Lalu Prasad Yadav Latest News: ಮೇವು ಹಗರಣ, ಕೊನೆಗೂ ಲಾಲುಗೆ ಸಿಕ್ತು ಜಾಮೀನು

Lalu Prasad Yadav Latest News - ಮೇವು ಹಗರಣದಲ್ಲಿ ದುಮ್ಕಾ ಖಜಾನೆಯಿಂದ ಅಕ್ರಮವಾಗಿ ಹಣ ಹಿಂಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ RJD ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಇಂದು ಝಾರ್ಖಂಡ್ ಉಚ್ಛನ್ಯಾಯಾಲಯ ಜಾಮೀನು ನೀಡಿದೆ.

Written by - Nitin Tabib | Last Updated : Apr 17, 2021, 01:43 PM IST
  • ಮೇವು ಹಗರಣದಲ್ಲಿ ಲಾಲು ಯಾದವ್ ಗೆ ಜಾಮೀನು.
  • ಜಾರ್ಖಂಡ್ ನ್ಯಾಯಮೂರ್ತಿ ಅಮರೇಶ್ ಸಿಂಗ್ ಅವರಿಂದ ವಿಚಾರಣೆ.
  • ದುಮ್ಕಾ ಖಜಾನೆ ಅಕ್ರಮ ಹಣ ಹಿಂಪಡೆತ ಪ್ರಕರಣದ ವಿಚಾರಣೆ.
Lalu Prasad Yadav Latest News: ಮೇವು ಹಗರಣ, ಕೊನೆಗೂ ಲಾಲುಗೆ ಸಿಕ್ತು ಜಾಮೀನು title=
Lalu Prasad Yadav Latest News (File Photo - Lalu Yadav)

ರಾಂಚಿ:  Lalu Prasad Yadav Latest News - ಮೇವು ಹಗರಣ ಪ್ರಕರಣಗಳಲ್ಲಿ (Fodder Scam) ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಜಾರ್ಖಂಡ್ ಹೈಕೋರ್ಟ್ (Jharkhand High Court) ಇಂದು ಜಾಮೀನು ನೀಡಿದೆ. ಡುಮ್ಕಾ ಖಜಾನೆಯಿಂದ ಅಕ್ರಮವಾಗಿ ಹಣ ಹಿಂಪಡೆದ ಪ್ರಕರಣದಲ್ಲಿ ಇದಕ್ಕೆ ಮೊದಲು ಕೂಡ ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ದುಮ್ಕಾ ಖಜಾನೆಯಿಂದ 3.13 ಕೋಟಿ ರೂ.ಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡಿರುವ ಪ್ರಕರಣದಲ್ಲಿ ಸದ್ಯ ಹೈಕೋರ್ಟ್ ಲಾಲು ಯಾದವ್ ಅವರಿಗೆ ಜಾಮೀನು ನೀಡಿದೆ.  ಈ ಕುರಿತು ಮಾಹಿತಿ ನೀಡಿರುವ ಲಾಲು ಪ್ರಸಾದ್ ಯಾದವ್ ಪರವಕೀಲ ದೇವರ್ಷಿ ಮಂಡಲ್, ಹೆಚ್ಚಾಗುತ್ತಿರುವ ಕೊರೊನಾ ವೈರಸ್ (Coronavirus) ಪ್ರಕರಣಗಳ ಹಿನ್ನೆಲೆ ಈ ಪ್ರಕರಣದ ವಿಚಾರಣೆ ವರ್ಚ್ಯುವಲ್ ಆಗಿ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ-Maharashtra Coronavirus Update - ಮಹಾರಾಷ್ಟ್ರದಲ್ಲಿ ಲಾಕ್ಡೌನ್, ಕರ್ಫ್ಯೂ ವಿಧಿಸಿದರೂ ಕೂಡ 398 ಜನರ ಪ್ರಾಣ ತೆಗೆದ ಕೊರೊನಾ

