Lalu Yadav Convicted: ಮೇವು ಹಗರಣ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೋಷಿ ಎಂದು ರಾಂಚಿಯ ಸಿಬಿಐ ನ್ಯಾಯಾಲಯ (Ranchi CBI Court) ತೀರ್ಪು ನೀಡಿದೆ. ಈ ಪ್ರಕರಣವು ಡೊರಾಂಡಾ ಖಜಾನೆಯಿಂದ (Doranda Treasury Case) 139 ಕೋಟಿ ರೂ.ಗಳನ್ನು ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದೆ, ಇದರಲ್ಲಿ ಲಾಲು ಯಾದವ್ ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಲಯ (CBI Special Court) ಅವರ ಶಿಕ್ಷೆಯನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗುವುದು ಎಂದು ಹೇಳಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಒಟ್ಟು 24 ಮಂದಿಯನ್ನು ಖುಲಾಸೆಗೊಳಿಸಿದೆ. ಮೇವು ಹಗರಣದ ಈ ದೊಡ್ಡ ಪ್ರಕರಣ 1990 ರಿಂದ 1995ರ ಅವಧಿಯಲ್ಲಿ ನಡೆದಿತ್ತು.


Lalu Yadav) ದೋಷಿ ಎಂದು ಸಾಬೀತಾಗಿದೆ. 1996 ರಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ನಕಲಿ ವೆಚ್ಚದ ವರದಿಯನ್ನು ಸಲ್ಲಿಸಿದಾಗ ಈ ವಿಷಯವು ಬೆಳಕಿಗೆ ಬಂದಿತ್ತು. ಡೊರಂಡಾ ಖಜಾನೆಯಿಂದ ಕೋಟ್ಯಂತರ ರೂಪಾಯಿ ಹಣ ಹಿಂಪಡೆದು ಪರಿಶೀಲನೆ ಮಾಡದೆ ನಕಲಿ ಖರ್ಚು ತೋರಿಸಲಾಗಿತ್ತು.


COMMERCIAL BREAK
SCROLL TO CONTINUE READING

ಈ ಹಗರಣ ಬೆಳಕಿಗೆ ಬಂದ ನಂತರ ಲಾಲು ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1970 ರ ದಶಕದ ಮಧ್ಯಭಾಗದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅವಧಿಯನ್ನು ಪೂರ್ಣಗೊಳಿಸಿದ ಜಗನ್ನಾಥ್ ಮಿಶ್ರಾ ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಇತ್ತು.


ಫೆಬ್ರವರಿ 21 ರಂದು ಲಾಲು ಯಾದವ್ ಶಿಕ್ಷೆಯನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಜೊತೆಗೆ ಡೊರಾಂಡಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಶೇಷ ಸಿಬಿಐ ನ್ಯಾಯಾಲಯವು ಸನೌಲ್ ಹಕ್, ಅನಿಲ್ ಕುಮಾರ್, ರಾಜೇಂದ್ರ ಪಾಂಡೆ, ಸಾಕೇತ್ ಲಾಲ್, ದೀನಾನಾಥ್ ಸಹಾಯ್, ರಾಮ್ ಸೇವಕ್ ಸಾಹು ಮತ್ತು ಐನುಕ್ ಹಕ್ ಅವರನ್ನು ಖುಲಾಸೆಗೊಳಿಸಿದೆ.


ಇದನ್ನೂ ಓದಿ-ಕೋವಿಡ್-19 ಲಸಿಕೆಗೆ ಆಧಾರ್ ಕಡ್ಡಾಯವಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರದ ಮಾಹಿತಿ


1996ರಲ್ಲಿ ಈ ಪ್ರಕರಣ ದಾಖಲಾದಾಗ ಒಟ್ಟು 170 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಪೈಕಿ ಇದುವರೆಗೆ 55 ಮಂದಿ ಮೃತಪಟ್ಟಿದ್ದು, 7 ಆರೋಪಿಗಳು ಸರ್ಕಾರಿ ಸಾಕ್ಷಿಗಳಾಗಿದ್ದರು. ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಇಬ್ಬರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದರು. ಪ್ರಕರಣದ 6 ಜನ ಆರೋಪಿಗಳು ಇದುವರೆಗೆ ಪತ್ತೆಯಾಗಿಲ್ಲ. 


ಇದನ್ನೂ ಓದಿ-ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಶಾರುಖ್ ಉಗುಳಿದ್ದಾರಾ? ವೈರಲ್ ವಿಡಿಯೋ ಬಗ್ಗೆ ಬಿಜೆಪಿ ಮುಖಂಡರ ಆಕ್ಷೇಪವೇನು?


ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಲಾಲು ಯಾದವ್‌ಗೆ ಒಟ್ಟು ಇಪ್ಪತ್ತೇಳುವರೆ ವರ್ಷಗಳ ಶಿಕ್ಷೆ ವಿಧಿಸಲಾಗಿದ್ದು, ಅವರು ಒಂದು ಕೋಟಿ ರೂಪಾಯಿ ದಂಡವನ್ನೂ ಪಾವತಿಸಬೇಕಾಗಿದೆ. ಈ ಪ್ರಕರಣದಲ್ಲಿ ಅಪರಾಧ ಸಾಬೀತಾದ ಕಾರಣ, ಆರ್‌ಜೆಡಿ ಮುಖ್ಯಸ್ಥರು ಅರ್ಧ ಡಜನ್‌ಗಿಂತಲೂ ಹೆಚ್ಚು ಬಾರಿ ಲಾಕಪ್‌ನಲ್ಲಿ ಕಾಲ ಕಳೆಯಬೇಕಾಗಿದೆ.


ಇದನ್ನೂ ಓದಿ-Horrific Accident: ಭಯಂಕರ ಆಕ್ಸಿಡೆಂಟ್ ನ Live Video, ನಡುರಸ್ತೇಲಿ ಟ್ರ್ಯಾಕ್ಟರ್ ಉಡಾಯಿಸಿದ ಲಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.