Toolkit ಪ್ರಕರಣದ ಮಾಸ್ಟರ್ ಮೈಂಡ್ ನಿಖಿತಾ ಜಾಕೋಬ್: ಗ್ರೇಟಾ ಥಂಬರ್ಗ್ ಎಂಟ್ರಿ ಆಗಿದ್ದು ಹೇಗೆ?

ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ  ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಭಾರತದ ಹೆಸರು ಕೆಡಿಸುವ ಹುನ್ನಾರದಲ್ಲಿ ರಚಿಸಲಾದ ಟೂಲ್ ಕಿಟ್  ಹೊಸ ತಿರುವು ಪಡೆದುಕೊಳ್ಳುತ್ತಿದೆ. 

Written by - Ranjitha R K | Last Updated : Feb 17, 2021, 03:49 PM IST
  • ದಿನಕ್ಕೊಂದು ತಿರುವು ಪಡೆಯುತ್ತಿರುವ ಟೂಲ್ ಕಿಟ್ ಪ್ರಕರಣ
  • ಆರೋಪಿಗಳ ಮುಖವಾಡ ಬಯಲಿಗೆಳೆಯುತ್ತಿರುವ ದೆಹಲಿ ಪೋಲೀಸರು
  • ದಿಶಾ ರವಿಯನ್ನು ಪ್ರಕರಣಕ್ಕೆ ಸೇರಿಸಿದ್ದೇ ನಿಖಿತಾ ಜಾಕೋಬ್
Toolkit ಪ್ರಕರಣದ ಮಾಸ್ಟರ್ ಮೈಂಡ್ ನಿಖಿತಾ ಜಾಕೋಬ್: ಗ್ರೇಟಾ ಥಂಬರ್ಗ್ ಎಂಟ್ರಿ ಆಗಿದ್ದು ಹೇಗೆ?   title=
ದಿನಕ್ಕೊಂದು ತಿರುವು ಪಡೆಯುತ್ತಿರುವ ಟೂಲ್ ಕಿಟ್ ಪ್ರಕರಣ (file photo)

ನವದೆಹಲಿ: ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ (Farmer protest) ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಭಾರತದ ಹೆಸರು ಕೆಡಿಸುವ ಹುನ್ನಾರದಲ್ಲಿ ರಚಿಸಲಾದ ಟೂಲ್ ಕಿಟ್(Tool kit)  ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ,  ದೆಹಲಿ ಪೊಲೀಸರು (Delhi Police) ಪ್ರತಿಯೊಬ್ಬ ಆರೋಪಿಗಳ ಮುಖವಾಡ ಬಯಲಿಗೆಳೆಯುತ್ತಿದ್ದಾರೆ. ಇದೀಗ  ಪೊಲೀಸ್ ತನಿಖೆಯಲ್ಲಿ ಬಹಿರಂಗವಾದ ಸಂಗತಿಗಳ ಪ್ರಕಾರ, ನಿಖಿತಾ ಜೋಸೆಫ್ (Nikhitha Jacob) ಸಹ ಟೂಲ್ ಕಿಟ್  ಸಂಪಾದಕರಾಗಿದ್ದಾರೆ. ಅಲ್ಲದೆ, ನಿಖಿತಾ, ದಿಶಾ ರವಿ ಮತ್ತು ಶಾಂತನು ಒಟ್ಟಾಗಿ ಟೂಲ್ ಕಿಟ್ ಡಾಕ್ಯುಮೆಂಟ್ ರಚಿಸಿದ್ದಾರೆ.

ದೆಹಲಿ ಪೊಲೀಸ್ (Delhi police) ಮೂಲಗಳ ಪ್ರಕಾರ, ಟೂಲ್ ಕಿಟ್ ಪ್ರಕಣದಲ್ಲಿ (Tool kit case) ನಿಖಿತಾ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಎಲ್ಲಾ ಆರೋಪಿಗಳು ಟೂಪ್ ಕಿಟನ್ನು 'Comms Pack Communication package ' ಎಂದು ಕರೆಯುತ್ತಿದ್ದರು. ಈ ಸಂಪೂರ್ಣ ಪಿತೂರಿಯನ್ನು ಬಹಿರಂಗಪಡಿಸಲು ಪೊಲೀಸರು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಕರಣ ಬೇದಿಸಲು  ಸುಮಾರು 115-120 ಜಿಬಿ ಡೇಟಾವನ್ನು (Data) ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ : Petrol Price: ಪೆಟ್ರೋಲ್ ಹೇಗೆ ನಮ್ಮ ಪಾಕೆಟ್ ಕನ್ನ ಕೊರೆಯುತ್ತದೆ ತಿಳಿಯಿರಿ.!

ಟೂಲ್ ಕಿಟ್ ಪಿತೂರಿಯಲ್ಲಿ ದಿಶಾ ರವಿಯನ್ನು (Disha Ravi) ಸೇರಿಸಿಕೊಂಡಿದ್ದೇ ನಿಕಿತಾ ಜಾಕೋಬ್ ಎಂಬ ಅಂಶ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ದಿಶಾ ರವಿ ಗ್ರೇಟಾ ಥಂಬರ್ಗ್ (Greta Thunberg) ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕೆ ನಿಖಿತಾ ಜಾಕೋಬ್ ದಿಶಾ ರವಿಯನ್ನು ಪ್ರಕರಣದಲ್ಲಿ ಸೇರಿಸಿಕೊಂಡಿದ್ದರು. ಪ್ರಕರಣದ ಪ್ರಚಾರಕ್ಕಾಗಿ ಗ್ರೇಟಾ ಥಂಬರ್ಗ್ ಅವರನ್ನು ಬಳಸುವ ಉದ್ದೇಶ ನಿಖಿತಾ ಜೋಸೆಫ್ ದ್ದಾಗಿತ್ತು. 

ಫೆಬ್ರವರಿ 11 ರಂದು ನಿಖಿತಾ ಮನೆಯಲ್ಲಿ ನಡೆದ ಪೊಲೀಸ್ ಶೋಧ ಕಾರ್ಯಾಚರಣೆ ವೇಳೆ, ಆಕೆಯ ಎಲೆಕ್ಟ್ರಾನಿಕ್ ಡಿವೈಸ್ ನಿಂದ ಸಾಕಷ್ಟು ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಡೇಟಾವು WhatsApp ಚ್ಯಾಟ್, ಇಮೇಲ್ ಅನ್ನು ಒಳಗೊಂಡಿದೆ. ಇದಲ್ಲದೆ, ಆರೋಪಿ ಸಿಗ್ನಲ್ ಅಪ್ಲಿಕೇಶನ್ (Signal App), ಟೆಲಿಗ್ರಾಮ್, ಪ್ರೋಟಾನ್ ವಿಎಂ, ಸೈಬರ್ ಘೋಸ್ಟ್‌ನಂತಹ ಅನೇಕ ಪ್ಲಾಟ್‌ಫಾರ್ಮ್‌ಗಳ ಮೂಲಕ  ತಮ್ಮ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. 

ಇದನ್ನೂ ಓದಿ : Kiran Bedi: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ..!
 

ನಿಖಿತಾ,  ಪೊಯೆಟಿಕ್ ಜಸ್ಟೀಸ್ ಫೌಂಡೇಶನ್‌ನ ಇಮೇಲ್‌ಗಳನ್ನು ಸಹ ಬಳಸುತ್ತಿದ್ದಾರೆ ಎಂದು ಪೊಲೀಸ್ (Police) ಮೂಲಗಳು ತಿಳಿಸಿವೆ. ಇದಲ್ಲದೆ, ಮತ್ತಿಬ್ಬರು ಆರೋಪಿಗಳಾದ ಶುಭಮ್ ಮತ್ತು ತಿಲಕ್ ಗಾಗಿ ದೆಹಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅವರಿಬ್ಬರೂ ಸಹ ಆ ವಾಟ್ಸಾಪ್ ಗುಂಪಿನ ಭಾಗವಾಗಿದ್ದರು. ನಿಖಿತಾ ಮತ್ತು ಪೀಟರ್ ಫ್ರೆಡೆರಿಕ್ ಅವರ ವಾಟ್ಸಾಪ್ ಚಾಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 
 

ಪಿಜೆಎಫ್ ಸಂಸ್ಥಾಪಕ ಮೊ ಧಲಿವಾಲ್ ತನ್ನ ಕೆನಡಾದ ಸಹೋದ್ಯೋಗಿ ಪುನೀತ್ ಅವರ ಸಹಾಯದಿಂದ ತನ್ನ ಯೋಜನೆಯನ್ನು ರೂಪಿಸಿದ್ದಾನೆ ಮತ್ತು ಜನವರಿ 11 ರಂದು ಧಲಿವಾಲ್ ಜೂಮ್ ಮಿಟಿಂಗ್ (Zoom meeting) ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ದಿಶಾ, ನಿಕಿತಾ, ಶಾಂತನು ಕೂಡ ಈ ಮಿಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈ ಆಂದೋಲನವನ್ನು ಹೇಗೆ ದೊಡ್ಡದಾಗಿಸಬೇಕು ಎಂದು ಆ ಮೀಟಿಂಗ್ ನಲ್ಲಿ ನಿರ್ಧರಿಸಲಾಯಿತು. ಎಲ್ಲರೂ ಒಟ್ಟು ಸೇರಿ, ಟೂಲ್ ಕಿಟ್  ದಾಖಲೆಗಳನ್ನು ರಚಿಸಿ, ನಂತರ ಅದನ್ನು ಗ್ರೇಟಾಗೆ ಕಳುಹಿಸಲಾಗಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News