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಝಾರ್ಖಂಡ High Court ನ್ಯಾಯಮೂರ್ತಿ ಅಪರೇಶ್ ಸಿಂಗ್, ದುಂಬಾ ಖಚಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿ ಲಾಲು ಯಾದವ್ ಅವರಿಗೆ ಜಾಮೀನು ದಯಪಾಲಿಸಿದ್ದಾರೆ. ಪ್ರಕರಣ ಸಂಖ್ಯೆ ಆರ್.ಸಿ 38ರ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆದಿದೆ. ದುಮ್ಕಾ ಖಜಾನೆಯಿಂದ ಅಕ್ರಮವಾಗಿ ಮೂರು ಕೋಟಿಗೂ ಅಧಿಕ ಹಣವನ್ನು ಹಿಂಪಡೆದ ಪ್ರಕರಣಕ್ಕೂ ಮೊದಲು ಚಾಯಿಬಾಸ್ ಹಾಗೂ ದೇವಘರ್ ಪ್ರಕರಣಗಳಲ್ಲಿ ಲಾಲು ಯಾದವ್ ಅವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ದುಮ್ಕಾ ವಂಚನೆಯ ಪ್ರಕರಣದಲ್ಲಿ ಈಗಾಗಲೇ ಹಲವು ಬಾರಿ ಲಾಲು ಯಾದವ್ ಅವರ ಜಾಮೀನು ಅರ್ಜಿಯ ಮೇಲೆ ವಿಚಾರಣೆ ನಡೆಸಲಾಗಿತ್ತು. ಆದರೆ, ಲಾಲು ಯಾದವ್ ಅವರಿಗೆ ಯಾವುದೇ ನೆಮ್ಮದಿ ಸಿಕ್ಕಿರಲಿಲ್ಲ.

ಇದನ್ನೂ ಓದಿ-Kumbh Mela: ಕರೋನಾ ಬಿಕ್ಕಟ್ಟಿನ ಮಧ್ಯೆ ಸಂತರಿಗೆ ಪ್ರಧಾನಿ ಮೋದಿ ಮಾಡಿದ ಮನವಿ ಏನು ಗೊತ್ತಾ?

ಕಳೆದ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ತಂದೆ ಲಾಲು ಯಾದವ್ ಅವರಿಗೆ ಜಾಮೀನು ಸಿಗಬೇಕು ಎಂಬ ಉದ್ದೇಶದಿಂದ ಅವರ ಪುತ್ರಿ ರಾಗಿಣಿ ಆಚಾರ್ಯ್ ತಾವು ರೋಜಾ ಕೈಗೊಳ್ಳುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದ ರಾಗಿಣಿ, ತಮ್ಮ ತಂದೆಯ ಬಿಡುಗಡೆಗಾಗಿ ತಾವು ರಂಜಾನ್ ತಿಂಗಳಿನಲ್ಲಿ ರೋಜಾ ಆಚರಿಸುವುದಾಗಿ ಹೇಳಿಕೊಂಡಿದ್ದರು. ಇದಲ್ಲದೆ ತಮ್ಮ ತಂದೆಯ ಬಿಡುಗಡೆಗೆ ಲಾಲು ಯಾದವ್ ಅವರ ಹಿರಿಯ ಪುತ್ರ ಕೂಡ ನವರಾತ್ರಿಯ ಪೂಜೆಯನ್ನು ಕೈಗೊಂಡಿದ್ದರು. ಇದಲ್ಲದೆ ಲಾಲು ಅವರ ಕಿರಿಯ ಪುತ್ರ ಹಾಗೂ ಬಿಹಾರದ ಮಾಡಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ತಮ್ಮ ತಂದೆಯ ಬಿಡುಗಡೆಗಾಗಿ ದೇವಘರ್ ತಲುಪಿದ್ದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಝಾರ್ಖಂಡ್ ನ ಮಧುಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ್ದ ತೇಜಸ್ವಿ ಯಾದವ್ ಬಾಬಾಧಾಮ್ ನಲ್ಲಿ ಬೈದ್ಯನಾಥ್ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ತಮ್ಮ ತಂದೆಯ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದರು ಎಂದೂ ಕೂಡ ಹೇಳಲಾಗುತ್ತಿದೆ. 

ಇದನ್ನೂ ಓದಿ-West Bengal Election: ಪಶ್ಚಿಮ ಬಂಗಾಳದಲ್ಲಿ ಇಂದು 5ನೇ ಹಂತದ ಮತದಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News