Farmers Protest: ನಾವು ಸಹ ರೈತರೊಂದಿಗೆ ಇದ್ದೇವೆ, ರೈತರನ್ನು ಬೆಂಬಲಿಸಿದ ಟ್ಯಾಕ್ಸಿ ಯೂನಿಯನ್
ರೈತರ ಸಮಸ್ಯೆಗಳು ಬೇರೆ, ನಮ್ಮ ಸಮಸ್ಯೆಗಳು ಬೇರೆ. ವಾಹನಗಳು ಸಂಪೂರ್ಣ ರೀತಿಯಲ್ಲಿ ಚಲಿಸುತ್ತವೆ. ನಾವು ಸಹ ರೈತರೊಂದಿಗೆ ಇದ್ದೇವೆ, ಆದರೆ ನಾವು ಮುಷ್ಕರಕ್ಕೆ ಹೋಗುವುದಿಲ್ಲ ಎಂದು ಆಟೋ ರಿಕ್ಷಾ ಮತ್ತು ದೆಹಲಿ ಟ್ಯಾಕ್ಸಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಹೇಳಿದ್ದಾರೆ.
ನವದೆಹಲಿ: ಹೊಸ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ಆಂದೋಲನಕ್ಕೆ ಅಖಿಲ ಭಾರತ ಟ್ಯಾಕ್ಸಿ ಯೂನಿಯನ್ (All India Taxi Union) ಬೆಂಬಲ ನೀಡಿದೆ. ಆದರೆ ತಾವು ಮುಷ್ಕರಕ್ಕೆ ಹೋಗುವುದಿಲ್ಲ ಎಂದು ಯೂನಿಯನ್ ಸ್ಪಷ್ಟಪಡಿಸಿದೆ. ರೈತರ ಸಮಸ್ಯೆಗಳು ಬೇರೆ, ನಮ್ಮ ಸಮಸ್ಯೆಗಳು ಬೇರೆ. ವಾಹನಗಳು ಸಂಪೂರ್ಣ ರೀತಿಯಲ್ಲಿ ಚಲಿಸುತ್ತವೆ. ನಾವು ಸಹ ರೈತರೊಂದಿಗೆ ಇದ್ದೇವೆ, ಆದರೆ ನಾವು ಮುಷ್ಕರಕ್ಕೆ ಹೋಗುವುದಿಲ್ಲ ಎಂದು ಆಟೋ ರಿಕ್ಷಾ ಮತ್ತು ದೆಹಲಿ ಟ್ಯಾಕ್ಸಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಹೇಳಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ 5 ದಿನಗಳಿಂದ 'ದಿಲ್ಲಿ ಚಲೋ' (Dilli Chalo) ಚಳುವಳಿಯಲ್ಲಿ ಪಾಲ್ಗೊಂಡಿದ್ದಾರೆ. ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪಂಜಾಬ್-ಹರಿಯಾಣದ ರೈತರು ದೆಹಲಿಯ ಗಡಿಯಲ್ಲಿ ಕಳೆದ 5 ದಿನಗಳಿಂದ ಆಂದೋಲನ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಉತ್ತರಪ್ರದೇಶದ ರೈತರು (Farmers) ಕೂಡ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆ ನಡುವೆ ಪಂಜಾಬ್-ಹರಿಯಾಣ ಸಿಎಂ ಟ್ವಿಟ್ಟರ್ ವಾರ್, ಯಾರು ಏನು ಹೇಳಿದರು?
ಈ ಕೃಷಿ ಕಾನೂನುಗಳನ್ನು ರದ್ದುಪಡಿಸುವುದರ ಜೊತೆಗೆ ಬೆಳೆಗಳಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (MSP) ಜಾರಿಗೆ ತರಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಮಧ್ಯವರ್ತಿಗಳ ಆಡಳಿತವನ್ನು ಕೊನೆಗೊಳಿಸುವ ಸರ್ಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪಂಜಾಬ್‌ನ ರೈತರು ಒತ್ತಾಯಿಸಿದ್ದಾರೆ.
Farmer's Protest: ಇಂದು ಮಧ್ಯಾಹ್ನ 3 ಗಂಟೆಗೆ ರೈತರೊಂದಿಗೆ ಮಾತುಕತೆ ನಡೆಸಲಿರುವ ಸರ್ಕಾರ
ಸರ್ಕಾರ ಮತ್ತು ರೈತರ ನಡುವೆ ಮಾತುಕತೆ :-
ಸರ್ಕಾರ ಮತ್ತು ರೈತರ ನಡುವಿನ ಮಾತುಕತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವ ವಹಿಸಬಹುದು ಎನ್ನಲಾಗಿದೆ. ಸಭೆಯಲ್ಲಿ ಕೃಷಿ ಸಚಿವರಲ್ಲದೆ ಇನ್ನೂ ಅನೇಕ ಮಂತ್ರಿಗಳು ಭಾಗಿಯಾಗಬಹುದು. ಜೊತೆಗೆ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.
Farmers Protest) ಕುರಿತು ಸಭೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸಕ್ಕೆ ಆಗಮಿಸಿದ್ದಾರೆ.