ನವದೆಹಲಿ :   ಮೇ 1 ರಿಂದ  18 ವರ್ಷ ಮತ್ತು ಮೇಲ್ಪಟ್ಟ  ಎಲ್ಲರೂ ಕರೋನಾ ಲಸಿಕೆ (Corona vaccine) ಹಾಕಿಸಿಕೊಳ್ಳಬಹುದಾಗಿದೆ. ಕರೊನಾ ವಿರುದ್ದದ ಸಮರದಲ್ಲಿ ಇದೊಂದು ಅತಿ ಮುಖ್ಯ ಅಸ್ತ್ರವಾಗಿದ್ದು, ಸುಮಾರು 59 ಕೋಟಿ ಜನ ಲಸಿಕೆ (Vaccination) ಪಡೆಯಲು ಅರ್ಹರಾಗುತ್ತಾರೆ. ಅಂದರೆ ಬಹುತೇಕ  ಅರ್ಧದಷ್ಟು ಜನಸಂಖ್ಯೆಗೆ ಕರೋನಾ ಲಸಿಕೆಯ ಮೊದಲ ಡೋಸ್ ಮತ್ತು ಸುಮಾರು 10 ಕೋಟಿ ಜನಸಂಖ್ಯೆಗೆ ಕರೋನಾ ಲಸಿಕೆಯ 2ನೇ ಡೊಸ್ ನೀಡಬೇಕಾಗುತ್ತದೆ.  ಈ ಕುರಿತಾದ ಅತಿ ಮುಖ್ಯ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

1. ಲಸಿಕೆಗೆ ಹೆಸರು ನೊಂದಾಯಿಸಿಕೊಳ್ಳುವುದು ಯಾವಾಗ..?
ಕರೋನಾ ಲಸಿಕೆ (COVID Vaccine) ಹಾಕಿಸಿಕೊಳ್ಳಲು ಹೆಸರು ನೋಂದಾಯಿಸಿಕೊಳ್ಳುವುದು ಅನಿವಾರ್ಯ.  ಏಪ್ರಿಲ್ 24 ರಿಂದ ಕೊವಿನ್ ಪೋರ್ಟಲ್ ಮೂಲಕ ವಾಕ್ಸಿನೇಶನ್ ಗೆ ಹೆಸರು ನೊಂದಾಯಿಸಬಹುದು. 


ಇದನ್ನೂ ಓದಿ : Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ


2. ಕರೋನಾ ಲಸಿಕೆ ಪ್ರೊಟೋಕಾಲ್ ಹೇಗೆ..?
ಈಗ ಹೇಗೆ ಕರೋನಾ ಲಸಿಕೆ ಪ್ರೋಟೋಕಾಲ್ ಇರುತ್ತದೆಯೋ ಅದೇ ರೀತಿಯಲ್ಲಿ ಮುಂದೆಯೂ ಇರಲಿದೆ.  ಕೊವಿನ್ ಪೋರ್ಟಲ್,  ಕೊವಿನ್ ಅಪ್ (Cowin App) ಮೂಲಕ ನೊಂದಾಯಿಸಿಕೊಳ್ಳಬಹುದು. ನೇರವಾಗಿಯೂ ಬರಬಹುದು. ಆದರೆ, ಮೊದಲ ಪ್ರಾಶಸ್ತ್ಯ ನೊಂದಾಯಿತ ವ್ಯಕ್ತಿಗಳಿಗಿರುತ್ತದೆ. ಹಾಗಾಗಿ, ಹೆಸರು ನೋಂದಾಯಿಸಿಕೊಂಡು ಹೋಗುವುದು ಸೂಕ್ತ.


3. ಕರೋನಾ ಲಸಿಕೆ ಎಲ್ಲಿ ಲಭ್ಯ..?
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ನಿಗದಿ ಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ (Vaccine) ಲಭ್ಯ ವಿರುತ್ತದೆ. ನೀವು ಕೋವಿನ್ ಪೋರ್ಟಲ್ ಮೂಲಕ ಹುಡುಕಿ ನಿಮ್ಮ ಹತ್ತಿರದ ಲಸಿಕಾ ಕೇಂದ್ರವನ್ನು ಹುಡುಕಬಹುದು. ಖಾಸಗೀ ಆಸ್ಪತ್ರೆಗಳಲ್ಲೂ ಕರೋನಾ ಲಸಿಕೆ ಹಾಕಲಾಗುವುದು.


ಇದನ್ನೂ ಓದಿ : Covid Vaccine Report: ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದ 21 ಸಾವಿರ ಜನರಿಗೆ ಕೊರೋನಾ ಪಾಸಿಟಿವ್!


