ನವದೆಹಲಿ: ಸಾಮಾಜಿಕ ತಾಣ ಫೇಸ್‌ಬುಕ್ ಭಾರತದ ಕಂಪನಿಯೊಂದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಮುಂಬೈ ಮೂಲದ ಈ ಕಂಪನಿಯು ಫೇಸ್‌ಬುಕ್ (Facebook) ಹೆಸರನ್ನು ಬಳಸಿದೆ ಎಂದು ಕಂಪನಿ ಆರೋಪಿಸಿದೆ, ಇದು ವಂಚನೆಗೆ ಸಂಬಂಧಿಸಿದ ಪ್ರಕರಣವೆಂದು ತೋರುತ್ತದೆ. ಅಂತಹ 12 ಡೊಮೇನ್ ಹೆಸರುಗಳನ್ನು ಕಂಪನಿಯು ಬಳಸಿದೆ ಎಂದು ಆರೋಪಿಸಲಾಗಿದೆ.


COMMERCIAL BREAK
SCROLL TO CONTINUE READING

ಏನಿದು ಪ್ರಕರಣ?
ಮುಂಬೈ ಮೂಲದ ಕಂಪನಿಯ ವಿರುದ್ಧ ವರ್ಜೀನಿಯಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಫೇಸ್‌ಬುಕ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಂಬೈ ಮೂಲದ ಕಂಪನಿ ಕಂಪಾಸಿಸ್ ಡೊಮೇನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಫೇಸ್‌ಬುಕ್ ಹೆಸರನ್ನು ಹೋಲುವ 12 ಡೊಮೇನ್‌ಗಳನ್ನು ರಚಿಸಿದೆ. ಈ ಭಾರತೀಯ ಕಂಪನಿ ಫೇಸ್‌ಬುಕ್ ಹೆಸರಿನಲ್ಲಿ ವಂಚನೆ ಮತ್ತು ರಿಗ್ಗಿಂಗ್ ಮಾಡಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.


ಸಂತಸದ ಸುದ್ದಿ! ನೀವು ಕಾಯುತ್ತಿದ್ದ ವೈಶಿಷ್ಟ್ಯ ಬಿಡುಗಡೆಗೊಳಿಸಿದ WhatsApp


ಈ ಭಾರತೀಯ ಕಂಪನಿಯು ಫೇಸ್‌ಬುಕ್‌ನಂತೆಯೇ ಡೊಮೇನ್ ಹೆಸರುಗಳನ್ನು ನೋಂದಾಯಿಸಿಕೊಂಡಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ತಜ್ಞರು ಹೇಳುತ್ತಾರೆ. ಇವುಗಳಲ್ಲಿ facebook-verify-inc.com, instagramhjack.com ಮತ್ತು videocall-whatsapp.com ನಂತಹ ಸೈಟ್‌ಗಳು ಸೇರಿವೆ. ಅವುಗಳನ್ನು ನೋಡಿದರೆ ಈ ಸೈಟ್‌ಗಳನ್ನು ರಿಗ್ ಅಥವಾ ವಂಚನೆ ಮಾಡುವ ಜನರಿಂದ ಮಾತ್ರ ವಿನ್ಯಾಸಗೊಳಿಸಲಾಗಿದೆ ಎಂದು ತೋರುತ್ತದೆ ಎಂದು ಉಲ್ಲೇಖಿಸಲಾಗಿದೆ.


Twitter ನಲ್ಲಿ ಇನ್ಮುಂದೆ Tweet ಜೊತೆಗೆ Fleet ಕೂಡ ಮಾಡಿ...ಏನಿದು ಹೊಸ ವೈಶಿಷ್ಟ್ಯ?


ಫೇಸ್‌ಬುಕ್ ತನ್ನ ಹೆಸರಿಗೆ ಸಂಬಂಧಿಸಿದ ಎಲ್ಲಾ ಸೈಟ್‌ಗಳು ಮತ್ತು ಡೊಮೇನ್‌ಗಳನ್ನು ಇಂಟರ್ನೆಟ್‌ನಲ್ಲಿ ಪರಿಶೀಲಿಸುತ್ತಿದೆ. ಈ ವರ್ಷದ ಮಾರ್ಚ್‌ನಲ್ಲಿ ಕಂಪನಿಯು ಅರಿ ಜೋನಾ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿತು. ಈ ಸ್ಥಳೀಯ ಕಂಪನಿಯು ಫೇಸ್‌ಬುಕ್‌ನಂತೆಯೇ ಒಂದು ಸೈಟ್‌ ಅನ್ನು ಸಹ ರಚಿಸಿದೆ.