ರೂ.2000 ನೋಟುಗಳ ಮುದ್ರಣ ಬಂದ್ ಮಾಡಲಾಗಿದೆಯೇ? ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಕೇಂದ್ರ ಸರ್ಕಾರ ರೂ.2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಇತ್ತೀಚಿಗೆ ಹಲವು ವರದಿಗಳು ಪ್ರಕಟಗೊಂಡಿದ್ದವು. ಈ ಕುರಿತಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ ರೂ.2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಇತ್ತೀಚಿಗೆ ಹಲವು ವರದಿಗಳು ಪ್ರಕಟಗೊಂಡಿದ್ದವು. ಈ ಕುರಿತಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಂಸತ್ತಿನಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸೀತಾರಾಮನ್, ನೋಟು ಮುದ್ರಣ ಸ್ಥಗಿತಗೊಳಿಸುವ ಯಾವುದೇ ನಿರ್ಣಯವನ್ನು ಸರ್ಕಾರ ಇದುವರೆಗೆ ಕೈಗೊಂಡಿಲ್ಲ ಎಂದಿದ್ದಾರೆ.
RBI ನೀಡಿರುವ ಸಲಹೆಯ ಮೇರೆಗೆ ನಿರ್ಣಯ ಕೈಗೊಳ್ಳಲಾಗುತ್ತದೆ
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ (Anurag Thakur), ನೋಟುಗಳ ಮುದ್ರಣ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನೋಟು ಮುದ್ರಣದ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಸಲಹೆಯನ್ನು ಪಡೆದು ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತದೆ. ಇದರಿಂದ ಪಬ್ಲಿಕ್ ಡಿಮಾಂಡ್ ಆಧಾರದ ಮೇಲೆ ಸಿಸ್ಟಂ ನಲ್ಲಿ ಕರೆನ್ಸಿ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ.
ಇದನ್ನು ಓದಿ- Bank ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಸೂಚನೆ... ಬದಲಾದ ಈ ನಿಯಮ ನಿಮಗೂ ತಿಳಿದಿರಲಿ
ಬಂದ್ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ
2019-20 ಮತ್ತು 2020-21ರ ಅವಧಿಯಲ್ಲಿ 2000 ಮುಖಬೆಲೆಯ ಕರೆನ್ಸಿ ನೋಟುಗಳ ಮುದ್ರಣಕ್ಕಾಗಿ ಯಾವುದೇ ಹೊಸ ಆದೇಶ ನೀಡಲಾಗಿಲ್ಲ. ಆದರೆ, ಸರ್ಕಾರದ ವತಿಯಿಂದ ಇದುವರೆಗೆ ಈ ನೋಟುಗಳ ಮುದ್ರಣ ಸ್ಥಗಿತಗೊಳಿಸಲು ಯಾವುದೇ ರೀತಿಯ ಆದೇಶ ನೀಡಲಾಗಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿ- ಇನ್ಮುಂದೆ Debit Card ಅಲ್ಲ, Watch ಬಳಸಿ ಈ ಕೆಲಸ ಮಾಡಿ, SBI ಆರಂಭಿಸಿದೆ ಈ ಅದ್ಭುತ ಸೇವೆ
ಮತ್ತೆ ಮುದ್ರಣ ಕಾರ್ಯ ಆರಂಭಗೊಂಡಿದೆ
ಮಾರ್ಚ್ 31, 2020ರವರೆಗೆ ಇಡೀ ದೇಶಾದ್ಯಂತ 2000 ಮುಖಬೆಲೆಯ ಒಟ್ಟು 27,398 ಕರೆನ್ಸಿ ನೋಟುಗಳು ಚಾಲ್ತಿಯಲ್ಲಿವೆ. ಮಾರ್ಚ್ 31, 2019ರಲ್ಲಿ ಈ ಸಂಖ್ಯೆ 32,910 ರಷ್ಟಿತ್ತು. ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದ ಕಾರಣ ನೋಟು ಮುದ್ರಣ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ, ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನಗಳ ಅಡಿಯಲ್ಲಿ ಹಂತ-ಹಂತವಾಗಿ ಮತ್ತೆ ನೋಟುಗಳ ಮುದ್ರಣ ಕಾರ್ಯ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿ- ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ನಿಯಂತ್ರದಡಿ ತರುವ ಮಸೂದೆ ಅಂಗೀಕರಿಸಿದ ಲೋಕಸಭೆ
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಮೂಲಕ ನೋಟುಗಳ ಮುದ್ರಣ ಕೆಲಸ ನಡೆಸಲಾಗುತ್ತದೆ. ದೇಶಾದ್ಯಂತ ಪಸರಿಸಿರುವ ಕೊರೊನಾವೈರಸ್ ಮಹಾಮಾರಿಯ ನಡುವೆ RBI, ಮಾರ್ಚ್ 23 ರಿಂದ ಮೇ 03ರವರೆಗೆ ನೋಟುಗಳ ಮುದ್ರಣ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ವಿಧಿಸಿತ್ತು.
ಇದನ್ನು ಓದಿ- Home Loan ಗ್ರಾಹಕರಿಗೆ ಎಸ್‌ಬಿಐ ನೀಡುತ್ತಿದೆ ಆಕರ್ಷಕ ಕೊಡುಗೆ, EMI ಎಷ್ಟು ಕಡಿಮೆಯಾಗಲಿದೆ?