ನವದೆಹಲಿ: ದೆಹಲಿಯಲ್ಲಿನ ನಜಫ್‌ಗಡ್ ಪ್ರದೇಶದಲ್ಲಿ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಡಿಜೆ ಹಾಡುಗಳನ್ನು ನುಡಿಸುತ್ತಿದ್ದ ಬಗ್ಗೆ ಇಬ್ಬರ ನಡುವೆ ನಡೆದ ವಾಗ್ವಾದದ ನಂತರ ಇನ್ನೊಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾನೆ.ಈಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಅನುಜ್ ಶರ್ಮಾ ಎಂಬ ವ್ಯಕ್ತಿಯನ್ನು ಗುರುವಾರ ರಾಜಧಾನಿಯ ನಜಫ್‌ಗಡ ಪ್ರದೇಶದ ತೋಟದ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಆರೋಪಿ ನವೀನ್ ಕುಮಾರ್ ಅವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಹೈದರಾಬಾದ್ ಅಪಾರ್ಟ್ಮೆಂಟ್ನಲ್ಲಿ ಇಸ್ರೋ ವಿಜ್ಞಾನಿ ಕೊಲೆ


ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಡಿಜೆ ಹಾಡುಗಳನ್ನು ನುಡಿಸುವ ಬಗ್ಗೆ ನವೀನ್ ಮತ್ತು ಅನುಜ್ ನಡುವೆ ವಾಗ್ವಾದ ನಡೆಯಿತು. ಮದ್ಯದ ಅಮಲಿನಲ್ಲಿದ್ದ ಆರೋಪಿ ಅನುಜ್ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಗಾಯಗೊಂಡ ನವೀನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಗಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ಇಬ್ಬರನ್ನು ಗುಂಡಿಕ್ಕಿ ಕೊಲೆಗೈದ ದರೋಡೆಕೋರರು


ಈಗ ಪ್ರಕರಣ ದಾಖಲಾಗಿದ್ದು, ತಾಂತ್ರಿಕ ಕಣ್ಗಾವಲು ಮತ್ತು ಆರೋಪಿಗಳ ಕರೆ ವಿವರಗಳ ದಾಖಲೆಗಳನ್ನು ಬಳಸಿಕೊಂಡು ನವೀನ್ ಅವರನ್ನು ಶುಕ್ರವಾರ ಬಾಬಾ ಹರಿದಾಸ್ ನಗರದಿಂದ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಸಂತೋಷ್ ಕುಮಾರ್ ಮೀನಾ ತಿಳಿಸಿದ್ದಾರೆ.


ಇದನ್ನೂ ಓದಿ: ಪತ್ನಿ ತಲೆ ಕತ್ತರಿಸಿ ಬೀದಿಗಳಲ್ಲಿ ಹಿಡಿದು ಓಡಾಡಿದ ಪತಿ! ಮುಂದೇನಾಯ್ತು?


'ವಿಚಾರಣೆಯ ಸಮಯದಲ್ಲಿ, ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಡಿಜೆ ಹಾಡುಗಳನ್ನು ನುಡಿಸುವ ವಿಷಯದ ಬಗ್ಗೆ ಅನುಜ್ ಅವರೊಂದಿಗೆ ಸಣ್ಣದೊಂದು ವಾಗ್ವಾದ ನಡೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಮತ್ತು ಅವನು ಸಹ ಪ್ರಚೋದಿತ ಸ್ಥಿತಿಯಲ್ಲಿದ್ದನು. ಆದ್ದರಿಂದ ಅವನು ಅವನ ಮೇಲೆ ಗುಂಡು ಹಾರಿಸಿದನು" ಎಂದು ಅವರು ಹೇಳಿದರು.


ಎರಡು ಲೈವ್ ಕಾರ್ಟ್ರಿಜ್ಗಳ ಜೊತೆಗೆ ಅಕ್ರಮ ಬಂದೂಕನ್ನು ಹೊಂದಿದ್ದ ಆರೋಪಿ ಪತ್ತೆಯಾಗಿದ್ದು, ಎರಡೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.