ನವದೆಹಲಿ: ಇದೀಗ ನಿಮಗೆ ಶಾಪಿಂಗ್ ನಂತರ ಹಣ ಪಾವತಿಸಲು ಯಾವುದೇ ಡೆಬಿಟ್ ಕಾರ್ಡ್ ಅಥವಾ ಯಾವುದೇ ಮೊಬೈಲ್ ಫೋನ್ ಅಪ್ಲಿಕೇಶನ್ ಬಳಸುವುದು ಅಗತ್ಯವಿಲ್ಲ. ಈ ಕೆಲಸವನ್ನು ನೀವು ನಿಮ್ಮ ಕೈಗೆ ಕಟ್ಟಿದ ಗಡಿಯಾರದಿಂದ ಮಾದಬಹುದಾಗಿದೆ. ವಾಚ್ ನಿರ್ಮಾಣದ ದೈತ್ಯ ಕಂಪನಿ ಟೈಟಾನ್ (TITAN) ಭಾರತದಲ್ಲಿ ಮೊದಲ ಬಾರಿಗೆ ಸಂಪರ್ಕವಿಲ್ಲದ ಹಣ ಪಾವತಿಯನ್ನು ಬೆಂಬಲಿಸುವ 5 ಕೈಗಡಿಯಾರಗಳನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯಕ್ಕಾಗಿ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೊಂದಿಗೆ ಕೈಜೋಡಿಸಿದೆ.
ಗಡಿಯಾರದಿಂದ ಹೇಗೆ ಹಣ ಪಾವತಿಯಾಗಲಿದೆ?
ಶಾಪಿಂಗ್ ಮಾಡಿದ ಬಳಿಕ ಹಣ ಪಾವತಿಗಾಗಿ ನೀವು ಕೌಂಟರ್ ಬಳಿಗೆ ಹೋದಾಗ, ನೀವು ಕೇವಲ PoS ಯಂತ್ರದ ಬಳಿ ಹೋಗಿ Titan Pay Powered Watch ಮೇಲೆ ಟ್ಯಾಪ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಾಂಟಾಕ್ಟ್ ಲೆಸ್ ಹಣ ಪಾವತಿಯಾಗಲಿದೆ. ಸಾಮಾನ್ಯವಾಗಿ WiFi ಸೌಲಭ್ಯವಿರುವ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಯಾಗುವ ರೀತಿ ಇದರಲ್ಲಿಯೂ ಕೂಡ ಹಣ ಪಾವತಿಯಾಗಲಿದೆ. ಆದರೆ, ಕೇವಲ SBI ಡೆಬಿಟ್ ಕಾರ್ಡ್ ಹೊಂದಿದವರಿಗಾಗಿ ಮಾತ್ರ ಈ ಸೌಲಭ್ಯ ನೀಡಲಾಗಿದೆ. ರಿಸ್ಟ್ ವಾಚ್ ನಲ್ಲಿ ನೀಡಲಾಗಿರುವ ಪೇಮೆಂಟ್ ವೈಶಿಷ್ಟ್ಯ, ಸ್ಪೆಷಲ್ ಸೆಕ್ಯೂರ್ ಸರ್ಟಿಫೈಡ್ ನಿಯರ್ ಫೀಲ್ಡ್ ಕಮ್ಯೂನಿಕೆಶನ್ ಚಿಪ್(NFC) ಬಳಸಿ ಕಾರ್ಯನಿರ್ವಹಿಸುತ್ತದೆ. ಇದನ್ನು ವಾಚ್ ನ ಸ್ಟ್ರಿಪ್ ನಲ್ಲಿ ಅಳವಡಿಸಲಾಗಿದೆ. ಟೈಟನ್ ಪೆ ವೈಶಿಷ್ಟ್ಯ YONO SBI ಪಾವರ್ಡ್ ಆಗಿದೆ ಹಾಗೂ ಕೇವಲ ಪಾಯಿಂಟ್ ಆಫ್ ಸೇಲ್ಸ್ ಯಂತ್ರವಿರುವ ಶಾಪಿಂಗ್ ಅಂಗಡಿಗಳಲ್ಲಿ ಮಾತ್ರ ಇದು ಕಾರ್ಯನಿರ್ವಹಿಸಲಿದೆ.
Also Read- FDಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಿದ SBI
ಯಾವುದೇ ರೀತಿಯ PIN ಬಳಸದೆ ನೀವು ರೂ.2000ವರೆಗೆ ಶಾಪಿಂಗ್ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ಹೊಂದಿರುವವರು ಮಾತ್ರ ಟೈಟಾನ್ ಹಣ ಪಾವತಿ ವಾಚ್ ಸೌಲಭ್ಯವನ್ನು ಪಡೆಯಬಹುದು. ನೀವು 2000 ರೂಪಾಯಿಗಳವರೆಗಿನ ಹಣ ಪಾವತಿಯನ್ನು ಗಡಿಯಾರದಲ್ಲಿ ಟ್ಯಾಪ್ ಮಾಡುವ ಮೂಲಕನಿರ್ವಹಿಸಬಹುದು. ಇದಕ್ಕಾಗಿ ಯಾವುದೇ ಪಿನ್ ಅಗತ್ಯವಿರುವುದಿಲ್ಲ, ಆದರೆ 2000 ರೂಪಾಯಿಗಳಿಗಿಂತ ಹೆಚ್ಚಿನ ಪಾವತಿಯ ಮೇಲೆ ನೀವು ಪಿನ್ ನಮೂದಿಸಬೇಕಾಗುತ್ತದೆ. ಸಾಮಾನ್ಯವಾಗಿ ವೈ-ಫೈ ಸೌಲಭ್ಯದ ಡೆಬಿಟ್ ಕಾರ್ಡ್ ಪಾವತಿ ರೀತಿಯಲ್ಲಿ ಇದು ಕೂಡ ಇರಲಿದೆ.
ಈ ವಾಚ್ ಬೆಲೆ ಎಷ್ಟು?
ಟೈಟಾನ್‌ನ ಈ ಹೊಸ ಸರಣಿಯಲ್ಲಿ, ಪುರುಷರಿಗಾಗಿ ಮೂರು ರೂಪಾಂತರಗಳನ್ನು ಮತ್ತು ಮಹಿಳೆಯರಿಗಾಗಿ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಲಾಗಿದೆ. ಪುರುಷರಿಗಾಗಿ ಪ್ರಾರಂಭಿಸಲಾದ ಕೈಗಡಿಯಾರದ ಬೆಲೆ 2,995, 3,995 ಮತ್ತು 5,995 ರೂ. ನಿಗದಿಪಡಿಸಲಾಗಿದೆ. ಇದೆ ವೇಳೆ ಮಹಿಳಾ ವಾಚ್ ಬೆಲೆ 3,895 ಮತ್ತು 4,395 ರೂಗಳಿಗೆ ನಿರ್ಧರಿಸಲಾಗಿದೆ. ಕಪ್ಪು ಮತ್ತು ಕಂದು ಬಣ್ಣದ ಚರ್ಮದ ಪಟ್ಟಿಯಿಂದಾಗಿ, ಗಡಿಯಾರವು ಸಾಕಷ್ಟು ಲಕ್ಸುರಿಯಸ್ ಕಾಣುತ್ತದೆ. ಎಲ್ಲಾ ಹೊಸ ಗಡಿಯಾರಗಳು ಟೈಟಾನ್‌ನ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿವೆ.