ನಿವೃತ್ತರಿಗೂ ವೈದ್ಯಕೀಯ ಸೌಲಭ್ಯ ವಿಸ್ತರಣೆ : ಕಾರ್ಮಿಕ ರಾಜ್ಯ ವಿಮಾ ನಿಗಮ ನಿರ್ಧಾರ
Insurance: ಕಾರ್ಮಿಕ ರಾಜ್ಯ ವಿಮಾ ನಿಗಮವು ಆರೋಗ್ಯ ವಿಮೆಗೆ ಒಳಪಟ್ಟಿದ್ದ ನಿವೃತ್ತ ಉದ್ಯೋಗಿಗಳಿಗೆ ವೈದ್ಯಕೀಯ ವಿಸ್ತರಣೆ ಮಾಡಲು ನಿರ್ಧರಿಸಿದೆ.
Insurance Extension of medical facility to retires : ಆರೋಗ್ಯ ವಿಮೆಗೆ ಒಳಪಟ್ಟಿದ್ದ ನಿವೃತ್ತ ಉದ್ಯೋಗಿಗಳಿಗೆ ವೈದ್ಯಕೀಯ ಸೌಲಭ್ಯ ವಿಸ್ತರಿಬೇಕೆಂದು ಕಾರ್ಮಿಕ ರಾಜ್ಯ ವಿಮಾ ನಿಗಮ ನಿರ್ಧಾರ ಮಾಡಿದೆ. ಕೇಂದ್ರ ಕಾರ್ಮಿಕ ಸಚಿವಾಲಯವು ಶನಿವಾರ ನಡೆದ ನಿಗಮದ ಸಭೆಯಲ್ಲಿ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಈ ಕುರಿತ ನಿಯಮಾವಳಿಗಳನ್ನು ಸಡಿಲಿಸಲು ನಿರ್ಣಯ ಅಂಗೀಕರಿಸಲಾಗಿದೆ.
ಇ ಎಸ್ ಐ ಅರೋಗ್ಯ ವಿಮೆಯಿಂದ ಹೊರಗುಳಿದಿದ್ದ ನಿವೃತ್ತಿರಿಗೆ ಈ ವೈದ್ಯಕೀಯ ಪ್ರಯೋಜನ ದೊರೆಯಲಿದೆ. ಆದರೆ ಉದ್ಯೋಗಿಗಳು ನಿವೃತ್ತಿಗೂ ಅಥವಾ ಸ್ವಯಂ ನಿವೃತ್ತಿಗೂ ಮುಂಚೆ ವಿಮಾ ನೋಂದಣಿ ಮಾಡಿಸಿರಬೇಕಿದೆ ಎಂದು ತಿಳಿಸಿದೆ.
ಇದನ್ನು ಓದಿ : ಪ್ರೋ ಲೀಗ್ ಹಾಕಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಜಯ
2012ರ ಏಪ್ರಿಲ್ 1 ನಂತರ ಕನಿಷ್ಠ ಐದು ವರ್ಷಗಳ ಕಾಲ ಅರೋಗ್ಯ ವಿಮೆ ಮಾಡಿಸಿ ಉದ್ಯೋಗದಲ್ಲಿದ್ದವರು ಅಥವಾ 2017ರ ಏಪ್ರಿಲ್ 1 ರ ನಂತರ ಮಾಸಿಕ 30ರ ಸಾವಿರ ವೇತನದೊಂದಿಗೆ ನಿವೃತ್ತಿ, ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಗಳಿಗೆ ಈ ಹೊಸ ಯೋಜನೆಯಡಿ ವೈದ್ಯಕೀಯ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದೆ.
ಇದನ್ನು ಓದಿ : Shriya Saran: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಕೆಂಪು ಗುಲಾಬಿಯಂತೆ ಮಿಂಚಿದ ಕಬ್ಜ ಬೆಡಗಿ!
ಕರ್ನಾಟಕದ ಉಡುಪಿ ಮತ್ತು ಕೇರಳದ ಇಡುಕ್ಕಿಯಲ್ಲಿ ತಲಾ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ನಿರ್ಮಿಸಲು ನಿರ್ಧಾರ ಮಾಡಿದೆ.
ಪಂಜಾಬ್ ನ ಮಲೇಕೊರಕೋಟಾ ೧೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಿದ್ದಾರೆ. ಈ ವೇಳೆ ವೈದ್ಯಕೀಯ ಆರೈಕೆಯ ಮೂಲ ಸೌಕರ್ಯ ಬಲವರ್ಧನೆಗೆ ಸಭೆ ಅನುಮೋದನೆ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.