Farmers Protest: `ಕೃಷಿ ಕಾನೂನುಗಳಿಗೆ ನೀವು ತಡೆ ನೀಡದಿದ್ದರೆ, ಆ ಕೆಲಸ ನಾವು ಮಾಡಬೇಕಾದೀತು`
Farmers Protest:ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ, ಕೃಷಿ ಕಾನೂನುಗಳಿಗೆ ಕೇಂದ್ರ ಸರ್ಕಾರ ತಡೆ ನೀಡಲಿದೆಯೋ ಅಥವಾ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದೆ ಹೋದರೆ ನಾವು ತಡೆ ನೀಡಬೇಕಾಗುತ್ತದೆ ಎಂದು ಹೇಳಿದೆ.
Farmers Protest - ನವದೆಹಲಿ: ನೂತನ ಕೃಷಿ ಕಾನೂನುಗಳು ಹಾಗೂ ರೈತರ ಪ್ರತಿಭಟನೆಯ ಕುರಿತಾಗಿ ದಾಖಲಾಗಿರುವ ಅರ್ಜಿಗಳ ಕುರಿತು ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿದೆ. ಕಳೆದ 47 ದಿನಗಳಿಂದ ರೈತರು ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ಕಾನೂನುಗಳನ್ನು ಹಿಂಪಡೆಯಲು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಏತನ್ಮಧ್ಯೆ ಸರ್ಕಾರ ಹಾಗೂ ರೈತರ ನಡುವೆ ಈ ಕುರಿತು ಒತ್ತು 8 ಸುತ್ತು ಮಾತುಕತೆ ನಡೆದಿದೆ. ಆದರೆ ಕೃಷಿ ಕಾನೂನುಗಳ ಕುರಿತು ಯಾವುದೇ ಸಮಾಧಾನ ಹೊರಬಂದಿಲ್ಲ.
ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು
ಈ ಕುರಿತಾಗಿ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್, 'ನೂತನ ಕಾನೂನುಗಳಿಗೆ ನೀವು ತಡೆ ನೀಡುವಿರೋ ಅಥವಾ ಇಲ್ಲ ಸ್ಪಷ್ಟಪಡಿಸಿ. ಇಲ್ಲದಿದ್ದರೆ ನಾವು ತಡೆ ನೀಡುವೆವು". ಎಂದು ಹೇಳಿದೆ. ವಿಚಾರಣೆಯ ವೇಳೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, "ಸರ್ಕಾರ ಈ ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿಯಿಂದ ನ್ಯಾಯಪೀಠ ಅಸಮಾಧಾನಗೊಂಡಿದೆ. ಸರ್ಕಾರ ಈ ಪ್ರಕರಣವನ್ನು ಯಾವ ರೀತಿ ನಿರ್ವಹಿಸುತ್ತಿದೆ ಎಂಬುದೇ ನಮಗೆ ತಿಳಿಯುತ್ತಿಲ್ಲ. ಕಾನೂನು ರೂಪಿಸುವ ಮೊದಲು ಯಾರ ಜೊತೆಗೆ ಚರ್ಚೆ ನಡೆಸಿದ್ದೀರಿ? ಮಾತುಕತೆ ನಡೆಸಲಾಗುತ್ತಿದೆ ಎಂದು ಹಲವು ಬಾರಿ ಹೇಳುತ್ತಿರುವಿರಿ. ಆದರೆ, ಏನು ಮಾತುಕತೆ ನಡೆಸುತ್ತಿರುವಿರಿ? "ಎಂದು ಪ್ರಶ್ನಿಸಿದೆ.
