ಕೊನೆಗೂ ರಾಜಕೀಯಕ್ಕೆ ಕಾಲಿಟ್ಟ ರಜನಿಕಾಂತ್
ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭಾನುವಾರ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ಕೊನೆಗೂ ರಾಜಕೀಯ ಪ್ರವೇಶವನ್ನು ಖಚಿತ ಪಡಿಸಿದ್ದಾರೆ. ಆ ಮೂಲಕ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ಪಕ್ಷದ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಚೆನ್ನೈನ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಾಜಕೀಯ ಪ್ರವೇಶದ ಕುರಿತು ಮಾತನಾಡುತ್ತಾ "ನಾನು ನನ್ನ ಸ್ವಂತ ಪಕ್ಷವನ್ನು ಪ್ರಾರಂಭಿಸುತ್ತೇನೆ, ನಾನು 234 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇನೆ" ಎಂದು ಅವರು ಹೇಳಿದರು. ಸರ್ಕಾರದಲ್ಲಿ ಅವರ ನಂಬಿಕೆಯನ್ನು ವ್ಯಕ್ತಪಡಿಸಿದ ರಜನಿಕಾಂತ್, "ರಾಜಕೀಯ ಕ್ರಾಂತಿಗೆ ಸಕಾಲ" ಎಂದು ಹೇಳಿದರು.
ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳ ನಮ್ಮ ಸ್ವಂತ ಹಣವನ್ನು ಲೂಟಿ ಮಾಡುತ್ತಿದ್ದಾರೆ, ಆದ್ದರಿಂದ ನಾವು ತಳಮಟ್ಟದಿಂದ ಬದಲಾವಣೆ ತರಬೇಕು. ಸತ್ಯ, ಕೆಲಸ ಮತ್ತು ಬೆಳವಣಿಗೆ ನಮ್ಮ ಪಕ್ಷದ ಮೂರು ಮಂತ್ರಗಳಾಗಿವೆ, ಎಂದು ಈ ಸಂದರ್ಭದಲ್ಲಿ ತಿಳಿಸಿದರು
ಅವರು ಚೆನ್ನೈನಲ್ಲಿ ಅಭಿಮಾನಿಗಳೊಂದಿಗೆ ಭೇಟಿ ನೀಡಲು ಮಂಗಳವಾರದಿಂದ ಸುಮಾರು 6 ದಿನಗಳ ಕಾಲ ಅಭಿಮಾನಿಗಳ ಭೇಟಿಯ ಕಾರ್ಯಕ್ರಮವನ್ನು ನಿಗಧಿಪದಿಸಿದ್ದರು. ಆ ಮೂಲಕ ತಮ್ಮ ರಾಜಕೀಯ ತಿರ್ಮಾನ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಭಾನುವಾರ ಸಮಾರೋಪ ದಿನವಾಗಲಿದೆ ಎಂದು ಹೇಳಲಾಗಿತ್ತು. ಈಗ ತಮಿಳು ಸೂಪರ್ಸ್ಟಾರ್ ಬಲಪಂಥೀಯ ಅಥವಾ ಎಡಪಂಥೀಯ ಪಕ್ಷಕ್ಕೆ ಸೇರದೆ ತಮ್ಮದೇ ಪಕ್ಷವನ್ನು ಸ್ಥಾಪಿಸಿ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ತಿಳಿದುಬಂದಿದೆ.