ನವದೆಹಲಿ: ಕೇಂದ್ರ ಸರ್ಕಾರ (Union Government) ಜಾರಿಗೆ ತಂದಿರುವ ಕೃಷಿ ಕಾನೂನು (Farm Bill) ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಇದೀಗ ನಿರ್ಣಾಯಕ (decisive stage) ಘಟ್ಟದಲ್ಲಿದೆ. ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ರೈತರ ನಡುವೆ ಇದುವರೆಗೆ ನಡೆದ ಆರು ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡಿಲ್ಲ. ದೆಹಲಿ ಗಡಿ (Delhi Borders) ಡೇರೆ ಹಾಕಿಕೊಂಡು ರೈತರ ಪ್ರತಿಭಟನೆ ಹಾಗೇ ಮುಂದುವರಿದೆ.
ಸೋಮವಾರ 7ನೇ ಸುತ್ತಿನ ಮಾತುಕತೆ :
ಈ ಮಧ್ಯೆ, ರೈತರು (Farmers) ಮತ್ತು ಸರ್ಕಾರದ ನಡುವಣ 7 ನೇ ಸುತ್ತಿನ ಮಾತುಕತೆ ಸೋಮವಾರ ನಡೆಯಲಿದೆ. ವಿಜ್ಞಾನ ಭವನದಲ್ಲಿ ಈ ಮಾತುಕತೆ ನಡೆಯಲಿದೆ. ಡಿಸೆಂಬರ್ 30 ರಂದು ರೈತರು ಮತ್ತು ಸರ್ಕಾರದ ನಡುವೆ 6 ನೇ ಸುತ್ತಿನ ಮಾತುಕತೆ ನಡೆದಿತ್ತು. ಈ ಮಾತುಕತೆ ವೇಳೆ ರೈತರ ನಾಲ್ಕು ಬೇಡಿಕೆಗಳ ಪೈಕಿ ಎರಡು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿತ್ತು. ಆದರೆ, ಎಂಎಸ್ ಪಿ (MSP)ಗೆ ಕಾನೂನು ಖಾತರಿ ಮತ್ತು ಕೃಷಿ ಕಾನೂನು ರದ್ದತಿ (Repeal of three new farm laws) ಕುರಿತಂತೆ ಉಭಯ ಬಣಗಳಲ್ಲೂ ಸಹಮತ ವ್ಯಕ್ತವಾಗಿರಲಿಲ್ಲ.
ALSO READ : ಉದ್ಯೋಗ ಖಾತರಿ ಯೋಜನೆ ಕನಿಷ್ಠ ವೇತನ ಹೆಚ್ಚಿಸಿದ ಜಾರ್ಖಂಡ್ ಸರ್ಕಾರ
ಕೃಷಿ ಕಾನೂನು ರದ್ದತಿಗೆ ರೈತರ ಹಠ..!
ಕೃಷಿ ಕಾನೂನು ರದ್ದು ಪಡಿಸದ ಹೊರತು ಹೋರಾಟ (Farmer protest) ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ರೈತ ನಾಯಕರು. ಕೃಷಿ ಕಾನೂನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಬೇಕಾದರೆ, ಕಾನೂನಿಗೆ ತಿದ್ದುಪಡಿ ತರೋಣ ಎಂದು ಹೇಳಿ ಜಪ್ಪಯ್ಯ ಅಂತ ಕುಳಿತಿದೆ ಕೇಂದ್ರ ಸರ್ಕಾರ. ಈ ಬಿಕ್ಕಟ್ಟು 7 ನೇ ಸುತ್ತಿನ ಮಾತುಕತೆಯಲ್ಲಿ ಬಗೆಹರಿಯಬಹುದು ಎಂಬ ವಿಶ್ವಾಸದಲ್ಲಿದೆ ಕೇಂದ್ರ ಸರ್ಕಾರ.
ಮಾತುಕತೆ ವಿಫಲವಾದರೆ ಉಗ್ರ ಸ್ವರೂಪದ ಹೋರಾಟ:
ಒಂದು ವೇಳೆ ಏಳನೇ ಸುತ್ತಿನ ಮಾತುಕತೆ ವಿಫಲವಾದಲ್ಲಿ, ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ ರೈತ ಸಂಘಟನೆಗಳು. ದೆಹಲಿಯತ್ತ ಟ್ರ್ಯಾಕ್ಟರ್ ಜಾಥಾ (tractor march) ನಡೆಸುವ ಎಚ್ಚರಿಕೆ ಕೊಟ್ಟಿವೆ. ಜೊತೆ ಗಣರಾಜ್ಯೋತ್ಸವದಂದು ರಾಜಪಥಕ್ಕೆ (Rajapath) ಟ್ಯಾಕ್ಟರ್ ನುಗ್ಗಿಸುವುದಾಗಿ ಹೇಳಿವೆ ರೈತ ಸಂಘಟನೆಗಳು. ಹಾಗಾಗಿ ಮಾಡು ಇಲ್ಲವೆ ಮಡಿ ಎಂಬಂತಿದೆ ನಾಳೆಯ ಮಾತುಕತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.