ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆಗಳ (ಎಫ್‌ಪಿಐ) ಮೇಲಿನ ವರ್ಧಿತ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಉನ್ನತ ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಇಕ್ವಿಟಿ ವರ್ಗಾವಣೆಯಿಂದ ಉಂಟಾಗುವ ದೀರ್ಘ ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳಿಂದ ವರ್ಧಿತ ಹೆಚ್ಚುವರಿ ಶುಲ್ಕದಿಂದ ಪರಿಹಾರ ಸಿಗಲಿದೆ ಎಂದು ತಿಳಿಸಿದರು.


'ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ, ಹಣಕಾಸು ಸಂಖ್ಯೆ 2 ಕಾಯ್ದೆ 2019 ವಿಧಿಸಿದ ವರ್ಧಿತ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಎಫ್‌ಪಿಐ ಮೇಲಿನ ವರ್ಧಕ ಹೆಚ್ಚುವರಿ ಶುಲ್ಕ, ದೇಶೀಯ ಹೂಡಿಕೆದಾರರಿಗೆ ಈಕ್ವಿಟಿಯಲ್ಲಿ ಹೆಚ್ಚುವರಿ ಶುಲ್ಕ ವಿಧಿಸುತ್ತದೆ. ಬಜೆಟ್ ಪೂರ್ವದಲ್ಲಿನ ಸ್ಥಾನ ಪುನಃಸ್ಥಾಪಿಸಲಾಗಿದೆ, 'ಎಂದು ಹೇಳಿದರು. ಈಕ್ವಿಟಿ ಮಾರುಕಟ್ಟೆಗಳಲ್ಲಿ ದೇಶೀಯ ಹೂಡಿಕೆದಾರರ ಮೇಲಿನ ಹೆಚ್ಚುವರಿ ಶುಲ್ಕವನ್ನು ಸಹ ಹಿಂಪಡೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಘೋಷಿಸಿದರು.


ಎಫ್‌ಪಿಐಗಳು ನಿರಂತರವಾಗಿ ಮಾರಾಟ ಮಾಡುವುದರಿಂದ ಹೂಡಿಕೆದಾರರು ಮೋಸ ಹೋಗಿದ್ದಾರೆ.ಹೆಚ್ಚುವರಿ ಶುಲ್ಕದ ವ್ಯಾಪ್ತಿಯಿಂದ ಹೊರಗುಳಿಯಲು ಟ್ರಸ್ಟ್‌ಗಳು ಕಂಪನಿಗಳಾಗಿ ನೋಂದಾಯಿಸಿಕೊಳ್ಳಬೇಕು ಎಂದು ಸೀತಾರಾಮನ್ ತಿಳಿಸಿದರು.ಈ ಬಾರಿ ಬಜೆಟ್ ನಲ್ಲಿ ವ್ಯಕ್ತಿಗಳು ಮತ್ತು ಟ್ರಸ್ಟ್‌ಗಳಿಗೆ ಕ್ರಮವಾಗಿ 2 ಕೋಟಿ ಮತ್ತು 5 ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದರೆ ಅಂತವರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದರ ಕುರಿತಾಗಿ ಪ್ರಸ್ತಾಪಿಸಿತ್ತು.