Street Vendorsಗಳಿಗೆ 5000 ಕೋಟಿ ರೂ. ವಿಶೇಷ ಪ್ಯಾಕೇಜ್, 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭ
ಇದರಿಂದ ಸುಮಾರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ನವದೆಹಲಿ: ಬೀದಿ ಬದಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ 5000 ಕೋಟಿ ರೂ.ಗಳ ವಿಶೇಷ ಸಾಲ ಸೌಲಭ್ಯವನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ. ಕೋವಿಡ್ 19 ರ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳ ಮೇಲೆ ವ್ಯಾಪಾರ ನಡೆಸುವ ಸಾಕಷ್ಟು ಜನರು ತೊಂದರೆ ಅನುಭವಿಸಬೇಕಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ ಮುಂದಿನ ಒಂದು ತಿಂಗಳಲ್ಲಿ ಸರ್ಕಾರವು ಅವರಿಗೆ ಒಂದು ಯೋಜನೆಯನ್ನು ಪ್ರಾರಂಭಿಸಲಿದ್ದು, ಇದರಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಮತ್ತೆ ಪ್ರಾರಂಭಿಸಲು ತ್ವರಿತ ಸಾಲ ಸೌಲಭ್ಯವನ್ನು ಪಡೆಯಬಹುದು. ಇದರಿಂದ ಸುಮಾರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಪಿಎಂ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮಂಗಳವಾರ ಪ್ರಕಟಿಸಿದ್ದಾರೆ. ವಿತ್ತ ಸಚಿವರು ಎರಡನೇ ಕಂತಿನ ವಿವರಗಳನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.
ಡಿಜಿಟಲ್ ಪೇಮೆಂಟ್ ಮಾಡುವವರಿಗೆ ಬಹುಮಾನ ಕೂಡ ನೀಡಲಿದೆ ಸರ್ಕಾರ
ಬೀದಿ ಬದಿ ಮತ್ತು ಪಾದಚಾರಿಗಳ ಮೇಲೆ ವ್ಯಾಪಾರ ನಡೆಸುವ ವ್ಯಾಪಾರಿಗಳು 5000 ಕೋಟಿ ರೂ.ಗಳ ವಿಶೇಷ ಸಾಲದಡಿ ಪ್ರತಿ ವ್ಯಕ್ತಿಗೆ 10,000 ರೂ.ಗಳವರೆಗೆ ಕಾರ್ಯನಿರತ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಸೌಲಭ್ಯವನ್ನು ಪಡೆಯಬಹುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಷ್ಟೇ ಅಲ್ಲ ಯಾವ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ಪಾವತಿ ಮೂಲಕ ತಾವು ಪಡೆದ ಸಾಲವನ್ನು ಮರುಪಾವತಿ ಮಾಡುತ್ತಾರೋ ಅವರಿಗೆ ಬಹುಮಾನ ನೀಡುವ ಮೂಲಕ ಪ್ರೋತ್ಸಾಹ ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಡಿಜಿಟಲ್ ಪಾವತಿ ಮೂಲಕ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಬೀದಿ ಬದಿಯ ವ್ಯಾಪಾರಿಗಳಿಗೆ ಮುಂಬರುವ ದಿನಗಳಲ್ಲಿ ಹೆಚ್ಚೂವರಿ ಸಾಲ ಸೌಲಭ್ಯ ಕೂಡ ನೀಡಲಾಗುವುದು ಎಂದಿದ್ದಾರೆ. ಹಣಕಾಸು ಸಚಿವರು ಪ್ರಕಟಿಸಿರುವ ಈ ವಿಶೇಷ ಪ್ಯಾಕೇಜ್ ನಿಂದ ಸುಮಾರು 5 ಮಿಲಿಯನ್ ಬೀದಿ ಬದಿಯ ಮಾರಾಟಗಾರರಿಗ ಲಾಭವಾಗಲಿದೆ. ಇದಕ್ಕಾಗಿ ಮೋದಿ ಸರ್ಕಾರ ಲಿಕ್ವಿಡಿಟಿ ಸೌಲಭ್ಯ ಒದಗಿಸಲಿದೆ.
ಬುಡಕಟ್ಟು ಜನಾಂಗದವರಿಗೆ ಉದ್ಯೋಗಾವಕಾಶ ಕಲ್ಪಿಸಲು 600೦ ಕೋಟಿ ನೀಡಲಾಗುವುದು
ಬುಡಕಟ್ಟು ಪ್ರದೇಶದಲ್ಲಿ ವಾಸವಾಗಿರುವ ಜನಾಂಗದವರಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ದೇಶಿಸಿರುವ ಕೇಂದ್ರದ ಮೋದಿ ಸರ್ಕಾರ, CAMPA ಯೋಜನೆಯನ್ನು ಜಾರಿಗೆ ತರಲಿದ್ದು, ಈ ಯೋಜನೆಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 6 ಸಾವಿರ ಕೋಟಿ ರೂ.ನೀಡುವುದಾಗಿ ಘೋಷಿಸಿದ್ದಾರೆ. ಬುಡಕಟ್ಟು ಜನಾಂಗದ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವ ಉದ್ದೆಶದಿಂದ ಈ ನಿಧಿಯನ್ನು ಸೃಷ್ಟಿಸಲಾಗುತ್ತಿದ್ದು, ಇದರಿಂದ ನಗರ ಪ್ರದೇಶಗಳಲ್ಲಿ ವೃಕ್ಷಾರೋಪಣ, ಅರಣ್ಯೀಕರಣ, ಅರಣ್ಯ ನಿರ್ವಹಣೆ, ಅರಣ್ಯ ಸಂರಕ್ಷಣೆ, ಮಣ್ಣು / ಪರಿವರ್ತನೆಗಳಂತಹ ಕಾರ್ಯಗಳು ರಾಜ್ಯ ಸರ್ಕಾರಗಳು ನಡೆಸಲಿವೆ ಎಂದು ಹೇಳಿದ್ದಾರೆ. ಈ ನಿಧಿ ನಗರ, ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬುಡಕಟ್ಟು ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರು ಹೇಳಿದ್ದಾರೆ.