Cockroach Farming: ಸಾಮಾನ್ಯವಾಗಿ ಜಿರಳೆಗಳು ಕಂಡರೆ ಅಸಹ್ಯ ಪಡುತ್ತೇವೆ. ಇನ್ನೂ ಕೆಲವರು ಮನೆಯಲ್ಲಿ ಎಲ್ಲಾದರೂ ಜಿರಳೆ ಕಂಡರೆ ಸಾಕು ಎದ್ನೋ ಬಿದ್ನೋ ಅಂತ ಓಡಿಯೇ ಹೋಗ್ತಾರೆ. ಇವುಗಳು ಅತೀ ಹೆಚ್ಚು ಸೋಂಕು ಹರಡುವ ಜೀವಿಗಳು ಎಂದರೂ ತಪ್ಪಾಗಲ್ಲ. ಆದರೆ ಈ ಜಿರಳೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಿದೆ ಗೊತ್ತಾ?
ಇದನ್ನೂ ಓದಿ: ನೀವು ಟಿ20 ವಿಶ್ವಕಪ್ ಆಡ್ತೀರಾ?- ಪ್ರಶ್ನಿಸಿದ ಪತ್ರಕರ್ತನಿಗೆ ರೋಹಿತ್ ಶರ್ಮಾ ಕೊಟ್ಟ ಉತ್ತರವೇನು?
ಅನೇಕ ರಾಷ್ಟ್ರಗಳಲ್ಲಿ ಜಿರಳೆಯನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಒಂದು ಚೀನಾ. ಇನ್ನು ಆಫ್ರಿಕನ್ ದೇಶಗಳಲ್ಲಿ ಆಹಾರದ ಅಭಾವದಿಂದ ಜಿರಳೆಗಳನ್ನು ತಿನ್ನುತ್ತಾರೆ ಎಂದು ಹೇಳಲಾಗುತ್ತದೆ.
ಇನ್ನು ಜಿರಳೆಯಲ್ಲಿ ಕೆಲವು ಉತ್ತಮ ಪೌಷ್ಟಿಕಾಂಶದ ಗುಣಗಳಿವೆ ಎಂದು ಸಾಬೀತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ, ಆಫ್ರಿಕದಲ್ಲಿ ಜಿರಳೆ ಸೇವಿಸುವ ಜನರಿಗೆ ಶೇ.20ರಷ್ಟು ಪ್ರಮಾಣದಲ್ಲಿ ಪೌಷ್ಟಿಕತೆ ದೊರೆತಿದೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ಮೂಲಗಳ ಪ್ರಕಾರ, ಜಗತ್ತಿನಲ್ಲಿ 2100 ಜಾತಿಯ ಕೀಟಗಳನ್ನು ಖಾದ್ಯವೆಂದು ಪರಿಗಣಿಸಲಾಗಿದೆ. ಅದರಲ್ಲಿ ಜಿರಳೆ ಕೂಡ ಸೇರಿದೆ.
ಇನ್ನು ಕೆಲವೊಂದು ದೇಶಗಳಲ್ಲಿ ಜಿರಳೆಗಳ ಫಾರ್ಮ್ ಇದೆ. ಅದರಲ್ಲಿ ಒಂದು ಆಫ್ರಿಕಾದ ತಾಂಜಾನಿಯಾದಲ್ಲಿರುವ ಡೇನಿಯಲ್ ರೋಹುರಾ ಅವರ ಫಾರ್ಮ್. ಈತನ ಪ್ರಕಾರ ಜಿರಳೆಗೆ ಚಿನ್ನದ ಬೆಲೆ. ಪ್ರತಿ ಕೆಜಿಗೆ 5 ಯುರೋಗಳಂತೆ ಈತ ಮಾರಾಟ ಮಾಡುತ್ತಾನೆ.
ಇದನ್ನೂ ಓದಿ: ಅಮೃತಕ್ಕೆ ಸಮ ಕಲ್ಲಂಗಡಿ ಜ್ಯೂಸ್: ವಾರಕ್ಕೊಂದು ಗ್ಲಾಸ್ ಕುಡಿದರೆ ಈ 5 ಕಾಯಿಲೆಗಳನ್ನು ಶಾಶ್ವತವಾಗಿ ದೂರ ಮಾಡುತ್ತೆ
ನಿಮಗಿದು ಗೊತ್ತಾ?.. ಚೀನಾದಲ್ಲಿ ಜಿರಳೆಗಳನ್ನು ಔಷಧೀಯ ಮತ್ತು ಸೌಂದರ್ಯವರ್ಧಕ ವಸ್ತುಗಳಾಗಿಯೂ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲ, ಜಿರಳೆಗಳು ಪ್ರೊಟೀನ್’ನಿಂದ ಸಮೃದ್ಧವಾಗಿದ್ದು, ಅನೇಕ ಹೊಟೇಲ್, ರೆಸ್ಟೋರೆಂಟ್’ಗಳಲ್ಲಿ ವಿಶೇಷ ಖಾದ್ಯವಾಗಿ ಲಭ್ಯವಿದೆ. ವಿಶ್ವದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕ ಚೀನಾದ ಕ್ಸಿಚಾಂಗ್’ನಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.