Farmer protest : ಇಂದು ದೇಶಾದ್ಯಂತ ರೈತರಿಂದ ರೈಲು ತಡೆ ಚಳವಳಿ, ಮಧ್ಯಾಹ್ನ ರೈಲು ಸಂಚಾರ ವ್ಯತ್ಯಯ ಸಾಧ್ಯತೆ
ಕೃಷಿ ಕಾನೂನು ವಿರೋಧಿಸಿ ಇಂದು ದೇಶಾದ್ಯಂತ ರೈತರು ರೈಲು ತಡೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲು ತಡೆ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ.
ದೆಹಲಿ : ಕೃಷಿ ಕಾನೂನು (Farm law) ವಿರೋಧಿಸಿ ಇಂದು ದೇಶಾದ್ಯಂತ ರೈತರು ರೈಲು ತಡೆ (Rail rokho) ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲು ತಡೆ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ. ರೈಲು ತಡೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕೂಡಾ ಎಲ್ಲಾ ಕ್ರಮಗಳನ್ನು ಅನುಸರಿಸಿದೆ. ದೇಶಾದ್ಯಂತ ಎಲ್ಲಾ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಜರುಗಿಸಲಾಗಿದೆ.
ರಾಜ್ಯದಲ್ಲೂ ರೈಲು ತಡೆ :
ರೈತರ ರೈಲು ತಡೆ (Rail rokho) ಆಂದೋಲನಕ್ಕೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದೆ. ರಾಜ್ಯಾದ್ಯಂತ ಹಲವು ಕಡೆ ರೈತರು ರೈಲು ತಡೆ ನಡೆಸಲಿದ್ದಾರೆ. ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಕರ್ನಾಟಕದಲ್ಲಿ ರೈಲು ತಡೆಗೆ ಕರೆ ನೀಡಲಾಗಿದೆ. 12 ಗಂಟೆಯಿಂದ 4 ಗಂಟೆಯ ತನಕ ರೈಲು (Rail) ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : Toolkit ಪ್ರಕರಣದ ಮಾಸ್ಟರ್ ಮೈಂಡ್ ನಿಖಿತಾ ಜಾಕೋಬ್: ಗ್ರೇಟಾ ಥಂಬರ್ಗ್ ಎಂಟ್ರಿ ಆಗಿದ್ದು ಹೇಗೆ?
ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ :
ಪಂಜಾಬ್ (Punjab), ಹರಿಯಾಣ, ಉತ್ತರಪ್ರದೇಶ (Uttar pradesh) ಮತ್ತು ಪಶ್ಚಿಮ ಬಂಗಾಳದಲ್ಲಿ ವಿಶೇಷ ಕಣ್ಗಾವಲು ಇರಿಸಲಾಗಿದೆ. ರೈಲ್ವೆ ಸುರಕ್ಷಾ (Railway security) ಬಲದ 20 ಕಂಪನಿಯ ಸುಮಾರು 20 ಸಾವಿರ ಯೋಧರನ್ನು ಇಲ್ಲಿ ನಿಯೋಜಿಸಲಾಗಿದೆ.
ಸರ್ಕಾರದ ಮೇಲೆ ಒತ್ತಡ ಹೇರಲು ತಂತ್ರ :
ರೈಲು ತಡೆ ಚಳವಳಿ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯನ್ನು ರೈತರು ಮಾಡಿದ್ದಾರೆ. ಸರ್ಕಾರ ಕೃಷಿ ಕಾನೂನನ್ನು (Farm law) ಹಿಂಪಡೆಯುವ ತನಕ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ : PM Fasal Bima Yojana: ರೈತರಿಗೆ ಸಿಗಲಿದೆ ಬೆಳೆ ವಿಮೆಯ ಗರಿಷ್ಠ ಲಾಭ
ರೈಲಿನ ಸಂಚಾರಕ್ಕೆ ತಡೆ ಒಡ್ಡುವುದು, ರೈಲು ಹಳಿಗಳನ್ನು ನಾಶ ಪಡಿಸುವುದು ರೈಲ್ವೆ ಕಾಯಿದೆ ಪ್ರಕಾರ ಅಪರಾಧ. ಇದಕ್ಕೆ 2 ವರ್ಷ ಜೈಲು ಶಿಕ್ಷೆಯಾಗುತ್ತದೆ.
ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ (Farmer protest) ಆರಂಭಿಸಿದ ಹಿನ್ನೆಲೆಯಲ್ಲಿ ರೈತರು ಮತ್ತು ಸರ್ಕಾರದ ನಡುವೆ 11 ಸುತ್ತಿನ ಮಾತುಕತೆ ನಡೆದಿತ್ತು. ಆದರೆ 11 ಸುತ್ತಿನ ಮಾತುಕತೆಯೂ ಯಾವುದೇ ಫಲ ನೀಡಿರಲಿಲ್ಲ. ನಡುವೆ ದೆಹಲಿ ಕೆಂಪುಕೋಟೆಯಲ್ಲಿ ನಡೆದ ರೈತ ಆಂದೋಲನದ ವೇಳೆ ಹಿಂಸಾಚಾರವೂ ನಡೆದಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.