ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಈ ರೀತಿ ಇದೆ...!
ಗುಜರಾತ್ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ವಿವಿಧ ಸುದ್ದಿ ವಾಹಿನಿಗಳು, ಏಜೆನ್ಸಿಗಳು ಎಕ್ಸಿಟ್ ಪೋಲ್ಗಳನ್ನು ನಡೆಸುತ್ತಿವೆ. ಗುಜರಾತ್ ನಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಮರಳಲಿದೆಯೇ ಅಥವಾ ಕಾಂಗ್ರೆಸ್ಗೆ ಹೆಚ್ಚಿನ ಬಹುಮತ ಸಿಗಲಿದೆಯೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಎಲ್ಲರ ಚಿತ್ತ ಈಗ ಗುಜರಾತ್ ನತ್ತ ನೆಟ್ಟಿದೆ. ಸೋಮವಾರ ಹೊರಬೀಳಲಿರುವ ಗುಜರಾತ್ ಚುನಾವಣಾ ಫಲಿತಾಂಶದ ಕುರಿತು ಹಲವು ಟಿವಿ ವಾಹಿನಿಗಳು, ಪತ್ರಿಕೆಗಳು, ವೆಬ್ಸೈಟ್ಗಳು ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ನಡೆಸುತ್ತಿವೆ.
ಮತ್ತೊಮ್ಮೆ, ಗುಜರಾತ್ನಲ್ಲಿ ಮೋದಿಯವರ ಪ್ಲಾನ್ ವರ್ಕ್ಔಟ್ ಆಗಲಿದೆಯೇ? ಅಥವಾ ಈ ಬಾರಿ ಕಾಂಗ್ರೆಸ್ಗೆ ಒಂದು ಅವಕಾಶ ಸಿಗಬಹುದೇ? ಎಂಬುದು ನಾಳೆ ತಿಳಿಯಲಿದೆ.
ಆದರೆ, ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಏನು ಹೇಳುತ್ತಿವೆ? ಈ ಬಗ್ಗೆ ನೀವು ತಿಳಿದುಕೊಳ್ಳಿ, ಸಮೀಕ್ಷೆಗಳು ಈ ರೀತಿ ಹೇಳುತ್ತಿವೆ...
ವಿಎಂಆರ್ ಸಮೀಕ್ಷೆಯ ಪ್ರಕಾರ ಬಿಜೆಪಿ 190 ಸ್ಥಾನಗಳನ್ನು ಗೆದ್ದರೆ, ಕಾಂಗ್ರೇಸ್ 70 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಸೂಚಿಸುತ್ತದೆ. ಉಳಿದ ಪಕ್ಷಗಳು 3 ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆ ತಿಳಿಸುತ್ತಿದೆ.
ಸಿಎಸ್ಡಿಎಸ್ ಸಮೀಕ್ಷೆಯ ಪ್ರಕಾರ, ಬಿಜೆಪಿ ಬಹುಮತದಲ್ಲಿ 117 ಸ್ಥಾನಗಳನ್ನು ಗೆಲ್ಲುತ್ತದೆ, ಕಾಂಗ್ರೆಸ್ ಕೇವಲ 64 ಸ್ಥಾನಗಳನ್ನು ಪಡೆಯಲಿದೆ. ಇತರ ಪಕ್ಷಗಳು 1 ಸೀಟನ್ನು ಗೆಲ್ಲುವ ಸಾಧ್ಯತೆಯಿದೆ ಎಂದು CSDS ಹೇಳುತ್ತದೆ. ಬಿಜೆಪಿ ಶೇಕಡಾ 49 ರಷ್ಟು ಮತಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.
ನ್ಯೂಸ್ ಎಕ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ 110 ರಿಂದ 120 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 65-75 ಸೀಟುಗಳನ್ನು ಪಡೆಯಲು ಸಾಧ್ಯವಿದೆ ಮತ್ತು ಇತರ ಪಕ್ಷಗಳು 2-4 ಸ್ಥಾನಗಳನ್ನು ಪಡೆಯುತ್ತವೆ.
