ನವದೆಹಲಿ : ಭಾರತದಲ್ಲಿ ರೂಪಾಂತರಿ ಕರೋನಾ (Coronavirus)ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ಜನವರಿ 7ರವರೆಗೆ ಬ್ರಿಟನ್ ನಿಂದ ಬರುವ ಮತ್ತು ಬ್ರಿಟನ್ ಗೆ ತೆರಳುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದುವರೆಗೆ ಭಾರತದಲ್ಲಿ 20 ಜನರಲ್ಲಿ ರೂಪಾಂತರಿತ ಕರೋನಾ ಸೋಂಕು ಕಂಡುಬಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ಈ ಮೊದಲು ಜನವರಿ ತನಕ ಭಾರತ ಬ್ರಿಟನ್ ನಡುವೆ ವಾಯುಯಾನ ರದ್ದು ಪಡಿಸಿತ್ತು. ಈಗ ಅದನ್ನು ಜನವರಿ 7ರ ತನಕ ವಿಸ್ತರಿಸಿದೆ. ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪುರಿ  (Hardeep Singh Puri)ಈ ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING


ನವೆಂಬರ್ ಡಿಸೆಂಬರ್ ಮಧ್ಯೆ ಬ್ರಿಟನ್ ಬಂದವರು 33 ಸಾವಿರ ಮಂದಿ..!


ಭಾರತದಲ್ಲಿ ಇದುವರೆಗೆ 20 ಮಂದಿಯಲ್ಲಿ ರೂಪಾಂತರಿತ ಕರೋನಾ ವೈರಸ್ (COVID-19) ಪತ್ತೆಯಾಗಿದೆ. ಇವರೆಲ್ಲರೂ ಬ್ರಿಟನ್ ನಿಂದ (Britain) ಮರಳಿದವರಾಗಿದ್ದಾರೆ. ವರದಿಯೊಂದರ ಪ್ರಕಾರ 25 ನವೆಂಬರ್ ಮತ್ತು 23 ಡಿಸೆಂಬರ್ ಅವಧಿಯಲ್ಲಿ ಸುಮಾರು 33 ಸಾವಿರ ಪ್ರಯಾಣಿಕರು ಬ್ರಿಟನ್ ನಿಂದ ಭಾರತಕ್ಕೆ ಬಂದಿದ್ದಾರೆ. ಇವರಲ್ಲಿ 100ಕ್ಕೂ ಹೆಚ್ಚು ಮಂದಿಯಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ. ಡಿಸೆಂಬರ್ 23 ರಂದು ಭಾರತ ಬ್ರಿಟನ್ ನಡುವೆ ವಾಯು ಸಂಚಾರ ರದ್ದು ಪಡಿಸಲಾಗಿತ್ತು. ಕೊವಿಡ್ ಮುನ್ನೆಚ್ಚರಿಕೆ ಕ್ರವಾಗಿ ಈ ನಿರ್ಧಾರಕ್ಕೆ ಬರಲಾಗಿತ್ತು.


ALSO READ : Coronavirus : ಲಂಡನ್ ವೈರಸ್ ನಿಂದ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ.. ರೂಪಾಂತರಿ ಕರೋನಾ ಮಕ್ಕಳಿಗೆ ಮಾರಕವೇ..?


ಯಾವೆಲ್ಲಾ ದೇಶಕ್ಕೆ ರೂಪಾಂತರಿತ ಕರೋನಾ ಹರಡಿದೆ ಗೊತ್ತಾ..?
ಸೂಪರ್ ಸ್ಪ್ರೆಡರ್ ಎಂದೇ ಕರೆಯಲಾಗುವ ರೂಪಾಂತರಿತ ಕರೋನಾ (Coronavirus) ಮೊದಲು ಪತ್ತೆಯಾಗಿದ್ದು ಬ್ರಿಟನ್ ನಲ್ಲಿ.  ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡಾ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ವೈರಸ್ ಈಗಾಗಲೇ ಹರಡಿದೆ. ಬ್ರಿಟನ್ (UK), ಭಾರತ, ಅಮೆರಿಕ (US), ಸ್ಪೇನ್, ಸ್ವೀಡನ್, ಸ್ವಿಡ್ಜರ್ ಲ್ಯಾಂಡ್, ಫ್ರಾನ್ಸ್, ಡೆನ್ಮಾರ್ಕ್, ಜರ್ಮನಿ, ಇಟಲಿ, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಲೆಬನಾನ್, ಸಿಂಗಾಪುರ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಈಗಾಗಲೇ ಹೊಸ ಸ್ವರೂಪದ ಕರೋನಾ ಪತ್ತೆಯಾಗಿದೆ. ಇಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದಲ್ಲೂ ಹೊಸ ಅವತಾರದ ಕರೋನಾ ವೈರಸ್ ಪತ್ತೆಯಾಗಿದೆ. ಇದು ಬ್ರಿಟನ್ ನಲ್ಲಿ ಪತ್ತೆಯಾದ ವೈರಸ್ ಗಿಂತ ಭಿನ್ನವಾಗಿದೆ.



ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.