FasTag : NHAI ನಿಯಮದಲ್ಲಿ ಬದಲಾವಣೆ; Minimum ಬಾಲೆನ್ಸ್ ಬಗ್ಗೆ ಇನ್ನು ಚಿಂತೆ ಬಿಟ್ಟು ಬಿಡಿ

ಎಲ್ಲಾ ವಾಹನಗಳಿಗೆ ಫೆ 15ರ ಳಗೆ ಫ್ಯಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ, ಫಾಸ್ಟ್ ಟ್ಯಾಗ್ ನಲ್ಲಿ ಮಿನಿಮಮ್ ಬಾಲೆನ್ಸ್ ಉಳಿಸಿಕೊಳ್ಳುವ ಚಿಂತೆಯಿಂದ ಈಗ ಮುಕ್ತಿ ಸಿಕ್ಕಿದೆ.

Written by - Ranjitha R K | Last Updated : Feb 10, 2021, 05:19 PM IST
  • ಫೆ 15ರ ಳಗೆ ಫ್ಯಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯ
  • ಫಾಸ್ಟ್ ಟ್ಯಾಗ್ ನಲ್ಲಿ ಮಿನಿಮಮ್ ಬಾಲೆನ್ಸ್ ಉಳಿಸಿಕೊಳ್ಳುವ ಚಿಂತೆಯಿಂದ ಮುಕ್ತಿ
  • ವಾಲೆಟ್ ನಲ್ಲಿ ಕಡಿಮೆ ಹಣ ಇದ್ದರೂ ಟೋಲ್ ಪ್ಲಾಜಾ ದಾಟಬಹುದು
FasTag : NHAI ನಿಯಮದಲ್ಲಿ ಬದಲಾವಣೆ; Minimum ಬಾಲೆನ್ಸ್ ಬಗ್ಗೆ ಇನ್ನು ಚಿಂತೆ ಬಿಟ್ಟು ಬಿಡಿ title=
ಫೆ 15ರ ಳಗೆ ಫ್ಯಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯ (file photo)

ನವದೆಹಲಿ: ಎಲ್ಲಾ ವಾಹನಗಳಿಗೆ ಫೆ 15ರ ಳಗೆ ಫ್ಯಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ, ಫಾಸ್ಟ್ ಟ್ಯಾಗ್ ನಲ್ಲಿ ಮಿನಿಮಮ್ ಬಾಲೆನ್ಸ್ ಉಳಿಸಿಕೊಳ್ಳುವ ಚಿಂತೆಯಿಂದ ಈಗ ಮುಕ್ತಿ ಸಿಕ್ಕಿದೆ. ಫಾಸ್ಟ್ ಟ್ಯಾಗ್ ನಲ್ಲಿ ಮಿನಿಮಮ್ ಬಾಲೆನ್ಸ್ ಉಳಿಸುವ ಅಗತ್ಯ ಇಲ್ಲ ಎಂದು, ಎನ್ಎಚ್ಎಐ (NHAI ) ಹೇಳಿದೆ. ಈ ನಿಟ್ಟಿನಲ್ಲಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಈ ನಿಯಮವು ಕಾರು, ಜೀಪ್ ಅಥವಾ ವ್ಯಾನ್ ಗೆ ಮಾತ್ರ ಅನ್ವಯವಾಗಲಿದೆ. ವಾಣಿಜ್ಯ ವಾಹನಗಳಿಗೆ ಕನಿಷ್ಠ ಬಾಲೆನ್ಸ್ ಉಳಿಸಿಕೊಳ್ಳುವುದು ಈಗಲೂ  ಕಡ್ಡಾಯವಾಗಿದೆ.

Minimum balance ಅಗತ್ಯವಿಲ್ಲ :
ಫಾಸ್ಟಾಗ್ ನೀಡುವ ಬ್ಯಾಂಕುಗಳು (Bank) ಭದ್ರತಾ ಠೇವಣಿ ಹೊರತುಪಡಿಸಿ ಯಾವುದೇ ಕನಿಷ್ಠ ಮೊತ್ತವನ್ನು  ಉಳಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)  ಹೇಳಿದೆ.  ಈ ಹಿಂದೆ  FASTag ನಲ್ಲಿನ ಭದ್ರತಾ ಠೇವಣಿಯ ಜೊತೆಗೆ, ಕನಿಷ್ಠ ಮೊತ್ತವನ್ನು ಬಾಕಿ ಉಳಿಸಿಕೊಳ್ಳುವ ಷರತ್ತು ಕೂಡ ವಿಧಿಸಲಾಗಿತ್ತು. ಗ್ರಾಹಕರಿಗೆ ಕನಿಷ್ಠ 150 ರಿಂದ 200 ರೂ ಯಷ್ಟು ಮೊತ್ತವನ್ನು ಉಳಿಸಿಕೊಳ್ಳುವಂತೆ ಸೂಚಿಸಲಾಗಿತ್ತು.  ಮಿನಿಮಮ್ ಬಾಲೆನ್ಸ್ (Minimum balance ) ಇಲ್ಲದೇ ಹೋದರೆ ಅಂಥಹ ವಾಹನಗಳಿಗೆ  ಟೋಲ್ (Toll) ದಾಟಲು ಅನುಮತಿ ಇರುತ್ತಿರಲಿಲ್ಲ. ಆದರೆ ಈಗ  ನಿಯಮದಲ್ಲಿ ಬದಲಾವಣೆ ತರಲಾಗಿದೆ.

ಇದನ್ನೂ ಓದಿ : FASTag ತೆಗೆದುಕೊಳ್ಳಲು ಇನ್ನೊಂದು ವಾರವಷ್ಟೇ ಬಾಕಿ

ವಾಲೆಟ್ ನಲ್ಲಿ ಕಡಿಮೆ ಹಣ ಇದ್ದರೂ ಟೋಲ್ ಪ್ಲಾಜಾ ದಾಟಬಹುದು :
ಫಾಸ್ಟ್ಯಾಗ್ ಖಾತೆಯ ವಾಲೆಟ್ ನಲ್ಲಿ ಕಡಿಮೆ ಹಣವಿದ್ದು, negative ಬಾಲೆನ್ಸ್ ಇಲ್ಲದಿದ್ದರೆ ಅಂಥಹ ವಾಹನಗಳಿಗೆ  ಟೋಲ್ ಪ್ಲಾಜಾ (Toll plaza) ದಾಟಲು ಅವಕಾಶ ನೀಡಲಾಗುವುದು ಎಂದು ಎನ್‌ಎಚ್‌ಎಐ ಈಗ ನಿರ್ಧರಿಸಿದೆ. ಗ್ರಾಹಕರು ರೀಚಾರ್ಜ್ (Recharge) ಮಾಡದಿದ್ದರೆ, ಬ್ಯಾಂಕ್ ನೆಗೆಟಿವ್ ಅಮೌಂಟನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸುತ್ತದೆ.

ಪ್ರಸ್ತುತ ದೇಶಾದ್ಯಂತ 2.54 ಕೋಟಿಗೂ ಹೆಚ್ಚು ಫಾಸ್ಟ್ಯಾಗ್ ಬಳಕೆದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಮೂಲಕ ದೈನಂದಿನ ಟೋಲ್ ಸಂಗ್ರಹವು 89 ಕೋಟಿ ರೂಗಳಷ್ಟಾಗಲಿದೆ. 2021 ರ ಫೆಬ್ರವರಿ 15 ರಿಂದ ಫಾಸ್ಟಾಗ್ ಮೂಲಕ ಟೋಲ್ ಪ್ಲಾಜಾದಲ್ಲಿ ಪಾವತಿ ಕಡ್ಡಾಯವಾಗಲಿದೆ.  

ಇದನ್ನೂ ಓದಿ : ಕುಳಿತಲ್ಲೇ ಓಪನ್ ಮಾಡಿ Post office ಉಳಿತಾಯ ಖಾತೆ..! ಸಿಗಲಿದೆ ಉತ್ತಮ ರಿಟರ್ನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News