4. ಎರಡನೇ ಡೋಸ್ ಪಡೆಯುವರ ಕಥೆ ಏನು..?
ಮೇ 1 ರ ಬಳಿಕ 18ರ ಮೇಲ್ಪಟ್ಟ ವಯೋಮಾನದವರಿಗೆ ಲಸಿಕೆ ನೀಡುವುದರಿಂದ ಈಗಾಗಲೇ ಒಂದು ಡೋಸ್ ಪಡೆದು ಎರಡನೇ ಡೋಸ್ ಗಾಗಿ ಕಾಯುತ್ತಿರುವವರ ಕಥೆ ಏನು ಎಂಬ ಪ್ರಶ್ನೆ ಉಂಟಾಗಬಹುದು. ಆ ಕುರಿತು ಯಾವುದೇ ಚಿಂತೆಗೆ ಅವಕಾಶ ಇಲ್ಲ.  ಎರಡನೇ ಡೋಸ್ ಪಡೆಯುವವರು ನಿಗದಿತ ದಿನದಂದೇ ಬಂದು ಲಸಿಕೆ ಪಡೆಯಬಹುದು. ಸೆಕೆಂಡ್ ಡೋಸ್ ಪಡೆಯುವವರಿಗೂ ಪ್ರಾಶಸ್ತ್ಯ  ಇರುತ್ತದೆ. 


5. ಐಡಿ ಕಾರ್ಡ್ ಕಡ್ಡಾಯವೇ..?
ಲಸಿಕೆ ನೊಂದಣಿ ಮತ್ತು ಲಸಿಕೆ ಹಾಕಿಸಿಕೊಳ್ಳುವಾಗ ಐಡಿ ಕಾರ್ಡ್ (Id card) ಕಡ್ಡಾಯ.


6. ಲಸಿಕೆ ಹಾಕಿಸಿಕೊಳ್ಳಲು ಫೋನ್ ನಂಬರ್ ಹೊಂದಿರುವುದು ಕೂಡಾ ಅನಿವಾರ್ಯ.  ಆದರೆ, ಒಂದೇ ಫೋನ್ ನಂಬರ್ ನಿಂದ ನಾಲ್ಕು ಜನರ ಲಸಿಕೀಕರಣಕ್ಕೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು. 


ಇದನ್ನೂ ಓದಿ : Covid-19: ಭಾರತದಲ್ಲಿ ಕರೋನಾ 2ನೇ ಅಲೆ ಯಾವಾಗ ಉತ್ತುಂಗಕ್ಕೇರಲಿದೆ? CEA ಕೆ.ವಿ.ಸುಬ್ರಮಣಿಯನ್ ಹೇಳಿದ್ದೇನು?


7. ಲಸಿಕಾ ಕೇಂದ್ರದ ಬಳಿ ಪೊಲೀಸ್ (Police), ಅರೆ ಸೇನೆ, ಹೋಂ ಗಾರ್ಡ್ ಅಥವಾ ಎನ್ ಸಿಸಿ ಕ್ಯಾಡೆಟ್ ಗಳು ಕಾವಲಿಗಿರುತ್ತಾರೆ. ಈ ಸಿಬ್ಬಂದಿಗೆ ಐಡಿ ಕಾರ್ಡ್ ಮುಂತಾದ ದಾಖಲೆಗಳನ್ನು ತೋರಿಸಬೇಕಾಗುತ್ತದೆ.


8. ಲಸಿಕೆ ಕೇಂದ್ರದಲ್ಲಿ ಕಡ್ಡಾಯವಾಗಿ ಸೋಶಿಯಲ್ ಡಿಸ್ಟೆನ್ಸಿಂಗ್ ಪಾಲಿಸಬೇಕು.  
ಮೇ 1 ರಿಂದ  ಅತಿದೊಡ್ಡ ಲಸಿಕಾ ಅಭಿಯಾನ ಆರಂಭವಾಗಲಿದ್ದು, ಲಸಿಕಾ ಕೇಂದ್ರಗಳಲ್ಲಿ (Vaccine center) ಸಾಕಷ್ಟು ಜನಜಂಗುಳಿ ಸಾಧ್ಯತೆ ಇರುತ್ತದೆ. ಜೊತೆ ಅಷ್ಟೇ ಪ್ರಮಾಣ ಕರೋನಾ ಲಸಿಕೆಯ ಲಭ್ಯತೆಯನ್ನೂ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ, ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.