Mumbai news: ಈ ಏರ್‌ಬಸ್ A340 ವಿಮಾನವು ಸೋಮವಾರ ಮಧ್ಯಾಹ್ನ 2:20 ಕ್ಕೆ ಮುಂಬೈ ತಲುಪಬೇಕಿತ್ತು.. ಆದರೆ ಅದು ತಡವಾಗಿ ಅಂದರೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣ ತಲುಪಿತು... ಫ್ರಾನ್ಸ್‌ನಿಂದ ಭಾರತಕ್ಕೆ ಬಂದು ತಲುಪಿದ ಈ ವಿಮಾನದಲ್ಲಿದ್ದ 50 ಪ್ರಯಾಣಿಕರು ಫ್ರಾನ್ಸ್‌ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ ಕಾರಣ ಹಿಂತಿರುಗಿಲ್ಲ ಎನ್ನಲಾಗಿದ್ದು.. ಆದರೆ 276 ಭಾರತೀಯ ಪ್ರಯಾಣಿಕರು ಸ್ವದೇಶಕ್ಕೆ ಬಂದು ಸೇರಿದ್ದಾರೆ ಎಂದು ವರದಿಯಾಗಿದೆ.. 


COMMERCIAL BREAK
SCROLL TO CONTINUE READING

ರೊಮೇನಿಯಾದ ಲೆಜೆಂಡ್ ಏರ್‌ಲೈನ್ಸ್‌ನ ಈ ವಿಮಾನ ಒಟ್ಟು 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು.. ಅದರಲ್ಲಿ ಹೆಚ್ಚಿನವರು ಭಾರತಿಯರೇ ಎಂದು ಹೇಳಲಾಗಿದೆ.. ಈ ವಿಮಾನ ದುಬೈನಿಂದ ನಿಕರಾಗುವಾಗೆ ಹೊರಟು  ವತ್ರಿ ವಿಮಾನ ನಿಲ್ದಾಣದಲ್ಲಿ ತೈಲ ತುಂಬಲು ನಿಲ್ಲಿಸಿದ ಸಮಯದಲ್ಲಿ ಫ್ರೆಂಚ್ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.. 


ಇದನ್ನೂ ಓದಿ-ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ


ಹೌದು ಆ ವಿಮಾನದಲ್ಲಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಫ್ರೆಂಚ್ ಅಧಿಕಾರಿಗಳಿಗೆ ಬಂದಿತ್ತು.. ಹೀಗಾಗಿ ವಿಮಾನವನ್ನು ಟೇಕ್ ಆಫ್ ಮಾಡುವುದನ್ನು ತಡೆಹಿಡಿಯಲಾಗಿದ್ದು.. ವಿಚಾರಣೆ ನಡೆಸಿದ ನಂತರ ಫ್ರೆಂಚ್ ಅಧಿಕಾರಿಗಳು ಈ ವಿಮಾನಕ್ಕೆ ಪ್ರಯಾಣವನ್ನು ಪುನರಾರಂಭಿಸಲು ಅನುಮತಿ ನೀಡಿದ್ದಾರೆ.. 


ಇದನ್ನೂ ಓದಿ-ಜಿರಳೆಗೂ ‘ಬಂಗಾರದ ಬೆಲೆ’... ಈ ಮಾರ್ಕೆಟ್’ನಲ್ಲಿ ಜಿರಳೆ ಮಾರಿದ್ರೆ ಸಿಗುತ್ತೆ ಲಕ್ಷ ಲಕ್ಷ ದುಡ್ಡು!


ಇನ್ನು ಆ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಮಧ್ಯ ಅಮೆರಿಕದ ನಿಕರಾಗುವಾಗೆ ತಮ್ಮ ಪ್ರಯಾಣ ಮುಂದುವರೆಸಲು ಬಯಸಿದ್ದರಿಂದ ವಾಪಸಾತಿಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ.. 


ಮಾನವ ಕಳ್ಳಸಾಗಣೆ ಶಂಕೆಯಿಂದ ನಿಲ್ಲಿಸಲಾಗಿದ್ದ ಈ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ವತ್ರಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಹಾಸಿಗೆ, ಶೌಚಾಲಯ ಮತ್ತು ಸ್ನಾನ ಮಾಡುವ ಸೌಲಭ್ಯ ಅಲ್ಲದೇ ಬಿಸಿ ಪಾನೀಯಗಳ ಜೊತೆಗೆ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.