ಸ್ಪಷ್ಟನೆ ನೀಡಿದ ಅಟಾರ್ನಿ ಜನರಲ್
ಈ ಕುರಿತು ಸ್ಪಷ್ಟನೆ ನೀಡಿರುವ ಅಟಾರ್ನಿ ಜನರಲ್ ಕಾನೂನುಗಳು ರೂಪಗೊಳ್ಳುವ ಮೊದಲು ತಜ್ಞರ ಸಮಿತಿ ರಚಿಸಲಾಗಿದೆ. ಹಲವರ ಜೊತೆಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಮೊದಲಿನ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಿವೆ ಎಂದು ಹೇಳಿದ್ದಾರೆ. ಮೊದಲಿನ ಸರ್ಕಾರಗಳು ಇದನ್ನು ಆರಂಭಿಸಿವೆ ಎಂಬುದು ಹೇಳುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ CJI ಹೇಳಿದ್ದಾರೆ. ಆದರೆ, ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಬೇಕು ಎಂಬುದು ನ್ಯಾಯಪೀಠ ಹೇಳಿದೆ. ಒಂದು ವೇಳೆ ನಿಮ್ಮ ಬಳಿ ತಿಳುವಳಿಕೆ ಇದ್ದರೆ. ಕಾನೂನು ಜಾರಿಗೆ ಒತ್ತು ನೀಡಬೇಡಿ ಹಾಗೂ ಮಾತುಕತೆ ನಡೆಸಿ. ನಾವು ಕೂಡ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ್ದು, ಸಮಿತಿ ರಚಿಸಲು ಬಯಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ-ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ 40 ವರ್ಷದ ಪಂಜಾಬ್ ರೈತ ಸಾವು
ಪ್ರತಿಭಟನೆಗಳ ಮೇಲೂ ಕೂಡ ಸುಪ್ರೀಂ ಟಿಪ್ಪಣಿ
ಪ್ರತಿಭಟನೆ ನಡೆಸಬೇಡಿ ಎಂದು ದೇಶದ ಯಾವುದೇ ನಾಗರಿಕರಿಗೆ ಸುಪ್ರೀಂ ಕೋರ್ಟ್ ಹೇಳುವ ಹಾಗಿಲ್ಲ ಎಂದು ಮುಖ್ಯನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೆ, ಪ್ರದರ್ಶನಕ್ಕಾಗಿ ನೀವು ಈ ಸ್ಥಾನವನ್ನು ಆಯ್ದುಕೊಳ್ಳಬೇಕು ಎಂಬುದನ್ನು ಹೇಳಬಹುದು. ಯಾವುದೇ ಒಂದು ಅಹಿತಕರ ಘಟನೆ ನಡೆದರೆ ಅದಕ್ಕೆ ಎಲ್ಲರು ಹೊಣೆಗಾರರು. ನಮ್ಮ ಕೈಗಳನ್ನು ರಕ್ತಸಿಕ್ತವಾಗಿಸುವುದನ್ನು ನಾವು ಬಯಸುವುದಿಲ್ಲ ಎಂದಿದ್ದಾರೆ. ಧರಣಿ ಸತ್ಯಾಗ್ರಹದ ಕುರಿತು ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ, ಇದರಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬುದು ನ್ಯಾಯಪೀಠದ ಆಶಯ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಇದನ್ನು ಓದಿ- ಸೋಮವಾರ ಸರ್ಕಾರ ರೈತ ಸಂಘಟನೆಗಳ ನಡುವೆ ನಿರ್ಣಾಯಕ ಮಾತುಕತೆ, ಗರಿಗೆದರಿದ ಕುತೂಹಲ..!
ರೈತ ಸಂಘಟನೆಗಳನ್ನು ಪ್ರಶ್ನಿಸಿದ ಮುಖ್ಯನ್ಯಾಯಮೂರ್ತಿಗಳು
ಪರಿಸ್ಥಿತಿ ತುಂಬಾ ಬಿಗದಾಯಿಸುತ್ತಿದೆ ಮತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀರಿನ ವ್ಯವಸ್ಥೆ ಇಲ್ಲ, ಮೂಲಭೂತ ಸೌಕರ್ಯಗಳಿಲ್ಲ ಹಾಗೂ ವೈಯಕ್ತಿಕ ಅಂತರ ಕಾಯುವಿಕೆಯನ್ನೂ ಕೂಡ ಪಾಲಿಸಲಾಗುತ್ತಿಲ್ಲ. ಇಂತಹ ಕೊರೆಯುವ ಚಳಿಯಲ್ಲಿ ಮಹಿಳೆಯರು ಹಾಗೂ ವೃದ್ಧರು ಯಾಕೆ ಪಾಲ್ಗೊಂಡಿದ್ದಾರೆ ಎಂದು ಜಸ್ಟಿಸ್ ಬೊಬ್ಡೆ ರೈತ ಸಂಘಟನೆಗಳ ಮುಖ್ಯಸ್ಥರನ್ನು ಪ್ರಶ್ನಿಸಿದ್ದಾರೆ.
ರೈತ ಪರ ವಕೀಲರಿಗೆ ತಪರಾಕಿ
ಈ ಸಂದರ್ಭದಲ್ಲಿ ರೈತರ ಪರ ವಾದ ಮುಂದಾದ ವಕೀಲ ಎ.ಪಿ ಸಿಂಗ್ ಅವರಿಗೆ ತಪರಾಕಿ ಹಾಕಿರುವ ಸುಪ್ರೀಂ ಕೋರ್ಟ್, ಇದು ಸುಪ್ರೀಂ ಕೋರ್ಟ್ ಆಗಿದೆ ಎಂಬ ವಿಶ್ವಾಸ ನಿಮಗಿಲ್ಲವೆ ಎಂದು ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.