ದೆಹಲಿ : ₹500 ನಕಲಿ ನೋಟುಗಳ ಪ್ರಮಾಣವು 2022-23 ಹಣಕಾಸು ವರ್ಷದಲ್ಲಿ 91,110 ಯೂನಿಟ್‌ಗಳಿಗೆ ಏರಿಕೆಯಾಗಿದೆ, 2016-17ರ ಹೋಲಿಕೆಯಲ್ಲಿ ಈ ಪ್ರಮಾಣ ಕೇವಲ 21,847 ಯೂನಿಟ್‌ಗಳು ಆಗಿತ್ತು. ಇದರಿಂದಾಗಿ ಈ ಸಮಸ್ಯೆ ದೇಶದ ಆರ್ಥಿಕತೆಯ ಸ್ಥಿರತೆಗೆ ಮತ್ತು ನಗದು ಆಧಾರಿತ ವ್ಯವಹಾರಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿದೆ.


COMMERCIAL BREAK
SCROLL TO CONTINUE READING

ಈ ಸಮಸ್ಯೆ ನಿಯಂತ್ರಿಸಲು ಮತ್ತು ನಕಲಿ ನೋಟುಗಳನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ನಕಲಿ ನೋಟುಗಳ ಉತ್ಪಾದನೆ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಪತ್ತೆಯಾಗುತ್ತಿರುವ ನಕಲಿ ನೋಟುಗಳು, ತೀರಾ ನಿಖರವಾಗಿ ನೋಟುಗಳನ್ನು ನಕಲು ಮಾಡುವ ತಂತ್ರಜ್ಞಾನವನ್ನು ಅಕ್ರಮ ಗುಂಪುಗಳು ಬಳಸುತ್ತಿರುವುದನ್ನು ತೋರಿಸುತ್ತದೆ.


ಇದನ್ನೂ ಓದಿ:ಪುಟ್ಟ ಹಳ್ಳಿಯಾದರೂ ಇರುವವರೆಲ್ಲಾ ಕುಬೇರ ವಂಶಸ್ಥರರೇ !17 ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ 7000 ಕೋಟಿ FD! ಇದು ನಮ್ಮದೇ ದೇಶದ ಹಳ್ಳಿ


ಹಣಕಾಸು ಸಚಿವಾಲಯದ ವರದಿ ಪ್ರಕಾರ, ನಕಲಿ ನೋಟು ಉತ್ಪಾದನೆಗೆ ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಸೇರಿದಂತೆ ಗಡಿಪಾರದ ಅಕ್ರಮ ಜಾಲಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ಇದು ದೇಶದ ಆಂತರಿಕ ಭದ್ರತೆಯನ್ನು ತೀವ್ರ ಪೀಡಿಸುತ್ತಿದೆ.


ಮೋದಿ ಸರ್ಕಾರ 2016ರಲ್ಲಿ ನೋಟಿನ ಅಮಾನಿಕರಣ(Demonitisation) ಮೂಲಕ ₹500 ಮತ್ತು ₹1000 ನೋಟುಗಳನ್ನು ರದ್ದುಗೊಳಿಸಿ ನಕಲಿ ನೋಟುಗಳನ್ನು ತಡೆಯಲು ಪ್ರಯತ್ನಿಸಿದರೂ, ಹೊಸ ₹500 ನೋಟುಗಳು ಅಕ್ರಮ ವಲಯದಲ್ಲಿ ಹೆಚ್ಚು ಬಳಕೆಯಾಗುತ್ತಿವೆ ಎಂಬುದು ಇತ್ತೀಚಿನ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.


ಇದನ್ನೂ ಓದಿ:ಇಂದಿನಿಂದ ಮುಂದಿನ ನಾಲ್ಕು ದಿನ ಈ ಭಾಗಗಳಲ್ಲಿ ಭಾರೀ ಮಳೆ ಬಗ್ಗೆ ಐಎಂಡಿ ಎಚ್ಚರಿಕೆ


ನಕಲಿ ನೋಟುಗಳ ಸಮಸ್ಯೆ ನಿವಾರಿಸಲು, ಹೆಚ್ಚು ಸೂಕ್ಷ್ಮ ಭದ್ರತೆಗಳನ್ನ ಸೇರಿಸುವುದು, ನಗದು ಬಳಕೆಯನ್ನು ಕಡಿಮೆ ಮಾಡುವ ಡಿಜಿಟಲ್ ಪಾವತಿಗಳಿಗೆ ಪ್ರೋತ್ಸಾಹ ನೀಡುವುದು, ಹಾಗೂ ಗಡಿಪಾರಿನ ಅಕ್ರಮ ಚಟುವಟಿಕೆಗಳನ್ನು ಕಡಿಮೆ ಮಾಡಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.


ನಕಲಿ ನೋಟುಗಳ ಏರಿಕೆಯಿಂದಾಗಿ ಪ್ರಾಮಾಣಿಕ ಪ್ರಜೆಗಳ ಭದ್ರತೆ, ಆರ್ಥಿಕ ಸ್ಥಿರತೆ, ಮತ್ತು ನಗದು ಆಧಾರಿತ ವಾಣಿಜ್ಯಕ್ಕೆ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಸರ್ಕಾರದ ಸ್ಪಷ್ಟ ಕ್ರಮಗಳು ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಪ್ರಮುಖವಾಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.