ನವದೆಹಲಿ: ಒರಿಸ್ಸಾದ ಬಾಲಸೋರ್ ಮತ್ತು ಸೊರೊ ರೈಲ್ವೆ ನಿಲ್ದಾಣಗಳ ನಡುವೆ ಭುವನೇಶ್ವರ್ ರಾಜಧಾನಿ ಎಕ್ಸ್ ಪ್ರೆಸ್ ಗೆ ಆಕಸ್ಮಿಕವಾಗಿ ಶನಿವಾರ ಬೆಂಕಿ ತಗುಲಿದೆ. ಆದರೆ ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಬೆಳಿಗ್ಗೆ 12.50 ರಿಂದ 1 ಗಂಟೆಗೆ ಬೆಂಕಿ ತಗುಲಿದ್ದು, ರೈಲಿನ ಹಿಂಭಾಗದಲ್ಲಿ ಪವರ್ ಕಾರ್ ಗೆ ತೀವ್ರಹಾನಿಯಾಗಿದೆ. ಆದರೆ ಅದು ಮುಂದೆ ಯಾವುದೇ ಬೋಗಿಗಳಿಗೆ ವಿಸ್ತರಿಸಿಲ್ಲ ರೈಲ್ವೇಯಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸದಿಲ್ಲಿಯಿಂದ ಭುವನೇಶ್ವರಕ್ಕೆ ಸಾಗುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ 22812 ರ ವಿದ್ಯುತ್ ಕಾರ್ನಲ್ಲಿ ಹೊಗೆ ಪತ್ತೆಯಾಗಿದೆ.ಇದು ರೈಲುಗೆ ವಿದ್ಯುತ್ ಪೂರೈಸುವ ಏಕೈಕ ಪವರ್ ಕಾರ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಘಟನೆಯು ದಕ್ಷಿಣ ಪೂರ್ವದ ರೈಲ್ವೇಸ್ನ ಖರಗಪುರದ ವಿಭಾಗದ ಖಂತಪಾಡದಲ್ಲಿ ನಡೆದಿದ್ದು.ಈ ದುರ್ಘಟನೆ ನಡೆದ ನಂತರ ಸ್ಥಳಕ್ಕೆ ಮೂರು ಬೆಂಕಿ ಎಂಜಿನ್ ಆಗಮಿಸಿ ಜ್ವಾಲೆಯನ್ನು ನಂದಿಸಿದವು ಎಂದು ತಿಳಿದುಬಂದಿದೆ.ಈಗ ಸುರಕ್ಷತೆಯ ಕಾರಣಗಳಿಗಾಗಿ ವಿದ್ಯುತ್ ನ್ನು ಕಡಿತಗೊಳಿಸಲಾಗಿದೆ.