ನವದೆಹಲಿ: ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ  ಸಭೆಯಲ್ಲಿ ಇಂದು ಪ್ರಮುಖವಾಗಿ ಎರಡು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ನಿರ್ಧಾರದ ಪ್ರಕಾರ, ಎಲ್ಲಾ ಸಂಸದರ ವೇತನವನ್ನು ಒಂದು ವರ್ಷಕ್ಕೆ ಶೇಕಡಾ 30 ರಷ್ಟು ಕಡಿತಗೊಳಿಸಲಾಗಿದೆ. ಎರಡನೇ ನಿರ್ಧಾರದ ಪ್ರಕಾರ, ಎಂಪಿಎಲ್‌ಎಡಿ ನಿಧಿಯನ್ನು ಎರಡು ವರ್ಷಗಳ ಅವಧಿಗೆ ರದ್ದುಗೊಳಿಸಲಾಗಿದೆ. ಕರೋನಾ ವೈರಸ್ ವಿರುದ್ಧ ಹೋರಾಡಲು ಈ ನಿಧಿಯನ್ನು ಬಳಸಲಾಗುವುದು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಸಂಪುಟದ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಎಲ್ಲಾ ಸಂಸದರ ವೇತನವನ್ನು ಒಂದು ವರ್ಷಕ್ಕೆ ಶೇಕಡಾ 30 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.. ಸಂಸದರ ಈ ಸಂಬಳವನ್ನು ಕರೋನಾ ವೈರಸ್ ವಿರುದ್ಧ ಹೋರಾಡಲು ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.


ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಲಿದೆ. ಅಷ್ಟೇ ಅಲ್ಲ ಸಂಸತ್ತಿನ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರು ಸಹ ಒಂದು ವರ್ಷದವರೆಗೆ ಶೇ.30 ಕಡಿಮೆ ವೇತನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಅವರು, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ  ರಾಜ್ಯಪಾಲರು ಈ ನಿರ್ಧಾರವನ್ನು ಸ್ವಯಂಪ್ರೇರಣೆಯಿಂದ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.


ಸಂಸತ್ತಿನಲ್ಲಿ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯನ್ನು (ಎಂಪಿಎಲ್‌ಎಡಿ) 2 ವರ್ಷಗಳ ಕಾಲ ರದ್ದುಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. 2020-21 ಮತ್ತು 2021-22 ವರ್ಷಗಳವರೆಗೆ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯನ್ನು 2 ವರ್ಷಗಳವರೆಗೆ ರದ್ದುಗೊಳಿಸಲಾಗಿದೆ.


ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿ ಸಂಸದರು ತಮ್ಮ ಪ್ರದೇಶದ ಅಭಿವೃದ್ಧಿಗೆ ಪ್ರತಿ ವರ್ಷ 5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂಬುದು ಇಲ್ಲಿ ಗಮನಾರ್ಥ. ಇದನ್ನು ಎಂಪಿಎಲ್‌ಎಡಿ ಫಂಡ್ ಎಂದು ಕರೆಯಲಾಗುತ್ತದೆ. ಈ ನಿಧಿಯನ್ನು 2 ವರ್ಷಗಳವರೆಗೆ ಸ್ಥಗಿತಗೊಳಿಸುವುದರಿಂದ ಸರ್ಕಾರಕ್ಕೆ 7900 ಕೋಟಿ ರೂ. ಬರಲಿದ್ದು, ಈ ಹಣವು ಭಾರತ ಸರ್ಕಾರದ ಏಕೀಕೃತ ನಿಧಿಗೆ ಹೋಗುತ್ತದೆ. ಈ ಹಣವನ್ನು ಕರೋನಾ ವಿರುದ್ಧ ಹೋರಾಡಲು ಬಳಸಲಾಗುವುದು.