Farmers Protest: ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು

ರೈತರು ಇಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ದೆಹಲಿ ಗಡಿಯಲ್ಲಿ ರೈತರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.

Last Updated : Dec 14, 2020, 03:10 PM IST
  • ಇಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ದೆಹಲಿ ಗಡಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ
  • ದೆಹಲಿ ಗಡಿಯಲ್ಲಿ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಆಂದೋಲನ್‌
  • ರೈತರ ಹೋರಾಟ ಬೆಂಬಲಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಪವಾಸ ಸತ್ಯಾಗ್ರಹ
Farmers Protest: ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು title=
File Image

ನವದೆಹಲಿ: ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಇಂದು ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದಲ್ಲದೆ ಇನ್ನೂ ಹತ್ತು-ಹಲವು ಬೆಳವಣಿಗೆಗಳು ನಡೆಯುತ್ತಿವೆ. ಆ ಎಲ್ಲಾ ಬೆಳವಣಿಗೆಗಳ ವಿವರಗಳನ್ನು ಇಲ್ಲಿ ಒಂದೇ ಕಡೆ ಜೋಡಿಸಿ‌ ಕೊಡಲಾಗಿದೆ.

1. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದಿಗೆ 19ನೇ ದಿನಕ್ಕೆ ಕಾಲಿಟ್ಟಿದೆ.

2. ಇಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ದೆಹಲಿ ಗಡಿಯಲ್ಲಿ ರೈತರು (Farmers) ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.

3. ದೆಹಲಿ ಗಡಿಯಲ್ಲಿ ಪ್ರತಿಭಟನೆಯನ್ನು ಮುನ್ನಡೆಸುತ್ತಿರುಬ ಸಂಯುಕ್ತ ಕಿಸಾನ್ ಆಂದೋಲನ್‌ ಇಂದು ಉಪವಾಸ ಸತ್ಯಾಗ್ರಹಕ್ಕೆ ಕರೆ‌ಕೊಟ್ಟಿದೆ.

 4. ರೈತರ ಹೋರಾಟ ಬೆಂಬಲಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಸಹ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

5. ಜೊತೆಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕೂಡ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಿ ಎಂದು ವಿನಂತಿಸಿಕೊಂಡಿದ್ದಾರೆ.

6. ಪಂಜಾಬ್ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಕೇಜ್ರಿವಾಲ್ ರೈತರ ಪರ ಇದ್ದೇನೆ ಎಂಬ ನಾಟಕವಾಡುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ (Amarindar Sing) ಹೇಳಿದ್ದಾರೆ.

7. ಕೇಂದ್ರ ಸರ್ಕಾರ ರೈತರ ದಾರಿ ತಪ್ಪಿಸುತ್ತಿದೆ ಎಂದು ಹರಿಯಾಣದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಮ್ ಸಿಂಗ್ ಚಾದುನಿ ಹೇಳಿದ್ದಾರೆ.

8. ಡಿಸೆಂಬರ್ 8ರಂದು ನಮ್ಮೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ‘ಎಲ್ಲಾ 23 ಬೆಳೆಗಳನ್ನು MSP ನೀಡಿ ಕೊಂಡುಕೊಳ್ಳಲು ಸಾಧ್ಯವಿಲ್ಲ, ಇದರಿಂದ ಕೇಂದ್ರಕ್ಕೆ 17 ಲಕ್ಷ ಕೋಟಿ ಹೊರೆಯಾಗುತ್ತದೆ' ಎಂದು ಹೇಳಿದ್ದರು. ಈಗ ಬೇರೆ ರೀತಿ ಮಾತನ್ನಾಡುತ್ತಿದ್ದಾರೆ ಎಂದು ಚಾದುನಿ ಕಿಡಿದ್ದಾರೆ.

9. ದೆಹಲಿ ಚಲೋ (Dilli Chalo) ಹೋರಾಟ ಬೆಂಬಲಿಸಲು ರಾಜಸ್ಥಾನದಿಂದ ಸಾವಿರಾರು ರೈತರು ದೆಹಲಿಯತ್ತ ಹೊರಟಿದ್ದಾರೆ. ಆದರೆ ಹರಿಯಾಣದಲ್ಲೇ ಅವರನ್ನು ತಡೆಯಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

10. ರೈತರ ಹೋರಾಟದಿಂದ ಬಂದ್ ಆಗಿರುವ ಹೆದ್ದಾರಿಯನ್ನು ತೆರವುಗೊಳಿಸಬೇಕೆಂದು ಕೇಳಿರುವ ಅರ್ಜಿ ವಿಚಾರಣೆ  ಡಿಸೆಂಬರ್ 16 ರಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ.

ರೈತರ ಹೋರಾಟದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು?

10. ಪ್ರತಿಭಟನಾನಿರತ ರೈತರನ್ನು “ಟುಕ್ಡೆ-ಟುಕ್ಡೆ ಗ್ಯಾಂಗ್” ಎಂದ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್ ಹೇಳಿಕೆ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿಶಂಕರ್ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

11. ರೈತರ ಹೋರಾಟಕ್ಕೆ ವಿಶ್ವದ ಅತ್ಯಂತ ಕಿರಿಯ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಾಮ್ ಬೆಂಬಲ ವ್ಯಕ್ತಪಡಿಸಿದ್ದಾರೆ.

12. ರೈತರ ಜೊತೆ ಕುಳಿತು ಮಾತನಾಡಿ, ವಾಸ್ತವವನ್ನು ತಿಳಿದುಕೊಳ್ಳಿ, ಅವರ ವಿಶ್ವಾಸವನ್ನು ಗಳಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi)ಗೆ ಖ್ಯಾತ ನಟ ಪ್ರಕಾಶ್ ರೈ (Prakash Rai) ಸಲಹೆ ನೀಡಿದ್ದಾರೆ.

ರೈತರ ಜೊತೆ ಕುಳಿತು ಮಾತನಾಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸಲಹೆ

13. ರೈತರ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಭೇಟಿಯಾಗಿ ರೈತರ ಹೋರಾಟ ತೀವ್ರವಾಗುತ್ತಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ.

14. ಕೃಷಿ ಕಾನೂನುಗಳನ್ನು ಬೆಂಬಲಿಸಿ 'ಅಖಿಲ ಭಾರತ ರೈತರ ಸಮನ್ವಯ ಸಮಿತಿ'ಯ ನಿಯೋಗ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಭೇಟಿ ಮಾಡಿ ಚರ್ಚೆ ನಡೆಸಿದೆ.

15. ಉಪವಾಸ ಸತ್ಯಾಗ್ರಹದ ವೇಳೆ ಪಂಜಾಬಿನ ಮೊಗಾ ಜಿಲ್ಲೆಯ ಕಲಾನ್ ಗ್ರಾಮದ ಮಖನ್ ಖಾನ್ ಶ್ರೀ ಚಂದ್ ಖಾನ್ ಎಂಬ ರೈತ ಮೃತಪಟ್ಟಿದ್ದಾರೆ.

Trending News