ನವದೆಹಲಿ : IRCTC/Indian Railways : ಕರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ಬರುತ್ತಿದ್ದಂತೆ, ದೇಶಾದ್ಯಂತ  ರೈಲು ಸೇವೆಯನ್ನು ಮತ್ತೆ ಆರಂಭಿಸಲಾಗಿದೆ. ಪಶ್ಚಿಮ ರೈಲ್ವೆ, ಕೇಂದ್ರ ರೈಲ್ವೆ, ಉತ್ತರ ರೈಲ್ವೆ, ಪೂರ್ವ ರೈಲ್ವೆ, ಉತ್ತರ ಮಧ್ಯ ರೈಲ್ವೆ ಮತ್ತು ಪಶ್ಚಿಮ ಮಧ್ಯ ರೈಲ್ವೆ ಮೂಲಕ ಜನರಿಗೆ ನಿರಂತರವಾಗಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ರೈಲು ಪ್ರಯಾಣಿಕರ ಅನುಕೂಲಕ್ಕಾಗಿ, ಹೆಚ್ಚಿನ ರೈಲ್ವೆ ವಲಯಗಳು ರೈಲುಗಳ ಕಾರ್ಯಾಚರಣೆಯ ಪಟ್ಟಿಯನ್ನು ಬಿಡುಗಡೆ ಮಾಡಿವೆ. 


COMMERCIAL BREAK
SCROLL TO CONTINUE READING

ಈ ಮಧ್ಯೆ, ರೈಲುಗಳಲ್ಲಿ (Indian Railway) ಪ್ರಯಾಣಿಸುವ ಜನರು ಒಂದು ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಇದೀಗ, ಮೋಸದ ಜಾಲವೊಂದು ರೈಲುಗಳಲ್ಲಿ (Train) ಕಾರ್ಯಗತವಾಗಿರುವ ಬಗ್ಗೆ ವರದಿಯಾಗಿದೆ. ರೈಲುಗಳಲ್ಲಿ ತಮ್ಮನ್ನು ಟಿಕೆಟ್ ಪರೀಕ್ಷಕರು (TTE) ಎಂದು ಹೇಳಿಕೊಂಡು ಪ್ರಯಾಣಿಕರಿಗೆ ಮೋಸ ಮಾಡುತ್ತಿರುವ ತಂಡದ ಬಗ್ಗೆ ವರದಿಯಾಗಿದೆ. ಈ ನಕಲಿ ಟಿಕೆಟ್ ಪರೀಕ್ಷಕರು (Fake TTE) ಜನರಿಂದ ಮಾನ್ಯ ಟಿಕೆಟ್ ಇದೆಯೋ ಇಲ್ಲವೋ ಎಂದು ನೋಡಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ರೈಲು ಸಂಖ್ಯೆ 5002 ರಲ್ಲಿ ಅಂತಹ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಮೇ 6 ರಂದು ಡೆಹ್ರಾಡೂನ್‌ನಿಂದ ಮುಜಾಫರ್ಪುರಕ್ಕೆ ಹೋಗುವ ರೈಲು ಸಂಖ್ಯೆ 5002 ರಾಯ್ ವಾಲಾ ಮತ್ತು ಹರಿದ್ವಾರ ನಡುವೆ ಈ ರೀತಿ ಮೋಸ ಮಾಡುತ್ತಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿರುವುದಾಗಿ, ಮೊರಾದಾಬಾದ್ ವಿಭಾಗದ ಅಧಿಕಾರಿ ವಿ.ಕೆ.ಶರ್ಮಾ ತಿಳಿಸಿದ್ದಾರೆ. 


ಇದನ್ನೂ ಓದಿ : National Covid-19 Vaccination Program: ವ್ಯಾಕ್ಸಿನ್ ಪ್ರೋಗ್ರಾಮ್ ಗಾಗಿ ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿಗಳು, ಜೂನ್ 21ರಿಂದ ಅನ್ವಯ


ಕಪ್ಪು ಪ್ಯಾಂಟ್ ಮತ್ತು ಬಿಳಿ ಶರ್ಟ್ ಧರಿಸಿದ ವ್ಯಕ್ತಿಯೂ ಐಡಿ ಕಾರ್ಡ್ (ID card) ಕೂಡಾ ಹೊಂದಿದ್ದ ಎನ್ನಲಾಗಿದೆ. ಆ ವ್ಯಕ್ತಿ ತನ್ನನ್ನು TTE  ಅಂದರೆ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ ಎಂದು ಹೇಳಿಕೊಂಡಿದ್ದ. ಅಲ್ಲದೆ, ತನ್ನ ಪೋಸ್ಟಿಂಗ್ ಡೆಹ್ರಾಡೂನ್‌ನಲ್ಲಿರುವುದಾಗಿ, ಹೇಳಿಕೊಂಡಿದ್ದ. ಆದರೆ, ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ವ್ಯಕ್ತಿ ನೀಡುತ್ತಿರುವ ಎಲ್ಲಾ ಮಾಹಿತಿ ಸುಳ್ಳು ಎನ್ನುವುದು ಬಹಿರಂಗಾವಾಗಿದೆ.  ತಕ್ಷಣ  ಮಾಹಿತಿಯನ್ನು  ಹರಿದ್ವಾರ RPF ಮತ್ತು GRPಗೆ  ವರದಿ ಮಾಡಲಾಗಿದೆ ಎಂದು ವಿಕೆ ಶರ್ಮಾ (V K Sharma) ಹೇಳಿದ್ದಾರೆ. 


ಇದನ್ನೂ ಓದಿ : Alert! ದೇಶಕ್ಕೆ ಎಂಟ್ರಿ ಕೊಟ್ಟ Coronavirus ಹೊಸ ರೂಪಾಂತರಿ! ಯಾರಿಗೆ ಹೆಚ್ಚು ಅಪಾಯ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.