ಪ್ರಾಂತಾವಾರು ಚುನಾವಣೋತ್ತರ ಫಲಿತಾಂಶ ಈ ರೀತಿ ಇದೆ...
ಉತ್ತರ ಗುಜರಾತ್ - ಈ ಪ್ರದೇಶದಲ್ಲಿ ಬಿಜೆಪಿ ಶೇಕಡಾ 49 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಎಕ್ಸಿಟ್ ಸಮೀಕ್ಷೆಯಲ್ಲಿ ಬಿಜೆಪಿ 32 ರಿಂದ 38 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ, ಆದರೆ ಕಾಂಗ್ರೆಸ್ 22 ರಿಂದ 16 ಸ್ಥಾನಗಳನ್ನು ಗೆಲ್ಲಬಹುದು.
ದಕ್ಷಿಣ ಗುಜರಾತ್ - ಬಿಜೆಪಿ 52 ಶೇ. ಮತಗಳನ್ನು ನೋಂದಾಯಿಸಲು ಸಾಧ್ಯವಿದೆ. ಎಕ್ಸಿಟ್ ಸಮೀಕ್ಷೆಯಲ್ಲಿ ಬಿಜೆಪಿ 21 ರಿಂದ 27 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಕಾಂಗ್ರೆಸ್ 9 ರಿಂದ 13 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ.
ಸೌರಾಷ್ಟ್ರ, ಕಚ್ ಪ್ರಾಂತ್ಯ - ಈ ಪ್ರದೇಶದಲ್ಲಿ ಬಿಜೆಪಿ ಶೇಕಡಾ 49 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ 31 ರಿಂದ 37 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16 ರಿಂದ 22 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.
ಮಧ್ಯ ಗುಜರಾತ್ - ಇಲ್ಲಿ ಬಿಜೆಪಿ ಶೇಕಡಾ 47 ಮತಗಳನ್ನು ನೋಂದಾಯಿಸಲು ಸಾಧ್ಯವಿದೆ. ಎಕ್ಸಿಟ್ ಸಮೀಕ್ಷೆಯಲ್ಲಿ ಬಿಜೆಪಿ 21 ರಿಂದ 27 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತೋರಿಸಿದರೆ, ಕಾಂಗ್ರೆಸ್ 13 ರಿಂದ 19 ಸ್ಥಾನಗಳನ್ನು ಗೆಲ್ಲಬಹುದು.
ಸಿವೋಟರ್ ಪ್ರಕಾರ ಬಿಜೆಪಿ 108 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 74 ಸ್ಥಾನಗಳನ್ನು ಗೆಲ್ಲಬಹುದೆಂದು ಸಮೀಕ್ಷೆ ತೋರಿಸಿದೆ.
ರಿಪಬ್ಲಿಕ್ ಟಿವಿ ಸಮೀಕ್ಷೆಯ ಪ್ರಕಾರ, ಮೋದಿಯವರ ಹವಾ ಮತ್ತೆ ಗುಜರಾತಿಯಲ್ಲಿ ಮುಂದುವರಿಯುತ್ತದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಸಮೀಕ್ಷೆಯ ಪ್ರಕಾರ ಬಿಜೆಪಿ 99 ರಿಂದ 113 ಸ್ಥಾನಗಳನ್ನು ಪಡೆಯಲಿದೆ. 68 ರಿಂದ 82 ಸ್ಥಾನಗಳು ಕಾಂಗ್ರೆಸ್ಗೆ ಲಭಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಇಂಡಿಯಾ ಟಿವಿ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ, ಬಿಜೆಪಿ 49 ರಿಂದ 61 ಸೀಟುಗಳನ್ನು ಪಡೆಯಲಿದೆ. ಕಾಂಗ್ರೆಸ್ 29 ರಿಂದ 37 ಸ್ಥಾನಗಳನ್ನು ಪಡೆಯಬಹುದೆಂದು ಸಮೀಕ್ಷೆ ತಿಳಿಸಿದೆ.