Shocking: ಮಂಚದಡಿ ಮಲಗಿದ್ದ ಬೃಹತ್ ಮೊಸಳೆ ಕಂಡು ಹೌಹಾರಿದ ರೈತ!
ಸೋಮವಾರ ಬೆಳಗಿನ ಜಾವ 1.30ರಲ್ಲಿ ಮನೆಯ ಹೊರಗೆ ನಾಯಿಗಳು ಬೊಗಳುತ್ತಿದ್ದ ಸದ್ದು ಕೇಳಿ ಎಚ್ಚರಗೊಂಡ ರೈತ ಬಾಬುಭಾಯ್, ಮಂಚದ ಕೆಳಗೆ ಮೊಸಳೆ ಮಲಗಿರುವುದು ಕಂಡು ಹೌಹಾರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ವಸತಿ ಬಡಾವಣೆಗಳಿಗೆ ನುಗ್ಗುತ್ತಿರುವ ಪ್ರಕರಣಗಳು ಗುಜರಾತಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಅಂತಹದೇ ಪ್ರಕರಣ ಕೇಂದ್ರ ಗುಜರಾತಿನ ವಿದ್ಯಾನಗರ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ಆದರೆ, ಸೋಮವಾರ ಬೆಳಗಿನ ಜಾವ 1.30ರಲ್ಲಿ ಮನೆಯ ಹೊರಗೆ ನಾಯಿಗಳು ಬೊಗಳುತ್ತಿದ್ದ ಸದ್ದು ಕೇಳಿ ಎಚ್ಚರಗೊಂಡ ರೈತ ಬಾಬುಭಾಯ್, ಮಂಚದ ಕೆಳಗೆ ಮೊಸಳೆ ಮಲಗಿರುವುದು ಕಂಡು ಹೌಹಾರಿದ್ದಾರೆ. ಮೊಸಳೆ ಕಂಡು ನಡುಗುತ್ತಲೇ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಬಳಿಕ ಮನೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ.