರಾಡೂನ್ ವೊಂದರ ರ್ಯಾಲಿಯಲ್ಲಿ ಭಾಗವಹಿಸಿ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ವಿಚಾರವಾಗಿ ಗಾಂಧಿ ಕುಟುಂಬ ಹಾಗೂ ಅಹ್ಮದ್ ಪಟೇಲ್ ಮೇಲೆ ಆರೋಪ ಮಾಡಿದ್ದರು.ಈಗ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಹ್ಮದ್ ಪಟೇಲ್ ಪ್ರಧಾನಿ ಮೋದಿಯವರದ್ದು ಚರಂಡಿ ಮಟ್ಟದ ರಾಜಕೀಯ ಎಂದು ಎಲ್ಲರಿಗೂ ತಿಳಿದಿದೆ ಎಂದು ಪ್ರತ್ಯುತ್ತರ ನೀಡಿದ್ದರು.
"ಪ್ರಧಾನಿ ಮೋದಿಯವರದ್ದು ಚರಂಡಿ ಮಟ್ಟದ ರಾಜಕೀಯವೆಂದು ಎಲ್ಲರಿಗೂ ತಿಳಿದಿದೆ.ಅವರ ರಾಜಕೀಯ ಹಳ್ಳಿ ಹಾಗೂ ಮುನ್ಸಿಪಾಲಿಟಿ ಮಟ್ಟದ್ದು.ಒಂದು ವೇಳೆ ನಾನು ಅಪರಾಧಿಯಾಗಿದ್ದರೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ "ಎಂದು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ವಿಚಾರವಾಗಿ ಈಗ ಆರೋಪ ಪ್ರತ್ಯಾರೋಪಗಳು ನಡೆದಿದ್ದು.ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿನ ಬಿಜೆಪಿ ಆರೋಪವನ್ನು ಚುನಾವಣಾ ಸ್ಟಂಟ್ ಎಂದು ಕರೆದಿದೆ.