ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ರದ್ದುಪಡಿಸುವಂತೆ ಒತ್ತಾಯಿಸಿ ದೇಶಾದ್ಯಂತ ರೈತರು ‘ದಿಲ್ಲಿ ಚಲೋ’ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಆಂದೋಲನದ ಮಧ್ಯೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸೋಮವಾರ ತಡರಾತ್ರಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸರ್ಕಾರವು ರೈತ ಸಂಘದ ಮುಖಂಡರನ್ನು ವಿಜ್ಞಾನ ಭವನದಲ್ಲಿ ಮಾತುಕತೆಗೆ ಆಹ್ವಾನಿಸಿದೆ ಎಂದು ಹೇಳಿದ್ದಾರೆ.
Govt invites Kisan Union for talks on Dec 1 at Vigyan Bhawan: Narendra Singh Tomar
Read @ANI Story | https://t.co/eKdfByNOF4 pic.twitter.com/hnlhaF9JlH
— ANI Digital (@ani_digital) November 30, 2020
ಈ ಬಗ್ಗೆ ಮಾತನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಭಾರತ ಸರ್ಕಾರವು ರೈತರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದೆ, ಈಗಾಗಲೇ ನಮ್ಮ ಪರವಾಗಿ 2 ಬಾರಿ ಸಭೆ ನಡೆಸಲಾಗಿದೆ. ಕೃಷಿ ಕಾನೂನುಗಳನ್ನು ತಂದಾಗ ಅವು ರೈತರಲ್ಲಿ ಕೆಲವು ತಪ್ಪು ಕಲ್ಪನೆಯನ್ನು ಉಂಟುಮಾಡಿದವು. ಈ ಹಿನ್ನಲೆಯಲ್ಲಿ ನಾವು ಅಕ್ಟೋಬರ್ 14 ಮತ್ತು ನವೆಂಬರ್ 13 ರಂದು ರೈತ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ. ಆ ಸಮಯದಲ್ಲಿ ನಾವು ಅವರನ್ನು ಆಂದೋಲನಕ್ಕೆ ಹೋಗದಂತೆ ಒತ್ತಾಯಿಸಿದ್ದೇವೆ ಮತ್ತು ಸರ್ಕಾರ ಮಾತುಕತೆಗಾಗಿ ಸಿದ್ಧವಾಗಿದೆ ಎಂದು ರೈತರಿಗೆ (Farmers) ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ ಎಂದು ತೋಮರ್ ತಿಳಿಸಿದರು.
It was decided that next round of talks will be held on Dec 3 but farmers are agitating, it's winter & there's COVID. So meeting should be held earlier. So farmer leaders - present in 1st round of talks - have been invited at Vigyan Bhavan on Dec 1 at 3 pm: Agriculture Minister https://t.co/1y5DNCT0U0
— ANI (@ANI) November 30, 2020
ರೈತರಿಗೆ ದೆಹಲಿ ಪ್ರವೇಶ ನಿರ್ಬಂಧ: ಡಿ. 7 ರಂದು ಸಾವಿರಾರು ರೈತರಿಂದ ವಿಧಾನಸೌಧ ಮುತ್ತಿಗೆ
ಎರಡು ಸುತ್ತಿನ ಸಭೆಯ ನಂತರ ಮುಂದಿನ ಸುತ್ತಿನ ಮಾತುಕತೆಯನ್ನು ಡಿಸೆಂಬರ್ 3 ರಂದು ನಡೆಸಲು ನಿರ್ಧರಿಸಲಾಯಿತು. ಚಳಿಗಾಲದ ಆರಂಭ ಮತ್ತು ಕೋವಿಡ್ -19 (Covid 19) ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಇದೀಗ ನಿರ್ಧಾರಿತ ಸಮಯಕ್ಕೂ ಮೊದಲೇ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ನರೇಂದ್ರ ಸಿಂಗ್ ತೋಮರ್ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದರು.
ಈ ಸಂಬಂಧ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಕ್ರಾಂಟಿಕರಿ ಕಿಸಾನ್ ಯೂನಿಯನ್, ಜಮ್ಮುಹಾರಿ ಕಿಸಾನ್ ಸಭಾ, ಭಾರತೀಯ ಕಿಸಾನ್ ಸಭಾ (ಡಕೌಡಾ), ಕುಲ್ ಹಿಂದ್ ಕಿಸಾನ್ ಸಭಾ, ಕೃತಿ ಕಿಸಾನ್ ಯೂನಿಯನ್ ಮತ್ತು ಪಂಜಾಬ್ ಕಿಸಾನ್ ಯೂನಿಯನ್ ಸೇರಿದಂತೆ 32 ರೈತ ಸಂಘಗಳ ಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ 'ಬಿಗ್ ಶಾಕ್'..!
ಏತನ್ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ನವೆಂಬರ್ 28 ರಂದು ರೈತರ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ಸಿದ್ಧವಿರುವುದಾಗಿ ಘೋಷಿಸಿದ್ದರು. ತಮ್ಮ ಪ್ರತಿಭಟನೆಯನ್ನು ರಚನಾತ್ಮಕ ಸ್ಥಳಕ್ಕೆ ಸ್ಥಳಾಂತರಿಸಿದರೆ ಮತ್ತು ಅವರು ಪ್ರತಿಭಟನೆ ನಡೆಸುತ್ತಿರುವ ರಸ್ತೆಗಳು ಮತ್ತು ಹೆದ್ದಾರಿಗಳನ್ನು ಖಾಲಿ ಮಾಡಿದರೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಡಿಸೆಂಬರ್ 3 ರ ಮೊದಲು ಚರ್ಚೆ ನಡೆಸಲು ಸಿದ್ಧರಿದ್ದಾರೆ ಎಂದು ಷಾ ಭರವಸೆ ನೀಡಿದ್ದರು.