ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಸಂಬಂಧವು ಎರಡೂ ದೇಶಗಳಿಗೆ ಮತ್ತು ಜಗತ್ತಿಗೆ 'ಬಹಳ ಮುಖ್ಯ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಸೋಮವಾರ ಹೇಳಿದ್ದಾರೆ. ಆದ್ದರಿಂದ ಎರಡೂ ಕಡೆಯವರು ಈ ವಾಸ್ತವತೆಯನ್ನು ಅರಿತುಕೊಂಡು ಒಂದು ನಿರ್ಧಾರಕ್ಕೆ ಬರುವುದು ಅತ್ಯಗತ್ಯವಾಗಿದೆ.


COMMERCIAL BREAK
SCROLL TO CONTINUE READING

ಯುಎಸ್-ಇಂಡಿಯಾ (US-India) ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನ ಸಂವಾದ ಅಧಿವೇಶನದಲ್ಲಿ ಯುಎಸ್‌ಐಎಸ್‌ಪಿಎಫ್ (US-India Strategic Partnership Forum, USISPF), ವಿಶ್ವದ ಪ್ರತಿಯೊಂದು ದೇಶದಂತೆಯೇ ಭಾರತವು ಚೀನಾದ ಪ್ರಗತಿಯ ಬಗ್ಗೆಯೂ ಪರಿಚಿತವಾಗಿದೆ. ಆದರೆ ಭಾರತದ ಪ್ರಗತಿಯು ಜಾಗತಿಕ ಕಥೆಯಾಗಿದೆ ಎಂದು ಹೇಳಿದರು.


ಡಿಜಿಟಲ್ ಕಾರ್ಯಕ್ರಮದಲ್ಲಿ ಚೀನಾದ ಉದಯ, ಭಾರತದ ಮೇಲೆ ಅದರ ಪರಿಣಾಮ ಮತ್ತು ಉಭಯ ದೇಶಗಳ ಸಂಬಂಧದ ಮೇಲಿನ ಪರಿಣಾಮಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿದೇಶಾಂಗ ಸಚಿವರು ಉತ್ತರಿಸುತ್ತಿದ್ದರು.


ಪೂರ್ವ ಲಡಾಕ್‌ನಲ್ಲಿ ಭಾರತೀಯ ಮತ್ತು ಚೀನಾ (China) ಪಡೆಗಳ ನಡುವೆ ನಾಲ್ಕು ತಿಂಗಳ ಹಳೆಯ ಗಡಿ ವಿವಾದದ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಈ ಹೇಳಿಕೆ ಬಂದಿದೆ. ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಎಲ್ಲಾ ಸಂಬಂಧಗಳ ಮೇಲೆ ಈ ವಿವಾದವು ಪರಿಣಾಮ ಬೀರಿದೆ.


ಸ್ವದೇಶದಲ್ಲಿ 3 ಗಂಭೀರ ಸಮಸ್ಯೆ ಎದುರಿಸುತ್ತಿರುವ ಚೀನಾ


ತಮ್ಮ ಪುಸ್ತಕವನ್ನು ಉಲ್ಲೇಖಿಸಿ ಅವರು, 'ವಿಶ್ವದ ಇತರ ದೇಶಗಳಂತೆ, ಚೀನಾದ ಪ್ರಗತಿಯ ಬಗ್ಗೆಯೂ ನಮಗೆ ಪರಿಚಯವಿದೆ. ನಾವು ಚೀನಾದ ನೆರೆಹೊರೆಯವರು. ನಿಸ್ಸಂಶಯವಾಗಿ, ನೀವು ನೆರೆಹೊರೆಯವರಾಗಿದ್ದರೆ, ನನ್ನ ಪುಸ್ತಕದಲ್ಲಿ ನಾನು ಹೇಳಿರುವ ಏರಿಕೆಯಿಂದ ನೀವು ನೇರವಾಗಿ ಪರಿಣಾಮ ಬೀರುತ್ತೀರಿ ಎಂದು ತಿಳಿಸಿದ್ದಾರೆ.


ಅವರು ತಮ್ಮ 'ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಎ ಅನ್‌ಸರ್ಪಾಸ್ಡ್ ವರ್ಲ್ಡ್' ಪುಸ್ತಕವನ್ನು ಉಲ್ಲೇಖಿಸಿದ್ದಾರೆ. ಈ ಪುಸ್ತಕವನ್ನು ಇನ್ನೂ ಬಿಡುಗಡೆ ಆಗಿಲ್ಲ ಎಂಬುದು ಗಮನಾರ್ಹ.


ಭಾರತವೂ ಮುಂದೆ ಸಾಗುತ್ತಿದೆ, ಆದರೆ ಅದರ ವೇಗವು ಚೀನಾದಷ್ಟು ಹೆಚ್ಚಿಲ್ಲ.  'ಆದರೆ, ಕಳೆದ 30 ವರ್ಷಗಳನ್ನು ನೋಡಿದರೆ, ಭಾರತದ ಪ್ರಗತಿಯು ಜಾಗತಿಕ ಕಥೆಯಾಗಿದೆ. ನೀವು ಎರಡು ದೇಶಗಳನ್ನು ಹೊಂದಿದ್ದರೆ, ಶತಕೋಟಿ ಜನಸಂಖ್ಯೆ ಹೊಂದಿರುವ ಎರಡು ಸಮಾಜಗಳು, ಇತಿಹಾಸ, ಸಂಸ್ಕೃತಿ, ಆಗ ಅವುಗಳ ನಡುವೆ ಒಂದು ರೀತಿಯ ತಿಳುವಳಿಕೆ ಅಥವಾ ಸಹನೆ ಇರುವುದು ಮುಖ್ಯ  ಎಂದು ವಿದೇಶಾಂಗ ಸಚಿವರು ಹೇಳಿದರು.