ನವದೆಹಲಿ: ನಿಜಾಮುದ್ದೀನ್ ಮರ್ಕಜ್ ಗೆ ಸಂಬಂಧಿಸಿದಂತೆ ಗಂಭೀರ ವರದಿಯೊಂದು ಬಹಿರಂಗಗೊಂಡಿದೆ. ನಿಜಾಮುದ್ದೀನ್ ಠಾಣೆಯ SHO ಮುಕೇಶ ವಾಲಿಯಾ ಅವರ ದೂರಿನ ಆದಾರದ ಮೇಲೆ ತಬ್ಲೀಗಿ ಜಮಾತ್ ಹಾಗೂ ಮರ್ಕಜ್ ಗೆ ಸಂಬಂಧಿಸಿದಂತೆ ಒಟ್ಟು ಆರು ಜನರ ವಿರುದ್ಧ FIR ದಾಖಲಿಸಲಾಗಿದೆ. ಇದರಲ್ಲಿ ತಬ್ಲೀಗಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕೂಡ ಶಾಮೀಲಾಗಿದ್ದಾರೆ. 


COMMERCIAL BREAK
SCROLL TO CONTINUE READING

ಮೌಲಾನಾ ಸಾದ್ ಜೊತೆಗೆ ಡಾ.ಜಿಶಾನ್, ಮುಂತಿ ಶಹಜಾದ್, ಮೊಹಮ್ಮದ್ ಆಶರ್ರಫ್, ಮುರ್ಸಲೀನ್ ಸೈಫಿ, ಯೂನಿಸ್ ಹಾಗೂ ಮೊಹಮದ್ ಸಲಾಂ ವಿರುದ್ಧ ಕೂಡ FIR ದಾಖಲಿಸಲಾಗಿದೆ. ದೆಹಲಿ ಪೊಲೀಸರು ಜಾರಿಗೊಳಿಸಲಾಗಿರುವ ವಿಡಿಯೋದಲ್ಲಿ ಈ ಆರು ಜನರನ್ನು ನೀವು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ನಿಜಾಮುದ್ದೀನ್ SHO ಮುಕೇಶ್ ವಾಲಿಯಾ ಇವರೆಲ್ಲರಿಗೆ ಮರ್ಕಜ್ ಅನ್ನು ಖಾಲಿಗೊಳಿಸಲು ಮನವಿ ಮಾಡುತ್ತಿರುವುದು ಕಂಡುಬಂದಿದೆ.


ಅಷ್ಟೇ ಅಲ್ಲ ಮಾರ್ಚ್ 28ರ ರಾತ್ರಿ ಮೌಲಾನಾ ಸಾದ್ ಕಣ್ಮರೆಯಾಗಿದ್ದು, ಅವರಿಗಾಗಿ ಶೋಧಕಾರ್ಯದಲ್ಲಿ ತೊಡಗಿರುವ ಪೊಲೀಸರು ವಿವಿಧ ಪ್ರದೇಶಗಳಲ್ಲಿ ರೆಡ್ ನಡೆಸುತ್ತಿದ್ದಾರೆ. ಮೌಲಾನಾ ಸಾದ್ ಅವರಿಗೆ ಸಂಬಂಧಿಸದ ಹಲವು ಸ್ಥಾನಗಳಲ್ಲಿ ಈಗಾಗಲೇ ರೆಡ್ ನಡೆಸಲಾಗಿದೆ ಎನ್ನಲಾಗಿದೆ. ಮೌಲಾನಾ 14 ದಿನಗಳ ಸೆಲ್ಫ್ ಕ್ವಾರಂಟೀನ್ ಗೆ ಒಳಗಾಗಿರಬಹುದು ಎಂದು ಕೆಲವರು ಮಾಹಿತಿ ನೀಡಿದ್ದಾರೆ. ಜೊತೆಗೆ ಇದುವರೆಗೂ ಕೂಡ ಮರ್ಕಜ್ ಅನ್ನು ಸ್ಯಾನಿಟೈಸ್ ಗೊಲಿಸಲಾಗಿಲ್ಲ ಎನ್ನಲಾಗುತ್ತಿದೆ.


ತಬ್ಲೀಗಿ ಜಮಾತ್ ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಗಂಭೀರ 
ತಬ್ಲೀಗಿ ಜಮಾತ್ ಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಗಂಭೀರ ಹೆಜ್ಜೆಯೊಂದನ್ನು ಇಟ್ಟಿದೆ. ಗೃಹ ಸಚಿವಾಲಯ ಕೈಗೊಂಡ ನಿರ್ಣಯದ ಪ್ರಕಾರ ಪ್ರವಾಸಿ ವಿಜಾ ಮೇಲೆ ಮಿಷನರಿ ಚಟುವಟಿಕೆಗಳಲ್ಲಿ ತೊಡಗಿರುವವರು ಯಾವುದೇ ರೂಪದಲ್ಲಿ ಇದ್ದರೂ ಕೂಡ ಅವರ ಮೇಲೆ ಪ್ರವಾಸಿ ವಿಜಾ ನಿಯಮಗಳ ಉಲ್ಲಂಘನೆಯ ಅಡಿ ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿ ವಿಜಾ ನಿಯಮಗಳ ಅಡಿ ತಬ್ಲೀಗಿ ಚಟುವಟಿಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ . ಈ ಜಮಾತ್ ನಲ್ಲಿ ವಿದೇಶದಿಂದ ಬಂದ ಯಾವುದೇ ಓರ್ವ ವ್ಯಕ್ತಿ ಕೊರೊನಾ ಸೋಂಕಿತನಾಗಿಲ್ಲ ಎಂದಾದರೆ ಕೂಡಲೇ ಅವರನ್ನು ಮೊದಲ ಫ್ಲೈಟ್ ನಿಂದ ಅವರ ದೇಶಕ್ಕೆ ಮರುಕಳಿಸಲಾಗುವುದು ಎಂದು ಸಚಿವಾಲಯ ಹೇಳಿದೆ.


ಗೃಹ ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸದ್ಯ ದೇಶಾದ್ಯಂತ ಸುಮಾರು 2000 ವಿದೇಶಿ ನಾಗರಿಕರಿದ್ದು, ಇವರು ತಬ್ಲೀಗಿ ಜೊತೆ ಸಂಪರ್ಕ ಹೊಂದಿದ ಸುಮಾರು 70 ದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಇವರೆಲ್ಲರೂ ಮಲೇಶಿಯಾದ ಕ್ವಾಲಾಲಂಪುರ್ ನಲ್ಲಿ ಮಾರ್ಚ್ ತಿಂಗಳ ಮೊದಲನೇ ವಾರದಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದಲೇ ಇವರಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಶಂಕಿಸಾಲಾಗಿದೆ. ಈ ವಿದೇಶಿ ನಾಗರಿಕರಲ್ಲಿ ಬಹುತೇಕರು ಬಾಂಗ್ಲಾದೇಶ (493), ಇಂಡೋನೇಶಿಯಾ(472), ಮಲೇಶಿಯಾ(150) ಹಾಗೂ ಥೈಲ್ಯಾಂಡ್(142) ದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಭಾರತದಲ್ಲಿ ಅವರು 6 ತಿಂಗಳುಗಳ ಕಾಲ ವಾಸಿಸಬಹುದಾಗಿದೆ.