ಜೈಪುರ: ಒಂದು ತಿಂಗಳಿನಿಂದ ನಡೆದ ರಾಜಕೀಯ ಪ್ರಹಸನ ಅಂತ್ಯಗೊಂಡಿದ್ದರೂ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಬಗೆಹರಿಯುವ ಬಗ್ಗೆ ಅಂತಿಮ‌ ಚಿತ್ರಣ ಸಿಗುವುದು ಇವತ್ತು ಮಾತ್ರ. ಏಕೆಂದರೆ ಇಂದು ರಾಜಸ್ಥಾನದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ವಿಶ್ವಾಸಮತಯಾಚನೆ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಅಶೋಕ್ ಗೆಹ್ಲೋಟ್ ಮಂಡಿಸುವ ವಿಶ್ವಾಸ ಮತಯಾಚನೆ ಪರವಾಗಿ ಬಂಡಾಯ ನಾಯಕ ಸಚಿನ್ ಪೈಲಟ್ (Sachin Pilot) ಬಣ ಮತ ಚಲಾಯಿಸುವುದೋ ಇಲ್ಲವೋ ಎಂಬುದು ಗೊತ್ತಾಗಲಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ನಿರ್ಧರಿಸಿದೆ.


ರಾಜಸ್ಥಾನ ರಾಜಕೀಯದಲ್ಲಿ ಹೊಸ ತಿರುವು, ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ಬಿಎಸ್ಪಿ ವಿಪ್


ಗುರುವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ಈ ನಿರ್ಧಾರ ಮಾಡಿದೆ. ಸಭೆಯ ಬಳಿಕ ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನೊಂದೆಡೆ  ಬಿಜೆಪಿಯ ರಾಜಸ್ಥಾನ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಕೂಡ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.


ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಳೆದ ತಿಂಗಳು ಸಚಿನ್ ಪೈಲಟ್ ಸೇರಿದಂತೆ 18 ಶಾಸಕರು ಬಂಡಾಯ ಎದ್ದಿದ್ದರು. ಆನಂತರ ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಬಿಜೆಪಿ ಸೇರಲು ಹೊರಟಿದ್ದಾರೆಂದು ಆರೋಪಿಸಿ ಬಂಡಾಯಗಾರರನ್ನು ಪಕ್ಷಾಂತರ ಕಾಯ್ದೆ ಅಡಿ ಶಾಸಕ ಸ್ಥಾನದಿಂದ ವಜಾಗೊಳಿಸುವ ಪ್ರಯತ್ನವೂ ನಡೆದಿತ್ತು. ಕೊನೆಗೆ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಮಧ್ಯಸ್ಥಿಕೆಯಿಂದ ಬಿಕ್ಕಟ್ಟು ಬಗೆಹರಿದಿತ್ತು.


ಹೊಸ ಮಾರ್ಗಸೂಚಿ: ಆಧಾರ್ ಕಾರ್ಡ್ ಇಲ್ಲದೆ ನಡೆಯಲ್ಲ ಕರೋನಾವೈರಸ್ ಟೆಸ್ಟ್


ಕಾಂಗ್ರೆಸ್ ಒಳ ಜಗಳ ಬಗೆಹರಿಯಿತು ಎನ್ನುವಷ್ಟರಲ್ಲಿ  ಬಿಜೆಪಿಯವರು ಅವಿಶ್ವಾಸ ನಿರ್ಣಯದ ಅಸ್ತ್ರ ಪ್ರಯೋಗಿಸಲು ಹೊರಟಿದ್ದಾರೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 124 ಸದಸ್ಯರ ಬೆಂಬಲವನ್ನು ಹೊಂದಿದೆ. ಇದರಲ್ಲಿ ಕಾಂಗ್ರೆಸ್​ ಪಕ್ಷದ 107, ಇತರ ಪಕ್ಷಗಳ 12 ಮತ್ತು 17 ಪಕ್ಷೇತರ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬೆಂಬಲಿಸಿದ್ದಾರೆ. ಬಿಜೆಪಿ ಬಳಿ ಇರುವುದು 75 ಸದಸ್ಯರ ಬೆಂಬಲ ಮಾತ್ರ. ಆ ಪೈಕಿ ಮೂವರು ಶಾಸಕರು ಆರ್​ಎಲ್​ಪಿ ಪಕ್ಷದವರು. ಆದರೂ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದು ಕುತೂಹಲಕಾರಿಯಾಗಿದೆ.