ನವದೆಹಲಿ : Fastag ಇಲ್ಲದೆ ಹೆದ್ದಾರಿಯಲ್ಲಿ ಹೋಗುತ್ತಿದ್ದರೆ, ಈ ಸಲ ನಿಮ್ಮ ಜೇಬು   ಖಾಲಿಯಾಗುವುದು ಖಚಿತ. ಯಾಕೆಂದರೆ, ಇವತ್ತು ಮಧ್ಯರಾತ್ರಿಯ ಬಳಿಕ Fastag ಇಲ್ಲದ ವಾಹನಗಳು ಡಬ್ಬಲ್ ಟೋಲ್ ಪಾವತಿಸಬೇಕಾಗುತ್ತದೆ. ಈ ಸಂಬಂಧ, ಹೆದ್ದಾರಿ ಇಲಾಖೆ  ಸುತ್ತೋಲೆ ಹೊರಡಿಸಿದೆ. ಹಾಗಾಗಿ, Fastag ಡೆಡ್ ಲೈನ್  (Deadline) ಮತ್ತೆ ವಿಸ್ತರಣೆಯಾಗುತ್ತದೆ ಎಂಬ ಕಲ್ಪನೆ ಬಿಟ್ಟು ಬಿಡಿ. ಆದಷ್ಟು ಬೇಗ Fastag ಅಳವಡಿಸಿಕೊಳ್ಳಿ. ಡೆಡ್ ಲೈನ್  ಇವತ್ತೇ ಕೊನೆಯಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ (NHAI) ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

Fastag ನಿಯಮ ಏನು..?
ಇವತ್ತು ಮಧ್ಯರಾತ್ರಿಯಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ Fastag ಅನಿವಾರ್ಯವಾಗಲಿದೆ. ಇಲ್ಲಿಯ ತನಕ ಟೋಲ್ ಗಳಲ್ಲಿ  (Toll Plaza) ಟೋಲ್ ಪೇ ಮಾಡಲು ಪ್ರತ್ಯೇಕ ಕ್ಯಾಶ್ ಕೌಂಟರ್ (Cash counter) ಇರುವ ಲೇನ್ ಇತ್ತು. ಇವತ್ತು ಮಧ್ಯರಾತ್ರಿ ಬಳಿಕ ಈ ಲೇನ್ ಬಂದ್ ಆಗಲಿದೆ. ಕ್ಯಾಶ್ ಮೂಲಕ ನೀವು ಟೋಲ್ ಪೇ ಮಾಡುವಿರಾದರೆ, ಡಬ್ಬಲ್ ಟೋಲ್ (toll) ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲ, ತುಂಬಾ ದೊಡ್ಡ ಕ್ಯೂನಲ್ಲಿ ಬರಬೇಕಾಗುತ್ತದೆ. ಟೈಂ ವೇಸ್ಟ್ ಆಗುತ್ತದೆ.


ಇದನ್ನೂ ಓದಿ : LPG Cylinder Price: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ದರ ಏರಿಕೆ, ಜನಸಾಮಾನ್ಯರಿಗೆ ಮತ್ತೆ ಶಾಕ್


Fastag ಎಲ್ಲಿಂದ ಖರೀದಿಸಬಹುದು..?
ದೇಶದಾದ್ಯಂತ 23 ಬ್ಯಾಂಕ್ (Bank) ಮತ್ತು 30 ಸಾವಿರ ಪಿಒಎಸ್ (POS) ಮೆಶಿನ್ ಮೂಲಕ Fastag ಖರೀದಿಸಬಹುದು.  ಆನ್ ಲೈನ್ ನಲ್ಲಿಯೂ  Fastag ಖರೀದಿಸಬಹುದು. ಬ್ಯಾಂಕ್ ವೆಬ್ ಸೈಟಿಗೆ  (website) ಹೋಗಿ Fastag  ಫಾರ್ಮ್ ಫಿಲ್ ಮಾಡಿ. ಅದರಲ್ಲಿ ಕೇಳಿರುವ ಮಾಹಿತಿ ಕೊಡಿ. ಇದರ ನಂತರ ಪೇಮೆಂಟ್ ಮಾಡಬೇಕಾಗುತ್ತದೆ. ಬಳಿಕ ನೀವು ಕೊಟ್ಟ ವಿಳಾಸಕ್ಕೆ Fastag ಬಂದು ಸೇರುತ್ತದೆ. ಈ ಮಾಹಿತಿ ತುಂಬುವಾಗ ನಿಮ್ಮಲ್ಲಿ ವಾಹನ ನೊಂದಣಿ ಸಂಖ್ಯೆ, ಆಧಾರ್ ನಂಬರ್ (Aadhar ) ಅಥವಾ ಪಾನ್ ಕಾರ್ಡ್ (Pancard) ಬೇಕಾಗುತ್ತದೆ. ಕಾರ್, ಜೀಪ್, ವ್ಯಾನ್ ಇನ್ನಿತರ ವಾಹನಗಳಿಗೆ 400 ರೂಪಾಯಿ ಪಾವತಿಸಬೇಕಾಗುತ್ತದೆ. ಇದರಲ್ಲಿ 200 ರೂಪಾಯಿ ಡೆಪಾಸಿಟ್ ಮತ್ತು 100 ರೂಪಾಯಿ ಫೀಸ್ ಕೂಡಾ ಸೇರಿದೆ. 


ಈಗ ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿಲ್ಲ:
ಮೊದಲು ಫಾಸ್ಟ್ಯಾಗ್ ನಲ್ಲಿ  ಮಿನಿಮಮ್ ಬ್ಯಾಲೆನ್ಸ್ (Minimum Balance) ಇಡುವ ಅಗತ್ಯವಿತ್ತು. ಇದೀಗ ಹೆದ್ದಾರಿ ಪ್ರಾಧಿಕಾರ ಆ ನಿಯಮವನ್ನು ರದ್ದು ಮಾಡಿದೆ. ಇದರಿಂದ ಯಾವುದೇ ಅಡಚಣೆ ಇಲ್ಲದೆ ನಿಮ್ಮ ಪಯಣ ಮುಂದುವರಿಯುತ್ತದೆ.


ಇದನ್ನೂ ಓದಿ : Labour Codes ಗಳಿಗೆ ಅಂತಿಮ ಸ್ವರೂಪ ನೀಡಿದ Modi ಸರ್ಕಾರ, ಶೀಘ್ರವೇ ಜಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.