ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ಕಚ್‌ಗೆ ಮಂಗಳವಾರ ಭೇಟಿ ನೀಡಲಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನದ ಮಧ್ಯೆ ಅವರು ಕಚ್‌ನ ಕೃಷಿ ಸಮುದಾಯದ ಜೊತೆಗೆ ಗುಜರಾತ್‌ನ ಸಿಖ್ ರೈತರನ್ನು ಭೇಟಿಯಾಗಲಿದ್ದಾರೆ ಎಂದು ಸೋಮವಾರ ಅಧಿಕೃತ ಹೇಳಿಕೆ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಹೇಳಿಕೆಯ ಪ್ರಕಾರ, ಪ್ರಧಾನಿ ಕೆಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು  ಗುಜರಾತ್‌ನ (Gujrat) ಕಚ್‌ಗೆ ಭೇಟಿ ನೀಡಲಿದ್ದು ಕಚ್‌ನಲ್ಲಿರುವ ಧಾರ್ಡೊದ ರೈತರು ಮತ್ತು ಕಲಾವಿದರೊಂದಿಗೆ ಸಂವಹನ ನಡೆಸಲಿದ್ದಾರೆ. ಮುಖ್ಯ ಕಾರ್ಯಕ್ರಮದ ಮೊದಲು ಅವರು ಕಚ್ ರೈತರೊಂದಿಗೆ ಚರ್ಚಿಸಲಿದ್ದಾರೆ.


ಕಚ್‌ನಲ್ಲಿ 5,000 ಸಿಖ್ ಕುಟುಂಬಗಳು ವಾಸಿಸುತ್ತಿವೆ:
ರಾಜ್ಯ ಮಾಹಿತಿ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಇಂಡೋ-ಪಾಕ್ (Indo-Pak) ಗಡಿಯ ಸಮೀಪವಿರುವ ಸಿಖ್ ರೈತರನ್ನು ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಲು ಆಹ್ವಾನಿಸಲಾಗಿದೆ. ಕಚ್ ಜಿಲ್ಲೆಯ ಲಖಪತ್ ತಾಲ್ಲೂಕಿನಲ್ಲಿ ಮತ್ತು ಸುತ್ತಮುತ್ತ ಸುಮಾರು 5,000 ಸಿಖ್ ಕುಟುಂಬಗಳು ವಾಸಿಸುತ್ತಿವೆ. ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಸಾವಿರಾರು ರೈತರು ಕಳೆದ ಕೆಲ ವಾರಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ ಪಂಜಾಬ್ ರೈತರು ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಸಿಖ್ ರೈತರೊಂದಿಗಿನ ಪ್ರಧಾನಿ ನರೇಂದ್ರ ಮೋದಿ(Narendra Modi) ಯವರ ವಿಶೇಷ ಚರ್ಚೆ ಕುತೂಹಲ ಕೆರಳಿಸಿದೆ.


Farmers Protest: ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು


ದೆಹಲಿಯ ಸಿಂಘು ಗಡಿ 32 ರೈತ ಸಂಘಟನೆಗಳ ಪ್ರತಿಭಟನೆ:
ಸೋಮವಾರ ಸುಮಾರು 32 ರೈತ ಸಂಘಟನೆಗಳು ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದಿನವಿಡೀ ಉಪವಾಸ ಸತ್ಯಾಗ್ರಹ ನಡೆಸಿದರು ಮತ್ತು ದೇಶದ ಇತರ ಭಾಗಗಳಲ್ಲಿನ ಅನೇಕ ರೈತರು ಈ ಕಾನೂನುಗಳ ವಿರುದ್ಧ ಪ್ರತಿಭಟಿಸಿದರು. ಏತನ್ಮಧ್ಯೆ ಕೃಷಿ ಕ್ಷೇತ್ರ 'ಜನನಿ'  ಮತ್ತು ಇದರ ವಿರುದ್ಧ ಹಿಮ್ಮೆಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒತ್ತಿ ಹೇಳಿದರು.


ರೈತರ ಜೊತೆ ಕುಳಿತು ಮಾತನಾಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸಲಹೆ


ರೈತರೊಂದಿಗೆ ಮಾತನಾಡಲು ಸರ್ಕಾರ ಸಿದ್ಧ:
ದೆಹಲಿ ಗಡಿಯಲ್ಲಿ ರೈತ ಚಳುವಳಿ 19ನೇ ದಿನವನ್ನು ಪ್ರವೇಶಿಸಿದೆ ಮತ್ತು ಸಾವಿರಾರು ರೈತರು (Farmers) ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೋಮವಾರ ರೈತರೊಂದಿಗೆ ಮಾತುಕತೆಯ ಮುಂದಿನ ದಿನಾಂಕವನ್ನು ನಿಗದಿಪಡಿಸಲು ಸರ್ಕಾರ ಅವರೊಂದಿಗೆ ಸಂಪರ್ಕದಲ್ಲಿದೆ.  ಸಭೆ ಖಂಡಿತವಾಗಿಯೂ ನಡೆಯುತ್ತದೆ. ನಾವು ರೈತರೊಂದಿಗೆ ಸಂಪರ್ಕದಲ್ಲಿದ್ದೇವೆ. ಸರ್ಕಾರವು ಯಾವುದೇ ಸಮಯದಲ್ಲಿ ಮಾತುಕತೆಗೆ ಸಿದ್ಧವಾಗಿದೆ. ರೈತ ಮುಖಂಡರು ಮುಂದಿನ ಸಭೆಗೆ ಯಾವಾಗ ಸಿದ್ಧರಾಗಿದ್ದಾರೆ ಎಂಬುದನ್ನು ನಿರ್ಧರಿಸಬೇಕು  ಎಂದು ಹೇಳಿದರು.