ನವದೆಹಲಿ: ರೈತರ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರೈತರ ಸಮಸ್ಯೆಯನ್ನು ಬಗೆ ಹರಿಸಲು ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

'ರೈತರು ಮತ್ತು ಕೇಂದ್ರದ ನಡುವೆ ಚರ್ಚೆಗಳು ನಡೆಯುತ್ತಿವೆ, ನಾನು ಪರಿಹರಿಸಲು ಏನೂ ಇಲ್ಲ. ಗೃಹ ಸಚಿವರೊಂದಿಗಿನ ಸಭೆಯಲ್ಲಿ ನನ್ನ ವಿರೋಧವನ್ನು ನಾನು ಪುನರುಚ್ಚರಿಸಿದ್ದೇನೆ ಮತ್ತು ಇದು ನನ್ನ ರಾಜ್ಯದ ಆರ್ಥಿಕತೆ ಮತ್ತು ರಾಷ್ಟ್ರದ ಭದ್ರತೆಯ ಮೇಲೆ ಪರಿಣಾಮ ಬೀರುವುದರಿಂದ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸಿದೆ "ಎಂದು ಅಮರಿಂದರ್ ಸಿಂಗ್ ಹೇಳಿದರು.


ಇನ್ನೊಂದೆಡೆಗೆ ಕೇಂದ್ರ ಸರ್ಕಾರದ ದ ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿ ದಳದ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಅವರು ಗುರುವಾರ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದರು.


ರೈತರ ಪ್ರತಿಭಟನೆಗೆ ಬೆಂಬಲಿಸಿ 'ಪದ್ಮ ವಿಭೂಷಣ' ವಾಪಸ್ ನೀಡಿದ ಮಾಜಿ ಸಿಎಂ!


ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ಬಾದಲ್ 'ನಾನೆನಾಗಿದ್ದೇನೆ ಅದಕ್ಕೆ ಜನರೇ ಕಾರಣ, ಅದರಲ್ಲೂ ವಿಶೇಷವಾಗಿ ಸಾಮಾನ್ಯ ರೈತ ಕಾರಣ. ಇಂದು ಅವರು ತಮ್ಮ ಗೌರವಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಾಗ, ಪದ್ಮವಿಭೂಷಣ ಗೌರವವನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ' ರೈತರು ತಮ್ಮ ಮೂಲಭೂತ ಜೀವನ ಹಕ್ಕನ್ನು ಭದ್ರಪಡಿಸಿಕೊಳ್ಳಲು ತೀವ್ರ ಶೀತದಲ್ಲಿ ಕಹಿ ಹೋರಾಟ ನಡೆಸುತ್ತಿದ್ದಾರೆ ಎಂದು ಬಾದಲ್ ಹೇಳಿದರು.


ಈ ಪುರಸ್ಕಾರವನ್ನು ಸಾಮಾನ್ಯ ಜನರ ಬದ್ದತೆಗಿನ ನನ್ನ ಕಾರ್ಯಕ್ಕಾಗಿ ಅದರಲ್ಲೂ ರೈತರಿಗೆ ಹೆಚ್ಚಿನ ಆಧ್ಯತೆ ನೀಡಿದ್ದಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ನಾನು ಅವರಿಗೆ ಋಣಿಯಾಗಿದ್ದೇನೆ ಎಂದು ಬಾದಲ್ ಬರೆದುಕೊಂಡಿದ್ದಾರೆ.ಇಂದು ರೈತರ ಹೋರಾಟದ ವಿಚಾರದಲ್ಲಿ ಕೇಂದ್ರ ಸರ್ಕಾರದ ದ್ರೋಹ ಮತ್ತು ಅದರ ಆಘಾತಕಾರಿ ಉದಾಸೀನತೆ ಮತ್ತು ತಿರಸ್ಕಾರದ ಬಗ್ಗೆ ತನಗೆ ತೀವ್ರ ನೋವಾಗಿದೆ ಎಂದು ಬಾದಲ್ ಹೇಳಿದರು.


ಕೃಷಿ ಸುಗ್ರೀವಾಜ್ಞೆಯನ್ನು ಮೋದಿ ಸರ್ಕಾರವು ಸಂಸತ್ತಿನ ಮೂಲಕ ಪಾಸ್ ಮಾಡಿದ ನಂತರ ಸೆಪ್ಟೆಂಬರ್‌ನಲ್ಲಿ ಕೇಂದ್ರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯಿಂದ ಎಸ್‌ಎಡಿ ಹೊರನಡೆದಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು.