ಮುಂಬೈ: ಮುಂಬೈನ ಕಮಲಾ ಮಿಲ್ಸ್ನಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿರುವ ಘಟನೆಯ ಬಳಿಕ ಬುಧವಾರ ನಗರದ ಮೈಮೋನ್ ಕಟ್ಟಡದಲ್ಲಿ ಮತ್ತೊಂದು ಬೆಂಕಿ ಅನಾಹುತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ ನಾಲ್ಕು ಜನರು ಮರಣಹೊಂದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಮಾರೊಲ್ನಲ್ಲಿರುವ ಕಟ್ಟಡದ ಮೂರನೆಯ ಮಹಡಿಯಲ್ಲಿ ಗುರುವಾರ 1:30 ರ ಹೊತ್ತಿಗೆ ಈ ಸ್ಫೋಟ ಸಂಭವಿಸಿತು. ಸ್ಥಳಕ್ಕೆ ತತಕ್ಷಣ ಆಗಮಿಸಿದ ಅಗ್ನಿಶಾಮಕ ದಳವು ಕನಿಷ್ಠ 11 ಜನರನ್ನು ರಕ್ಷಿಸಿದೆ. 



COMMERCIAL BREAK
SCROLL TO CONTINUE READING

"ಮುಂಬೈ ಅಗ್ನಿಶಾಮಕ ದಳವು ಬೆಳಗ್ಗೆ 2.10 ಕ್ಕೆ ಮೈಮೋನ್ ಕಟ್ಟಡದಲ್ಲಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದ ನಾಲ್ಕನೇ ಮಹಡಿಗೆ ಅಗ್ನಿಶಾಮಕ ಸಿಬ್ಬಂದಿ, ಅಗ್ನಿಶಾಮಕ ವ್ಯವಸ್ಥೆ ಮತ್ತು ಆಂಬುಲೆನ್ಸ್ನೊಂದಿಗೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಕೈಗೊಂಡರು ಎಂದು "BMC ಯ ವಿಪತ್ತು ನಿರ್ವಹಣೆ ಘಟಕದಿಂದ ಅಧಿಕೃತ ಹೇಳಿಕೆ" ತಿಳಿಸಿದೆ.



"ಅಗ್ನಿಶಾಮಕ ದಳಗಳು ಎಲ್ಲಾ ಕಡೆಗಳಿಂದ 4.20 ಕ್ಕೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಲ್ಲದೇ ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಸಕಿನಾ ಕಪಾಸಿ, ಮೋಹಿನ್ ಕಪಾಸಿ, ತಸ್ಲೀಮ್ ಕಪಾಸಿ ಮತ್ತು ದಾವೂದ್ ಕಪಾಸಿ ಎಂದು ಗುರುತಿಸಲಾಗಿದೆ ಎಂದು ಬಿಎಂಸಿಯ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಯುನಿಟ್ನ ಅಧಿಕೃತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.